ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಇಡಿ, ಸಿಬಿಐ ಬಳಕೆ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

  ನವದೆಹಲಿ, ಆ 22      ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಮತ್ತು ಗೃಹ ಸಚಿವ ಪಿ ಚಿದಂಬರಂ ಅವರನ್ನು ಬಂಧಿಸಿರುವ ಬಗ್ಗೆ ಕಾಂಗ್ರೆಸ್ ಗುರುವಾರ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು,  ಆಯ್ದ ಮಾಧ್ಯಮಗಳ ಮೂಲಕ ಹಿರಿಯ ಮುಖಂಡನ ಚಾರಿತ್ರ್ಯಹರಣ ಮಾಡುವ ಬದಲು ಯಾವ ಆಧಾರದಲ್ಲಿ ಅವರನ್ನು ಬಂಧಿಸಲಾಗಿದೆ ಎಂಬ ವಿಷಯವನ್ನು ಸಾರ್ವಜನಿಕರ ಮುಂದೆ ಇಡಬೇಕೆಂದು ಒತ್ತಾಯಿಸಿದೆ   

  "ಕಳೆದ ಎರಡು ದಿನಗಳಲ್ಲಿ, ಭಾರತವು ಹಾಡ ಹಗಲೇ ಪ್ರಜಾಪ್ರಭುತ್ವ ಹಾಗೂ ಕಾನೂನಿನ ನಿಯಮದ ಉಲ್ಲಂಘನೆಗೆ ಸಾಕ್ಷಿಯಾಗಿದೆ  ಆಡಳಿತಾರೂಢ ಪಕ್ಷ ವೈಯಕ್ತಿಕ ಪ್ರತೀಕಾರಕ್ಕಾಗಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡಿದೆ ಎಂದು ಕಾಂಗ್ರೆಸ್ ಮುಖಂಡರಾದ ರಣದೀಪ್ ಸಿಂಗ್ ಸುರ್ಜೆವಾಲ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು 

  ಈ ಪ್ರಕರಣವು ತನ್ನ ಮಗಳ ಕೊಲೆಗೆ ಸಂಬಂಧಿಸಿದಂತೆ ಕೇವಲ ಜೈಲಿನಲ್ಲಿರುವ ಒಬ್ಬ ಅನುಮೋದಕರ ಸಾಕ್ಷ್ಯವನ್ನು ಮಾತ್ರ ಅವಲಂಬಿಸಿದೆ  ಹೀಗಾಗಿ ಜೈಲಿನಲ್ಲಿ ಆಗಿರಬಹುದಾದ ಒಪ್ಪಂದವೇನು ಎಂಬುದನ್ನು ಸಾರ್ವಜನಿಕರು ಅರಿಯಬಹುದಾಗಿದೆ ಎಂದು ಕಿಡಿಕಾರಿದರು 

  ಸುಮಾರು 40 ವರ್ಷ ಸಾರ್ವಜನಿಕ ಬದುಕಿಗೆ ತನ್ನನ್ನು ಸಮರ್ಪಿಸಿಕೊಂಡ ವ್ಯಕ್ತಿಯನ್ನು ಮಗಳನ್ನು ಹತ್ಯೆ ಮಾಡಿ ಜೈಲು ಸೇರಿರುವ ಮಹಿಳೆಯ ಹೇಳಿಕೆಯ ಆಧಾರದಲ್ಲಿ ಬಂಧಿಸಲಾಗಿದೆ  ಅನುಮೋದನೆಯ ಹೇಳಿಕೆಯನ್ನು ಜೈಲಿನಿಂದಲೇ ಪಡೆಯಲಾಗಿದೆ ಎಂದ ಅವರು, ಐಎನ್ಎಕ್ಸ್ ಪ್ರಕರಣದಲ್ಲಿ ಚಿದಂಬರಂ ಅಥವಾ ಅವರ ಪುತ್ರ ಕಾರ್ತ ಚಿದಂಬರಂ ಪಾತ್ರವಿಲ್ಲ ಎಂದು ಹೇಳಿದರು. 

