ಬಿಸಿಊಟ ಅಡುಗೆ ಸಿಬ್ಬಂದಿಗೆ ತರಬೇತಿ

Training for Bisi uta worers

ಯಮಕನಮರಡಿ 12: ಪ್ರಧಾನ ಮಂತ್ರಿ ಪೋಷನ ಶಕ್ತಿ ನಿರ್ಮಾಣದ ವತಿಯಿಂದ ದಿನಾಂಕ 11 ರಂದು ಸ್ಥಳೀಯ ಬಿ ಬಿ ಹಂಜಿ ಸಮುದಾಯಭವನದಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.  

ಕಾರ್ಯಕ್ರಮದಲ್ಲಿ ವಿನಾಯಕ ಪಾಟೀಲ, ತೋಟಗಾರಿಕಾ ಇಲಾಖೆ, ವಿಜಯಕುಮಾರ ಹತ್ತರಗಿ, ಆರೋಗ್ಯ ಇಲಾಖೆ ಯಮಕನಮರಡಿ, ತಾಲೂಕಾ ಶಿಕ್ಷಕರ ಸಂಘದ ಖಜಾಂಚಿ ಮನೋಜ ಶೆಟ್ಟಿ. ಸಿ ಆರ್ ಪಿ ತಳವಾರ ಇಸ್ಲಾಂಪುರ, ಬೆಳಗೇರಿ ಸಿ ಆರ್ ಪಿ ದಡ್ಡಿ, ಹತ್ತರಗಿ ಸಿ ಆರ್ ಪಿ ಜಿರಳಿ, ಯು ವಿ ಸಂಘದ ಪ್ರೌಢಶಾಲೆ ಪ್ರಧಾನ ಗುರುಗಳಾದ ಎಸ್ ಜಿ ಹೂನ್ನೂರಿ, ಹಾಗೂ ಅಗ್ನಿಶಾಮಕ ದಳ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದು ಅಡುಗೆ ಸಿಬ್ಬಂದಿಗೆ ತರಬೇತಿ ನಿಡಿದರು.  

ಈ ಸಂಧರ್ಬದಲ್ಲಿ ತೋಟಗಾರಿಕಾ ಇಲಾಖೆ ವಿನಾಯಕ ಪಾಟೀಲ ಮಾತನಾಡುತ್ತಾ ಶಾಲಾ ಆವರಣದಲ್ಲಿ ಕೈತೋಟಗಳನ್ನು ಮಾಡಿ ಪೋಷ್ಟಿಕಾಂಶದ ತಪ್ಪಲು ಪಲ್ಲೆಗಳನ್ನು ಬೆಳೆದು ಅವುಗಳಿಗೆ ಯಾವುದೇ ತರಹದ ಕಿಟನಾಶಕ ಉಪಯೋಗಿಸದೆ ಪೌಷ್ಠಿಕ ಆಹಾರ ಮೆತ್ತೆ, ಸಬಸಗಿ, ಕೋತಂಬರಿ, ಬದನೆಕಾಯಿ, ಟೋಮೋಟೊ ವಸ್ತಗಳನ್ನು ಬೆಳಸಿ ಶಾಲಾ ಮಕ್ಕಳ ಬಿಸಿಊಟಕ್ಕೆ ಬಳಸುವಲ್ಲಿ ಅಡುಗೆ ಸಿಬ್ಬಂದಿಗಳು ಒಂದಾಗಬೇಕು ಎಂದು ಹೇಳಿದರು. ಸಹಾಯಕ ನಿರ್ದೇಶಕರು ಆದ ಸವಿತಾ ಹಲಕಿ ಪ್ರಸ್ಥಾವಿಕವಾಗಿ ಮಾತನಾಡಿದರು.  

ಇದೇ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕರಾದ ವಿನಾಯಕ ಪಾಟೀಲರನ್ನು ಸನ್ಮಾನಿಸಲಾಯಿತು.