ಮರಿಶಾಂತವೀರ ಮಹಿಳಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯ

ಕುಷ್ಟಗಿ 21:ತಾಲೂಕಿನ ಹಿರೇಮನ್ನಾಪೂರ ಗ್ರಾಮದ ಗವಿಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಕುಷ್ಠಗಿಯ ಮರಿಶಾಂತವೀರ ಮಹಿಳಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣ ವೇದಿಕೆ ಹಾಗೂ ಗ್ರಾಮಸ್ಥರು. ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದ  ಗವಿಸಿದ್ಧೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಕುಷ್ಟಗಿಯ ಮರಿಶಾಂತವೀರ ಸ್ವತಂತ್ರ ಮಹಿಳಾ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆ ಹರಿಸುವಂತೆ ಬೇಡಿಕೆಗಳನ್ನು ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಗವಿಸಿದ್ದೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜು ಆರ್‌.ಕೆ. 0105 ಹಿರೇಮನ್ನಾಪೂರ ಇದರ ಮಾನ್ಯತೆ ನವೀಕರಣವಾಗದೇ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕುಷ್ಟಗಿಯಲ್ಲಿ ಇದೇ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮರಿಶಾಂತವೀರ ಮಹಿಳಾ ಪದವಿಪೂರ್ವ ಕಾಲೇಜು ಆರ್‌.ಕೆ.0104 ಇದರ ಮಾನ್ಯತೆ ನವೀಕರಣವಾಗಬೇಕು.  

ಸದರಿ ಎರಡೂ ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಎಸ್‌ಎಟಿಎಸ್ ಲಾಗಿನ್ ಓಪನ್ ಆಗಬೇಕು. ಸಂಬಂಧಿಸಿದ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು. ಉಭಯ ಕಾಲೇಜುಗಳ ಮಾನ್ಯತೆ ನವೀಕರಣವಾಗಿರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಗೆ ಕುಳಿತುಕೊಳ್ಳುವ ಅರ್ಹತೆಯನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿರುತ್ತಾರೆ. ಎರಡೂ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ತಾವು ಕಾಲೇಜುಗಳ ನಿರ್ವಹಣೆ ಮಾಡುತ್ತಿರುವ ಶಿಕ್ಷಣ ಸಂಸ್ಥೆಯವರ ಮೇಲೆ ಒತ್ತಡ ಹಾಕಿ, ಅಗತ್ಯ ದಾಖಲೆಗಳನ್ನು ತರಿಸಿಕೊಂಡು ಕೂಡಲೇ ಮಾನ್ಯತೆಯನ್ನು ನವೀಕರಿಸಿಕೊಡಬೇಕು. ಮಾನ್ಯತೆ ನವೀಕರಣವಾಗದ್ದಕ್ಕೆ ವಿದ್ಯಾರ್ಥಿಗಳು ಈಗಾಗಲೇ ಪ್ರಸಕ್ತ ಸಾಲಿನ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ವಂಚಿತವಾಗಿರುತ್ತಾರೆ. ತಾವು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಆದಪ್ಪ ಎಸ್ ಉಳ್ಳಾಗಡ್ಡಿಪರಸಪ್ಪ ಅಳ್ಳಳ್ಳಿ ಕತ್ತಿ ಸಣ್ಣಪ್ಪ ಲೈನದ ಕಳಕಪ್ಪ ಪುರದ ಚನ್ನಪ್ಪ ನಾಲಗಾರ ಸಂಗಪ್ಪ ಕತ್ತಿ ದೊಡ್ಡಪ್ಪ ಬಳೂಟಿಗಿ ಬಸಣ್ಣ ಬಳೂಟಿಗಿ ಹನುಮಂತ ಅಳ್ಳಳ್ಳಿ ರಂಜಾನ್ ಅಳ್ಳಳ್ಳಿ ಶರಣಪ್ಪ ಲೈನದ ದಾನಪ್ಪ ಹರಿಜನ ಹಾಗೂ ಶಾಲಾ ವಿದ್ಯಾರ್ಥಿಗಳು ಸಂಘಟನೆಯ ಎಲ್ಲಾ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.