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಲಜ್ಜೆಗೇಡಿ ವರ್ತನೆ ತೋರುತ್ತಿದ್ದು, ಪ್ರತೀಕಾರ ಹಾಗೂ ದುರುದ್ದೇಶಪೂರ್ವಕವಾಗಿ ಚಿದಂಬರಂ ಅವರನ್ನು ಬಂಧಿಸಿದೆ  ಕಳೆದ 5 ವರ್ಷಗಳಿಂದ ನಡೆಸಿದ ತನಿಖೆಯಲ್ಲಿ ಯಾವುದೇ ಹುರುಳು, ಸಾಕ್ಷಿ ಸಿಗದ ಕಾರಣ ಹಿರಿಯ ಮುಖಂಡನ ಬಾಯಿ ಮುಚ್ಚಿಸಲು ಸುಳ್ಳು ಆರೋಪ ಹೊರಿಸಲಾಗಿದೆ ಎಂದು ದೂರಿದರು 

  ಕೇಂದ್ರ ಸರ್ಕಾರದ ಮಾಜಿ ಸಚಿವರನ್ನು ಬಂಧಿಸುವ ವೇಳೆ ನಡೆದ ಘಟನೆಯನ್ನು ವಿವರಿಸಿದ ಸುರ್ಜೆವಾಲ, ದೇಶದ ಅತ್ಯಂತ ಗೌರವಾನ್ವಿತ ಅರ್ಥಶಾಸ್ತ್ರಜ್ಞ, ರಾಜಕಾರಣಿ ಯಾವುದೇ ಸಂದರ್ಭದಲ್ಲಿ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧರಾಗಿದ್ದರು  ಆದಾಗ್ಯೂ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ ಅಧಿಕಾರಿಗಳನ್ನು ಕಳುಹಿಸಿ ಮಧ್ಯರಾತ್ರಿ ತರಾತುರಿಯಲ್ಲಿ ಬಂಧಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು 

  ಐಎನ್ಎಕ್ಸ್ ಪ್ರಕರಣಕ್ಕೆ ಸಂಬಂಧಿಸಿ ಕಾರ್ತಿ ಚಿದಂಬರಂ ಅವರ ನಿವಾಸದ ಮೇಲೆ ನಾಲ್ಕು ಬಾರಿ ದಾಳಿ ನಡೆಸಿ ಬಂಧಿಸಿದ್ದು, ಪ್ರಸ್ತುತ ಅವರು ಜಾಮೀನು ಪಡೆದಿದ್ದಾರೆ  20 ಸಮನ್ಸ್ ಗಳಿಗೆ ಕಾತರ್ಿ ಉತ್ತರಿಸಿದ್ದಾರೆ ಚಿದಂಬರಂ ಅವರ ವಿರುದ್ಧ ನ್ಯಾಯಾಲಯಕ್ಕೆ ಜಾರ್ಜ್ಶೀಟ್ ಸಲ್ಲಿಸಲು ತನಿಖಾಧಿಕಾರಿಗಳ ಬಳಿ ಯಾವುದೇ ಸಾಕ್ಷ್ಯವಿಲ್ಲ ಎಂದರು. 

  ಐಎನ್ಎಕ್ಸ್ 12 ವರ್ಷಗಳ ಹಿಂದೆ 2007ರಲ್ಲಿ ನಡೆದ ಪ್ರಕರಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು ಆರು ವರ್ಷಗಳ ಬಳಿಕ ಬಂಧಿಸಲಾಗಿದೆ  ಆದರೆ ಪ್ರಕರಣಕ್ಕೆ ಸಂಬಂಧಿಸಿದ ಯಾರನ್ನೂ ಬಂಧಿಸಲಾಗಿಲ್ಲ ಎಂದು ಸುರ್ಜೆವಾಲ ಆಕ್ರೋಶ ಹೊರಹಾಕಿದರು. 

  ಮಾಜಿ ಹಣಕಾಸು ಸಚಿವ ಚಿದಂಬರಂ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದ ಬಳಿಕ ಬುಧವಾರ ರಾತ್ರಿ ಅವರನ್ನು ಬಂಧಿಸಲಾಯಿತು  ಇದಕ್ಕೂ ಮುನ್ನ ದೆಹಲಿ ಹೈಕೋರ್ಟ, ಜಾಮೀನು ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು. 

  ಪ್ರಸ್ತುತ ಸಿಬಿಐ ಅಧಿಕಾರಿಗಳು ದೆಹಲಿಯ ಲೋಧಿ ರಸ್ತೆಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಚಿದಂಬರಂ ಅವರನ್ನು ವಿಚಾರಣೆಗೆ ಗುರಿಪಡಿಸಿದ್ದು, ಆನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ.