ಹೊನ್ನಾವರ ಅರ್ಬನ್ ಬ್ಯಾಂಕಿಗೆ ರಾಜ್ಯದ ಉತ್ತಮ ಅರ್ಬನ ಬ್ಯಾಂಕ ಪ್ರಶಸ್ತಿ

ಲೋಕದರ್ಶನ ವರದಿ

ಹೊನ್ನಾವರ,20:  ಶತಮಾನೋತ್ಸವದ ಹೊಸ್ತಿಲಲ್ಲಿ ಇರುವಗ್ರಾಹಕ ಸ್ನೇಹಿಯಾಗಿರುವಜಿಲ್ಲೆಯ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಹೊನ್ನಾವರ ಅರ್ಬನ ಬ್ಯಾಂಕಿಗೆ ಉತ್ತಮ ಕಾರ್ಯನಿರ್ವಹಣೆಯನ್ನು ಪರಿಗಣಿಸಿ ರಾಜ್ಯದ ಉತ್ತಮ ಅರ್ಬನ ಬ್ಯಾಂಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಶಿಕ್ಷಕರ ಸದನ, ಕೆ.ಜಿರಸ್ತೆ ಬೆಂಗಳೂರಿನಲ್ಲಿ ನಡೆದ65ನೇ ಅಖಿಲ ಭಾರತ ಸಹಕಾರ ಸಪ್ತಾಹ-2018 ಸಮಾರಂಭದಲ್ಲಿ ಮಾನ್ಯಸಹಕಾರ ಸಚಿವರಾದ  ಬಂಡೆಪ್ಪ ಖಾಶೆಂಪೂರ ಹಾಗೂ ಮಾಜಿ ಸಚಿವರಾದ  ಎಚ್. ಕೆ ಪಾಟೀಲ ಇನ್ನಿತರಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬ್ಯಾಂಕಿನಅಧ್ಯಕ್ಷರಾದ  ರಾಘವಬಾಳೇರಿ ಹಾಗೂ ಪ್ರಧಾನ ವ್ಯವಸ್ಥಾಪಕರಾದ  ರಾಜೀವ ಶ್ಯಾನಭಾಗರವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಬ್ಯಾಂಕಿನ ಸದೃಢ ಆಥರ್ಿಕ ಮಾನದಂಡಗಳನ್ನು ಪರಿಗಣಿಸಿ ಕೆ.ಡಿ.ಸಿ.ಸಿ ಬ್ಯಾಂಕ ಕಳೆದ ಆರು ವರ್ಷಗಳಿಂದ ಸತತವಾಗಿ ಹೊನ್ನಾವರ ಅರ್ಬನ ಬ್ಯಾಂಕನ್ನು ಉತ್ತರಕನ್ನಡ ಜಿಲ್ಲೆಯಲ್ಲಿನ ಅರ್ಬನ ಬ್ಯಾಂಕುಗಳ ಪೈಕಿ ಅತೀ ಉತ್ತಮ ಅರ್ಬನ ಬ್ಯಾಂಕಎಂತಾ ಪ್ರಶಸ್ತಿ ನೀಡಿ ಗೌರವಿಸಿರುವುದನ್ನು ಸ್ಮರಿಸಬಹುದಾಗಿದೆ. ಈ ಪ್ರಶಸ್ತಿ ಬ್ಯಾಂಕಿನಗುಣಮಟ್ಟ ಹಾಗೂ ಶತಮಾನೋತ್ಸವದ ಹೊಸ್ತಿಲಲ್ಲಿ ಇರುವ ಬ್ಯಾಂಕಿನ ಕಾರ್ಯಸಾಧನೆಯ ಗರಿಯಾಗಿ ಬಂದಿದೆ. ಈ ಎಲ್ಲಾ ಸಾಧನೆಗಳಿಗೆ ನಿದರ್ೇಶಕ ಮಂಡಳದ ಸಮಯೋಜಿತ ನಿಧರ್ಾರಗಳು, ಸಿಬ್ಬಂದಿಗಳ ಪರಿಶ್ರಮ, ಶೇರುದಾರರ ಹಾಗೂ ಗ್ರಾಹಕರ ಸಹಕಾರವೇಕಾರಣಎಂತಾ ಬ್ಯಾಂಕಿನಅಧ್ಯಕ್ಷ  ರಾಘವ ಬಾಳೇರಿ ತಿಳಿಸಿದ್ದಾರೆ