ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ

ಲೋಕದರ್ಶನ ವರದಿ

ಗದಗ 12: ಗದಗ ಜಿಲ್ಲಾ  ವಾಲ್ಮೀಕಿ ನಾಯಕ ಸಂಘ ಸೇರಿದಂತೆ ಸಮಾಜದ ಸರ್ವ ಸಂಘಟನೆಗಳ ಪದಾಧಿಕಾರಿಗಳ ಹಾಗೂ ಜನರ ಸಹಕಾರದಿಂದ ಇದೇ ದಿ. 24ರಂದು ಮಹಷರ್ಿ ವಾಲ್ಮೀಕಿ ಅವರ ಜಯಂತಿಯನ್ನು ಉತ್ಸಾಹ ಹಾಗೂ ಸಂಭ್ರಮದಿಂದ ಆಚರಿಸಲು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸೂಚಿಸಿದರು.

     ಅವರ ಅಧ್ಯಕ್ಷತೆಯಲ್ಲಿಂದು ಜಿಲ್ಲಾಡಳಿತ ಭವನದಲ್ಲಿ ಜರುಗಿದ ಪೂರ್ವಸಿದ್ದತಾ ಸಭೆಯಲ್ಲಿ ಗದಗ ಜಿಲ್ಲಾ  ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಮಾಜದ ಗುರುಹಿರಿಯರು ವಾಲ್ಮೀಕಿ ಜಯಂತಿ ಆಚರಣೆ ಕುರಿತು ಸಲಹೆಗಳನ್ನು ನೀಡಿದರು. ಶ್ರೀ ಮಹಷರ್ಿ ವಾಲ್ಮಿಕಿ ಭಾವಚಿತ್ರದ ಮೆರವಣಿಗೆಯು ದಿ.24ರಂದು ಮುಂಜಾನೆ 9 ಗಂಟೆಗೆ ಡಂಬಳ ನಾಕಾದಿಂದ ಪ್ರಾರಂಭವಾಗಿ ಟಾಂಗಾ ಕೂಟ, ಜೋಡ ಮಾರುತಿ ದೇವಸ್ಥಾನ ಮಾರ್ಗವಾಗಿ ಮುಳಗುಂದ ನಾಕಾ, ಟಿಪ್ಪು ಸುಲ್ತಾನ ವೃತ್ತದಿಂದ ವಾಲ್ಮೀಕಿ ಭವನಕ್ಕೆ ಬಂದು ಸೇರಿ  ವೇದಿಕೆ ಕಾರ್ಯಕ್ರಮ 11 ಗಂಟೆಗೆ ಆರಂಭಿಸಲು ಸಭೆಯಲ್ಲಿ ನಿಧರ್ಾರಿಸಲಾಯಿತು. ಅಹ್ವಾನ ಪತ್ರಿಕೆ, ಬ್ಯಾನರ ಅಳವಡಿಕೆ, ಮೆರವಣಿಗೆ ರಥ, ಉಪನ್ಯಾಸಕರ ಹಾಗೂ ಸನ್ಮಾನಿತರ ಆಯ್ಕೆ, ಪುಸ್ತಕ ಪ್ರದರ್ಶನ, ಮುಂತಾದ ವಿಷಯಗಳ ಕುರಿತು ಸಭೆಯಲ್ಲಿ ಚಚರ್ಿಸಲಾಯಿತು.

                ಗದಗ ಬೆಟಗೇರಿ ನಗರಸಭೆಯ ವಿಶೇಷ ಘಟಕ ಅನುದಾನದಲ್ಲಿ ಮಹಷರ್ಿ ವಾಲ್ಮೀಕಿ ಭವನದಲ್ಲಿ ಮೂಲಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದ ಪೌರಾಯಕ್ತ ಮನ್ಸೂರ ಅಲಿ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ರಾಜ್ಯ ಸಕರ್ಾರ ಎಲ್ಲ ವರ್ಗಗಳ ಯುವಜನರ ಕೌಶಲ್ಯಭಿವೃದ್ಧಿ ಕಲಿಕೆಗೆ ಪ್ರತ್ಯೇಕ ಇಲಾಖೆಯನ್ನು ತೆರೆದಿದ್ದು ಪರಿಶಿಷ್ಟ ಪಂಗಡದ ಯುವಜನರಿಗೆ ಅದರಲ್ಲಿ ವಿವಿಧ ವೃತ್ತಿಗಳ  ನೈಪುಣ್ಯತೆ ತರಬೇತಿಗೆ ಅವಕಾಶವಿದೆ ಅದರ ಪ್ರಯೋಜನ ಪಡೆಯಬೇಕು. .ಪಂಗಡದ ವಿದ್ಯಾಥರ್ಿಗಳ ವಿದ್ಯಾಥರ್ಿ ವೇತನ ನಿಗದಿತ ವೇಳೇಯಲ್ಲಿ ಸಕರ್ಾರದಿಂದ ಬಿಡುಗಡೆಗೆ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

     ಸಮಾಜ ಕಲ್ಯಾಣ ಇಲಾಖೆ ಉಪ ನಿದರ್ೇಶಕ ಖಾಜಾ ಹುಸೇನ ಮುಧೋಳ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮದ ರೂಪ ರೇಷೆ ವಿವರಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಬಸವರಾಜ ಬೆಳದಡಿ, ಕಾರ್ಯದಶರ್ಿ ವೈ.ಬಿ.ಹೆಬ್ಬಾಳ, ಖಜಾಂಜಿ ಎಚ್.ಎನ್.ಚಿಗರಿ ಅಲ್ಲದೇ, ಹುಲಗಪ್ಪ ತಳವಾರ, ಡಾ. ಚಿಕ್ಕನರಗುಂದ, ಎಚ್.ಆರ್.ಜಾನಗಾರ, ಮಂಜುನಾಥ ತಳವಾರ, ವಸಂತ ಸಿದ್ದಮ್ಮನಹಳ್ಳಿ, ಹನಮಂತಪ್ಪ ಕಕ್ಕೇರಿ, ಅಯ್ಯಪ್ಪ ನಾಯ್ಕರ, ಶಿವಾನಂದ ಮಾವನ್ನವರ, ಶಿವಾನಂದ ಚೌಡಕಿ, ಅನಂತಪ್ಪ ಚಿಗರಿ, ಮಹಾಂತೇಶ ಬೆಳದಡಿ, ಶ್ರೀಕಾಂತ ಪೂಜಾರ, ಸತ್ಯಪ್ಪ ಪೂಜಾರ, ಅನಿಲ ಸಿದ್ದಮ್ಮನಹಳ್ಳಿ, ಎಫ್. ಎಚ್. ನಾಯ್ಕರ ಸೇರಿದಂತೆ ವಾಲ್ಮೀಕಿ ಸಮುದಾಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಮಾಜದ ಗುರುಹಿರಿಯರು ಸಭೆಯಲ್ಲಿ ಭಾಗವಹಿಸಿದ್ದರು.