ಗೌಳಿಗರ ಹೋಳಿ ಸಂಭ್ರಮದಲ್ಲಿ ಶಾಸಕ ದೇಶಪಾಂಡೆ

	ಗೌಳಿಗರ ಹೋಳಿ ಸಂಭ್ರಮದಲ್ಲಿ ಶಾಸಕ ದೇಶಪಾಂಡೆ  MLA Deshpande at the Holi celebrations of the Gauligars

ಲೋಕದರ್ಶನ ವರದಿ 

  ದಾಂಡೇಲಿ - ಮಾ. 11 : ಹಳಿಯಾಳದಲ್ಲಿ ನಡೆದ ಗೌಳಿಗರ ಹೋಳಿ ಸಂಭ್ರಮದಲ್ಲಿ ಶಾಸಕ ಆರ್‌.ವಿ ದೇಶಪಾಂಡೆ ಗೌಳಿಗರೊಂದಿಗೆ ಬೆರೆತು ಕುಣಿದ ಘಟನೆಯ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ದಾಂಡೇಲಿಯಲ್ಲಿ ವೈರಲ್  ಆಗಿದ್ದು ಸ್ಥಳೀಯರ ಗಮನ ಸೆಳೆದಿದೆ. ಜನಪದ ಸಂಭ್ರಮದಲ್ಲಿ ಜನ ನಾಯಕ ಆರ್‌.ವಿ ದೇಶಪಾಂಡೆ ಹಳಿಯಾಳದಲ್ಲಿ ಗೌಳಿಗರ ಹೋಳಿ ಕುಣಿತಕ್ಕೆ ಜೊತೆಯಾದ ಕ್ಷಣ ಗೌಳೀಗರ ಸಾಂಪ್ರದಾಯಿಕ ಹೋಳಿ ಕುಣಿತಕ್ಕೆ ಜನ ಕೂಡಾ ಹೆಜ್ಜೆ ಹಾಕಿದರು. ಜನಪದ ವಾದ್ಯಗಳ ಧ್ವನಿ, ಬಣ್ಣಗಳ ಸಂಭ್ರಮ ಮತ್ತು ಗ್ರಾಮೀಣ ಸಂಸ್ಕ್ರತಿಯ ಉತ್ಸಾಹದ ನಡುವೆ ಶಾಸಕರು ಕೂಡಾ ಗೌಳಿಗರೊಂದಿಗಗೆ ಸೇರಿ ಕುಣಿದದ್ದು ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿತ್ತು. 

     ಗೌಳಿ ಸಮುದಾಯದ ಹೋಳಿ ಸಂಪ್ರದಾಯವು ಉತ್ತರ ಕನ್ನಡ ಜಿಲ್ಲೆಯ ವಿಶಿಷ್ಟ ಜನಪದ ಆಚರಣೆಗಳಲ್ಲಿ ಒಂದಾಗಿದೆ. ತಾಳ, ಡೊಳ್ಳು ಮತ್ತು ಜನಪದ ಹಾಡುಗಳ ಮಧೆ್ಯೆ ನಡೆಯುವ  ಈ ಕುಣಿತ ಕೇವಲ ಹಬ್ಬದ ಸಂಭ್ರಮವಷ್ಟೆಯಲ್ಲ, ಅದು ಸಮುದಾಯದ ಒಗ್ಗಟ್ಟಿನ ಪ್ರತೀಕವು ಆಗಿದೆ. ಹಳಿಯಾಳದ ಮುಖ್ಯ ರಸ್ತೆಗಳಲ್ಲಿ ನಡೆದ ಗೌಳಿಗರ ಈ  

      ಸಂಭ್ರಮದಲ್ಲಿ ಯುವಕರು, ಹಿರಿಯರು, ಉತ್ಸಾಹದಿಂದ ಭಾಗವಹಿಸಿದ್ದರು. ಸ್ಥಳೀಯ ಜನರ ನಡುವೆ ಬೆರೆತು ಅವರ ಸಾಂಪ್ರದಾಯಿಕ ನೃತ್ಯದಲ್ಲಿ ಭಾಗವಹಿಸಿದ ದೇಶಪಾಂಡೆ ಅವರಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಯಿತು. ರಾಜಕೀಯ ವೇದಿಕೆಯ ಹೊರತಾಗಿಯೂ ಜನಪದ ಸಂಸ್ಕ್ರತಿಗೆ ಗೌರವ ನೀಡಿ ಹಬ್ಬದಲ್ಲಿ ಪಾಲ್ಗೊಂಡ ಅವರ ನಡೆ ಜನರೊಂದಿಗೆ ಕುಣಿದ ನಾಯಕನ ದೃಶ್ಯ, ರಾಜಕೀಯ ಮತ್ತು ಜನಪದ ಸಂಸ್ಕ್ರತಿಯ ನಡುವಿನ ಜೀವಂತ ಸಂಪರ್ಕವನ್ನು ಮತ್ತೊಮ್ಮೆ ನೆನಪಿಸಿತು.