ವಿಜ್ಞಾನ ವಸ್ತು ಪ್ರದರ್ಶನದಿಂದ ವಿಜ್ಞಾನಿಗಳ ಅನಾವರಣ: ಎಸ್‌.ಐ.ಕುಂದಗೋಳ

Unveiling of Scientists from Science Artifact Exhibition: S.I.Kundagola

ಕೆಎಲ್‌ಇ ಪಾಲಿಟೆಕ್ನಿಕ್‌ನಲ್ಲಿ ವಿಜ್ಞಾನ ಮತ್ತು ತಾಂತ್ರಿಕ ವಸ್ತು ಪ್ರದರ್ಶನ 

ಮಹಾಲಿಂಗಪುರ 17: ಯಾವುದೇ ಮರಕ್ಕೂ ಒಂದು ಬೇರು ಇರುವಂತೆ ವಿಜ್ಞಾನಿಗೂ ವಸ್ತು ಪ್ರದರ್ಶನ ಎಂಬ ಬೇರು ಇರುತ್ತದೆ. ಹೊಸ ವಿಜ್ಞಾನಿಗಳ ಅನಾವರಣವಾಗುವುದು ವಿಜ್ಞಾನ ವಸ್ತು ಪ್ರದರ್ಶನದಿಂದ ಎಂದು ಕೆಎಲ್‌ಇ ಸಂಸ್ಥೆಯ ಡಿಪ್ಲೋಮಾ ಕಾಲೇಜಿನ ಪ್ರಾಚಾರ್ಯ ಎಸ್‌.ಐ.ಕುಂದಗೋಳ ಹೇಳಿದರು. 

ಸ್ಥಳೀಯ ಕೆಎಲ್‌ಇ ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಿದ್ದ ವಿಜ್ಞಾನ ಮತ್ತು ತಾಂತ್ರಿಕ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಜ್ಞಾನಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಸುಪ್ತ ಪ್ರತಿಭೆ ಅಭಿವ್ಯಕ್ತಗೊಳಿಸಬೇಕು ಎಂದರು. 

ಅತಿಥಿಗಳಾಗಿ ಪಾಲ್ಗೊಂಡಿದ್ದ ಎಚ್‌.ಜಿ.ಹುದ್ದಾರ, ಎಸ್‌.ಸಿ.ಅರಗಿ, ಎಸ್‌.ಡಿ.ತಿಪ್ಪಾ, ಎ.ಕೆ.ಮಾಗಿ, ಎಸ್‌.ಕೆ.ಹಿರೇಮಠ, ಬಿ.ಎನ್‌.ಅರಕೇರಿ ಮಾತನಾಡಿ ವಿದ್ಯಾರ್ಥಿಗಳು ಸೃಜನಶೀಲರಾಗಿ, ಪ್ರತಿಭಾಶಾಲಿಯಾಗಿ ಬೆಳೆಯಲು ವಿಜ್ಞಾನ ವಸ್ತುಪ್ರದರ್ಶನ ಸಹಾಯಕವಾಗಿದ್ದು, ಇದರಲ್ಲಿ ಪಾಲ್ಗೊಳ್ಳುವ ಮೂಲಕ ಯುವ ವಿಜ್ಞಾನಿಯಾಗಿ ಹೊರಹೊಮ್ಮಬೇಕು ಎಂದರು. 

ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಸಂತೋಷ ಹುದ್ದಾರ ಭಾಗವಹಿಸಿದ್ದರು. ಸುಮಕ್ಷಾ ಭರತನಾಟ್ಯ ಪ್ರದರ್ಶಿಸಿದರು. ಕುಮಾರ ಡೋಣಿ ಪ್ರಾರ್ಥನೆ ಹಾಡಿದರು. ಸಪನಾ ಅನಿಗೋಳ ಸ್ವಾಗತಿಸಿದರು. ನಿರ್ಮಲಾ ಫಕೀರಪುರ ನಿರೂಪಿಸಿದರು. ಶಿಲ್ಪಾ ಬೀರನಗಡ್ಡಿ ವಂದಿಸಿದರು.  

ಗಮನ ಸೆಳೆದ ವಸ್ತು ಪ್ರದರ್ಶ ಮತ್ತು ನರ್ತನ: 

ಡಿಪ್ಲೋಮಾ ಕಾಲೇಜಿನ ಎಲ್ಲ ವಿಭಾಗಗಳಲ್ಲಿ ತಾಂತ್ರಿಕ ವಸ್ತು ಪ್ರದರ್ಶನ ಹಾಗೂ ಸುತ್ತಲಿನ ಹತ್ತಾರು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ಜರುಗಿತು. ಪುಟಾಣಿಗಳು ತಮ್ಮ ಮಾದರಿ ಬಗ್ಗೆ ಅಎರಳು ಹುರಿದಂತೆ ಪಟಪಟನೆ ವಿವರ ಹೇಳುವುದು ಅವರ ಪ್ರತಿಭೆಗೆ ಸಾಕ್ಷಿಯಾಗಿತ್ತು.  

ನಾನಾ ಕ್ಷೇತ್ರಗಳಿಗೆ ಅನ್ವಯಿಸುವ ನೂರಕ್ಕೂ ಹೆಚ್ಚು ಮಾದರಿಗಳು ಗಮನ ಸೆಳೆದವು. ಪ್ರೌಢಶಾಲಾ ವಿದ್ಯಾರ್ಥಿಗಳು ಸರದಿಯಲ್ಲಿ ನಿಂತು ಬೆರಗುಗಣ್ಣಿನಿಂದ ವೀಕ್ಷಿಸಿದರು. ಜೊತೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಸ್ಪರ್ಧೆ ಕೂಡ ಏರಿ​‍್ಡಸಲಾಯಿತು. ವೈಯಕ್ತಿಕ ಮತ್ತು ಸಮೂಹ ನೃತ್ಯದಿಂದ ರಂಜಿಸಿದರು. ನಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೇಸರಿಬಾತ್ ಮತ್ತು ಮಸಾಲೆ ರೈಸ್ ಭೋಜನ ಸವಿದರು.