ಕರೊನಾ ವೈರಸ್ ನಿಗ್ರಹಕ್ಕೆ “ತಾರಾ ಮಂತ್ರ” ದಿಂದ ಬ್ರಹ್ಮಾಂಡ ಪರಿಹಾರ; ದಲಾಯಿ ಲಾಮಾ ಸಲಹೆ

ಧರ್ಮಶಾಲಾ, ಜ ೨೯, ಇಡೀ ಪ್ರಪಂಚವನ್ನೇ   ವ್ಯಾಪಿಸುತ್ತಿರುವ  ಮಾರಣಾಂತಿಕ  ಕರೊನಾ ವೈರಸ್  ಸೋಂಕು  ತಡೆಗಟ್ಟಲು  ಮಂತ್ರಗಳನ್ನು  ಪಠಿಸುವಂತೆ  ಚೈನಾದಲ್ಲಿರುವ  ತನ್ನ   ಅನುಯಾಯಿಗಳಿಗೆ  ಟಿಬೆಟ್ಟಿಯನ್ನರ ಆಧ್ಯಾತ್ಮಿಕ   ಗುರು   ದಲಾಯಿ ಲಾಮಾ  ಸೂಚನೆ  ನೀಡಿದ್ದಾರೆ.ವುಹಾನ್ ನಗರದಲ್ಲಿ  ಆರಂಭಗೊಂಡ   ವೈರಸ್ ದೇಶಾದ್ಯಂತ  ಹಬ್ಬಿ  ಈವರೆಗೆ ೧೩೦ಕ್ಕೂ  ಹೆಚ್ಚು ಮಂದಿ ಮೃತಪಟ್ಟು, ಸಾವಿರಾರು ಮಂದಿ ಈ ಸೋಂಕಿನಿಂದ  ಬಾಧೆಪಡುತ್ತಿದ್ದಾರೆ.  ಇದರಿಂದ  ಚೈನಾದಲ್ಲಿರುವ   ಅವರ  ಕೆಲವು  ಭಕ್ತರು ...  ಮಾರಾಣಂತಿಕ  ವೈರಾಣು   ತಡೆಗೆ  ಏನಾದರೂ   ಸಲಹೆ ನೀಡುವಂತೆ   ಫೇಸ್  ಬುಕ್ ನಲ್ಲಿ  ದಲಾಯಿ ಲಾಮಾ ಅವರನ್ನು ಕೋರಿದ್ದರು.    ಇದಕ್ಕೆ ಪ್ರತಿಕ್ರಿಯಿಸಿರುವ  ಅವರು “ತಾರಾ ಮಂತ್ರ” ಪಠಿಸಬೇಕು ಎಂದು  ಸೂಚಿಸಿದ್ದಾರೆ. 

ವೈರಸ್ ಹರಡುವುದನ್ನು ತಡೆಯಲು ಈ ಮಂತ್ರ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.  ದಲೈ ಲಾಮಾ ಅವರು   ಸ್ವತಃ ’ಓಂ ತಾರೆ ತುತ್ತಾರೆ  ತುರೆ  ಸೋಹೊ ’ ಎಂಬ  ಮಂತ್ರ   ಪಠಿಸುವ  ಆಡಿಯೊ ಕ್ಲಿಪ್ ಅನ್ನು  ತಮ್ಮ  ಪೋಸ್ಟ್ ಗೆ ಲಗತ್ತಿಸಿದ್ದಾರೆ. ತಾರಾ ಮಂತ್ರ  ಬ್ರಹ್ಮಾಂಡ  ಪರಿಣಾಮ  ಉಂಟುಮಾಡಲಿದೆ ಎಂದು ಹೇಳಿದ್ದಾರೆ.  ಮಂತ್ರವನ್ನು ಪಠಿಸಿ ಮನಸ್ಸನ್ನು ಶಾಂತವಾಗಿರಿಸಿಕೊಂಡರೆ   ಯಾವುದೇ ತೊಂದರೆಗಳು  ಉಂಟಾಗುವುದಿಲ್ಲ ಎಂದು ದಲೈ ಲಾಮಾ ಸಲಹೆ ನೀಡಿದ್ದಾರೆ.  ಟಿಬೆಟಿಯನ್ ಆಧ್ಯಾತ್ಮಿಕ  ಗುರು,  ಸ್ವತಃ ತಮ್ಮ ಧ್ವನಿಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ದಲೈ ಲಾಮಾ  ಹೇಳಿರುವ  ಆ ಮಂತ್ರ  ಪ್ರಸ್ತುತ ಚೈನಾ ದಲ್ಲಿ ವೈರಲ್ ಆಗುತ್ತಿದೆ. ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ೧೩೦೦ ಹೊಸ  ಕರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಗಳು ವೈರಸ್‌ನ ಲಕ್ಷಣಗಳಾಗಿವೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.