ಕಂಪ್ಲಿಯಲ್ಲಿ ಬಡೇ ಸಾಹೇಬ್ ದರ್ಗಾ ಉರುಸ್-ಎ-ಷರೀಫ್ ಕಾರ್ಯಕ್ರಮ
ಕಂಪ್ಲಿ 12: ಪಟ್ಟಣದ ಹಜರತ್ ಸೈಯದ್ ಷಾ ಬಡೇ ಸಾಹೇಬ್ ಖಾದ್ರಿ ಮತ್ತು ಹಜರತ್ ಸೈಯದ್ ಷಾ ದಿವಾನೆ ಸಾಹೇಬ್ ಖಾದ್ರಿ ದರ್ಗಾದಲ್ಲಿ ಮೂರು ದಿನಗಳ ಕಾಲ ನಡೆಯುವ 237ನೇ ಉರುಸ್ ಕಾರ್ಯಕ್ರಮದಲ್ಲಿ ಎರಡನೇ ದಿನ ಉರುಸ್ ಕಾರ್ಯಕ್ರಮ ಜರುಗಿತು. ಪೀಠಾಧಿಪತಿಗಳಾದ ಸೈಯದ್ ಷಾ ಅಬುಲ್ ಹಸನ್ ಖಾದ್ರಿ ಉರುಫ್ ಅಜಂ ಸಾಹೇಬ್ ಸಜ್ಜಾದೆ ನಸೀನ್ ದಿವಾನೆಖಾನೆ ಗುರುಗಳ ಮನೆಯಿಂದ ಬೆಳಗಿನ ಜಾವ ಗಂಧವನ್ನು ಮೆರವಣಿಗೆ ಮೂಲಕ ತಂದು ದರ್ಗಾದಲ್ಲಿ ಸಮರ್ಿಸಿದರು. ಉರುಸ್ ಕಾರ್ಯಕ್ರಮದಲ್ಲಿ ಎರಡನೇ ದಿನದ ಕಾರ್ಯಕ್ರಮದಲ್ಲಿ ಧರ್ಮಗುರುಗಳೊಂದಿಗೆ ಮುಸ್ಲಿಂ ಬಾಂಧವರು ಮತ್ತು ಜನಪ್ರತಿನಿಧಿಗಳು ಭಾಗವಹಿಸಿ ಪ್ರಾರ್ಥನೆಯನ್ನು ಸಲ್ಲಿಸಿದರು. ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಅನ್ನಸಂತರೆ್ಣ ನಡೆಯಿತು. ಜ.13ರಂದು ಜಿಯಾರತ್ ಮತ್ತು ಪಲ್ಲಕ್ಕಿ ಉತ್ಸವ ದರ್ಗಾದಿಂದ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಬೆಳಗೋಡುಹಾಳು ಅಗಸಿಯ ಹತ್ತಿರದ ದಿವಾನ್‌ಖಾನೆ ಮಸೀದಿಯಲ್ಲಿ ಮುಕ್ತಾಯಗೊಳ್ಳಲಿದ್ದು, ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದೆಂದು ದರ್ಗಾ ಸಂಸ್ಥಾನ ಮಂಡಳಿ ಸದಸ್ಯರು ತಿಳಿಸಿದರು. ಜ.003: 237ನೇ ಉರುಸ್-ಎ-ಷರೀಫ್ ಕಾರ್ಯಕ್ರಮದ ಅಂಗವಾಗಿ ಬಡೇ ಸಾಬ್ ದರ್ಗಾದಲ್ಲಿ ಮುಸ್ಲಿಂ ಧರ್ಮ ಗುರುಗಳು ಹಾಗೂ ಪೀಠಾಧಿಪತಿಗಳಾದ ಸೈಯದ್ ಷಾ ಅಬುಲ್ ಹಸನ್ ಖಾದ್ರಿ ಉರುಫ್ ಅಜಂ ಸಾಹೇಬ್ ಸಜ್ಜಾದೆ ನಸೀನ್ ದಿವಾನೆಖಾನೆ ಗುರುಗಳು ಪ್ರಾರ್ಥನೆ ಸಲ್ಲಿಸಿದರು.