ಉತ್ತರ ಪ್ರದೇಶ: ಮುಂದುವರಿದ ಡೆಂಗ್ಯೂ ಹಾವಳಿ

 ಕಾನ್ಪುರ, ನ 07:       ಉತ್ತರ ಪ್ರದೇಶದಾದ್ಯಂತ ಡೆಂಗ್ಯೂ ಹಾವಳಿಯಿದ್ದು, ಕಾನ್ಪುರ ಜಿಲ್ಲೆಯೊಂದರಲ್ಲೇ 60 ಜನರು ಮಾರಣಾಂತಿಕ ವೈರಸ್ ಗೆ ಬಲಿಯಾಗಿದ್ದಾರೆ.  ಹ್ಯಾಲೆಟ್ ಆಸ್ಪತ್ರೆಯ ಹಿರಿಯ ವೈದ್ಯ ಪ್ರೇಮ್ ಸಿಂಗ್ ಅವರ ಪ್ರಕಾರ, 2007 ರ ನಂತರ, ಈ ವರ್ಷ ಅನೇಕ ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿವೆ.   ಈ ವರ್ಷ, ಆಸ್ಪತ್ರೆಯು ಹೆಚ್ಚಿನ ಸಂಖ್ಯೆಯ ಡೆಂಗ್ಯೂ ರೋಗಿಗಳಿಗೆ ಸಾಕ್ಷಿಯಾಗಿದೆ. ಹೆಚ್ಚಿನ ಪ್ರಕರಣಗಳು ಸೋಂಕನ್ನು ದೃಢಪಡಿಸಿದ್ದು, ಸ್ವತಃ 35 ಡೆಂಗ್ಯೂ ರೋಗಿಗಳನ್ನು ದಾಖಲಿಸಿರುವುದಾಗಿ ಡಾ ಸಿಂಗ್ ಮಾಹಿತಿ ನೀಡಿದ್ದಾರೆ.  ಹಲವಾರು ಡೆಂಗ್ಯೂ ರೋಗಿಗಳು 20,000 ಕ್ಕಿಂತ ಕಡಿಮೆ ಪ್ಲೇಟ್ಲೆಟ್ಗಳನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದು, ಇಷ್ಟು ವರ್ಷಗಳ ತಮ್ಮ ಸುದೀರ್ಘ ಅನುಭವದಲ್ಲಿ ಈ ಬಾರಿ ಅತ್ಯಂತ ಕಠೋರವಾಗಿದೆ ಎಂದು ಹೇಳಿದ್ದಾರೆ.