ಬಸವನಬಾಗೇವಾಡಿ: ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ದಿಂಡವಾರ, ಉತ್ನಾಳ, ಕಾಮನಕೇರಿ, ಬೂದಿಹಾಳ ಸೇರಿದಂತೆ ಆರು ತಾಂಡಾಗಳಿಗೆ ಡಂಗುರದ ಹಾಗೂ ಧ್ವನಿ ವರ್ಧಕಗಳ ಮೂಲಕ ಪ್ರತಿಯೊಬ್ಬರು ವೈಯಕ್ತಿಕ ಶೌಚಾಲಯ ನಿಮರ್ಿಸುವಂತೆ ಸೂಚಸಲಾಗಿದೆ ಎಂದು ಪಿ ಡಿ ಓ ರಾಮನಗೌಡ ನರಸಲಗಿ ಹೇಳಿದರು.
ತಾಲೂಕಿನ ದಿಂಡವಾರ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಸಂಜೀವಿನಿ ಕನರ್ಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಸಹಯೋಗದಲ್ಲಿ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತ ದೃಷ್ಠಿಯಿಂದ ಕೇಂದ್ರ ಸಕರ್ಾರ ಜಾರಿ ಮಾಡಿರುವ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಎಲ್ಲ ಸರಕಾರಗಳು ಮನೆಗೊಂದು ಶೌಚಾಲಯ ಕಟ್ಟಿಸಿಕೊಳ್ಳಲು ಸಕರ್ಾರ ಗ್ರಾಮ ಪಂಚಾಯ್ತಿ ಅನುದಾನದಲ್ಲಿ ಪ. ಜಾತಿ ಹಾಗೂ ಪ. ಪಂಗಡದವರಿಗೆ 15 ಸಾವಿರ ಮತ್ತು ಸಾಮಾನ್ಯ ವರ್ಗದವರಿಗೆ 12ಸಾವಿರ ರೂಪಾಯಿಗಳನ್ನು ಸಹಾಯ ಧನ ನೀಡುತ್ತಿದ್ದು ಸಾರ್ವಜನಿಕರು ಅನುದಾನ ಪಡೆದುಕೊಂಡುವೈಯಕ್ತಿಕ ಶೌಚಾಲಯ ನಿಮರ್ಿಸಿಕೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಆಡಳಿತದಿಂದ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸೇರಿದಂತೆ ಇತರೆ ಸರಕಾರಿ ನೌಕರರು ಹಾಗೂ ಸಾರ್ವಜನಿಕರು ಶೌಚಾಲಯ ನಿಮರ್ಿಸಿಕೊಳ್ಳುವ ಕಟ್ಟು ನಿಟ್ಟಿನ ಆದೇಶ ಬಂದ ಹಿನ್ನೆಲೆ ಆ ಆದೇಶವನ್ನು ಉಲ್ಲಂಘಿಸಿದರೆ ನೇರವಾಗಿ ಜಿಲ್ಲಾಧಿಕಾರಿಗಳೆ ಕ್ರಮ ಜರಗಿಸಲು ಮುಂದಾಗುತ್ತಾರೆ. ಮುಂದಿನ ದಿನಗಳಲ್ಲಿ ಯಾರು ಶೌಚಾಲಯ ನಿಮರ್ಿಸಿಕೊಳ್ಳುದಿಲ್ಲ ಅಂತವರನ್ನು ಗುರುತಿಸಿ ಅವರಿಗೆ ಸರಕಾರಿ ಸವಲತ್ತುಗಳಾದ ಪಡಿತರ ಚೀಟಿ, ಆಧಾರ್ ಕಾರ್ಡ, ಮನೆಗೆ ನೀರಿನ ನಲ್ಲಿ, ಹಾಗೂ ಗ್ರಾಮ ಪಂಚಾಯತಿಯಿಂದ ಬರುವ ಸೌಲಭ್ಯಗಳನ್ನು ನಿಧರ್ಾಕ್ಷಣ್ಯವಾಗಿ ತಡೆಹಿಡಿಯಲು ನಮಗೆ ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಕೆಲವೊಂದು ಕಡೆ ಮನೆಯ ಮುಂದೇ ಜಾಗ ಇಲ್ಲದ ಸಂದರ್ಭದಲ್ಲಿ ಅಂತವರನ್ನು ಕೂಡಿಸಿ ಸರಕಾರಿ ಗೌಠಾಣಾ ಜಾಗೆಯಲ್ಲಿ ವೈಯಕ್ತಿಕವಾಗಿ ಪ್ರತಿಯೊಬ್ಬರಂತೆ ಒಂದೇ ಕಡೆ ಹತ್ತರಂತೆ ವೈಯಕ್ತಿಕ ಶೌಚಾಯಲವನ್ನು ನಿಮರ್ಿಸಿಕ್ಕೊಳ್ಳುವದಕ್ಕೆ ನಾವು ಸಹಾಯ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯನ್ನು ಬಯಲು ಶೌಚ್ಯ ಮುಕ್ತ ಜಿಲ್ಲೆಯಾಗಿ ನಿಮರ್ಾಣ ಮಾಡುವ ಜಾವಾಬ್ದಾರಿ ನಮ್ಮ ಮೇಲೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶರಣಮ್ಮ ಯಲಗೋಡ, ಮಹಿಳಾ ಸಂಘದ ಸದಸ್ಯರಾದ ಲಕ್ಷ್ಮೀಬಾಯಿ ಬಡಿಗೇರ, ಸೀತವ್ವ ಅಕ್ಕಣ್ಣವರ, ಕಸ್ತೂರಿಬಾಯಿ ಅಕ್ಕಣ್ಣವರ, ಸಿದ್ದಮ್ಮ ಕೆಂಭಾವಿ ಗ್ರಾಪಂ ಸದಸ್ಯರಾದ ಮಹಾಂತೇಶ ಮನಗೂಳಿ, ಮಲ್ಲಪ್ಪ ಕಾನಾಪೂರ, ಶಿವಕಾಂತ ಬಾಗೇವಾಡಿ, ಶಂಕರಗೌಡ ಪಾಟೀಲ, ನಾಮದೇವ ರಾಠೋಡ, ಅನೀಲ ಯಲಗೋಡ, ಗ್ರಾಪಂ ಸಿಬ್ಬಂದಿ ವಿಕಾಸ ಜೋಗಿ, ಮಲ್ಲಯ್ಯ ಗಣಿಮಠ, ರೇವಣಸಿದ್ದ ಕೋಲಕಾರ, ಸಿದ್ದು ಮಟ್ಟಿ, ಈರಣ್ಣ ಹೋಳಗಿ ಸೇರಿದಂತೆ ಆಶಾ ಕಾರ್ಯಕರ್ತರು,ಅಂಗನವಾಡಿ ಕಾರ್ಯಕರ್ತರು, ಇತರರು ಭಾಗವಹಿಸಿದ್ದರು.
ಮಹಿಳಾ ಸಬಲೀಕರಣಕ್ಕಾಗಿ ಸಂವಾದ ಕಾರ್ಯಕ್ರಮ
ಗುರುವಾರ ಬೆಳಿಗ್ಗೆ 10.30ಕ್ಕೆ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ದೇಶದ ಮಹಿಳೆಯರು ಆಥರ್ಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಬಲೀಕರಣ ಮಾಡಲು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಅಭಿವೃದ್ದಿ ಪಡಿಸುವ ಸಲುವಾಗಿ ನೇರವಾಗಿ ಮಹಿಳೆಯರ ಜೊತೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ದೇಶದ ಪ್ರತಿ ಗ್ರಾಮ ಪಂಚಾಯತಿ ಕಾಯರ್ಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಂಚಾಯತಿಯಿಂದ ಸಂಘದ ಅಭಿವೃದ್ಧಿಗೆ ಸುತ್ತು ನಿಧಿ, ತರಬೇತಿ, ಸೇರಿದಂತೆ ಇತರೆ ಅನಕೂಲತೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ಎಲ್ಲಾ ರೀತಿಯ ಕ್ರಮಗಳನ್ನು ನಾವು ಮಾಡುತ್ತೇವೆ ಎಂದು ಪಿಡಿಓ ರಾಮನಗೌಡ ನರಸಲಗಿ ತಿಳಿಸಿದರು.