ಮೂಡಲಗಿ: "ಮನುಕುಲಕ್ಕೆ ನೀರು ಅಗತ್ಯವಾದ ಸಂಪನ್ಮೂಲವಾಗಿದ್ದು, ಅದರ ಅಪಾರ ಪೋಲಿನಿಂದ ಜನ ಮತ್ತು ಜಾನುವಾರುಗಳು ಸಂಕಷ್ಟ ಎದುರಿಸುತ್ತಿದ್ದು ಮುಂದಿನ ದಿನಗಳಲ್ಲಿ ಅನೇಕ ತೊಂದರೆಗಳಲ್ಲಿ ಸಿಲುಕಬಾರದೆಂದರೆ ಜಲ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು" ಎಂದು ಮೂಡಲಗಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಸಿ.ಎಮ್. ಮುಗಳಖೋಡ ಕರೆ ನೀಡಿದರು.
ಅವರು ಸ್ಥಳೀಯ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆಯ್.ಕ್ಯೂ.ಎ.ಸಿ. ಅಡಿಯಲ್ಲಿ ಎನ್.ಎಸ್.ಎಸ್. ಘಟಕ ಮತ್ತು ಪುರಸಭೆ ಮೂಡಲಗಿ ಇವರ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಜಲ ಅಭಿಯಾನ ಮತ್ತು ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಗಳಾಗಿ ಮಾತನಾಡುತ್ತಾ, ಹಸಿ ಕಸ ಒಣ ಕಸ ವಿಂಗಡಣೆಯನ್ನು ಮನೆಯಿಂದಲೇ ಪ್ರಾರಂಭಿಸಿದಾಗ ಸ್ವಚ್ಛತೆಯ ಅಭಿಯಾನ ಯಶಸ್ಸು ಕಾಣಲು ಸಾಧ್ಯ ಮತ್ತು ಮಳೆನೀರು ಸಂಗ್ರಹಣೆ ಮಾಡುವದರ ಮೂಲಕ ನೀರಿನ ಪೋಲುಗಳನ್ನು ಸಾಧ್ಯವಾದಷ್ಟು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಕೈಗೊಳ್ಳಬೇಕೆಂದು ಕರೆ ನೀಡಿದರು.
ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಶಾನೂರಕುಮಾರ ಗಾಣಿಗೇರ ಮಾತನಾಡುತ್ತಾ . ಸ್ವಚ್ಛತೆ ಎನ್ನುವದು ನಮ್ಮಿಂದಲೇ ಪ್ರಾರಂಭವಾಗಬೇಕು. ಮಹಾವಿದ್ಯಾಲಯದ ನೂರಾರು ಜನ ವಿದ್ಯಾರ್ಥಿಗಳು ಬದಲಾದರೆ ಅವರ ಮನೆ, ಮನೆಯಿಂದ ಗ್ರಾಮ, ನಗರ ಹೀಗೆ ದೇಶವೇ ಸ್ವಚ್ಛತೆಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಗ್ರಾಮೀಣ ಜನರಲ್ಲಿ ಸ್ವಚ್ಚತೆ, ಅರೋಗ್ಯ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿಯನ್ನು ಮೂಡಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ಸಂಯೋಜಕರಾದ ಸಂಜೀವಕುಮಾರ ಗಾಣಿಗೇರ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಶ್ವಿನಿ, ಮಾಸ್ತಿ, ಶಿವಕುಮಾರ ನಿಂಗಪ್ಪ ಸಂಗ್ರೇಜಿಕೊಪ್ಪ ಹಾಗೂ ಇನ್ನುಳಿದ ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು. ಕುಮಾರಿ ಲಕ್ಷ್ಮೀ ಐದಮನಿ ವಂದಿಸಿದರು. ಕುಮಾರಿ ಅಶ್ವಿನಿ ಸಪ್ತಸಾಗರ ಸ್ವಾಗತಿಸಿದರು. ಕುಮಾರಿ ಸನ್ಮತಿ ಸಪ್ತಸಾಗರ ಕಾರ್ಯಕ್ರಮವನ್ನು ನಿರೂಪಿಸಿದರು.