ಸ್ವಾಮಿ ವಿವೆಕಾನಂದರ 168ನೇ ಜಯಂತಿ ಆಚರಣೆ

168th Jayanti Celebration of Swami Vivekananda

ಯಮಕನಮರಡಿ 12: ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೀಜಿನ ಎನ್‌.ಎಸ್‌.ಎಸ್ ಘಟಕದ ಅಡಿಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ನಿಮಿತ್ಯವಾಗಿ ರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಯಿತು.  

ಯುವ ದಿನ ಆಚರಣೆಯ ನಿಮಿತ್ಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ  ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ.ಎ.ರಾಮನಕಟ್ಟಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಹಿರಿಯ ಉಪನ್ಯಾಸಕರಾದ ಎ.ಎ.ಕಿವಂಡಾ ಮಾತನಾಡಿ ವಿವೇಕಾನಂದರ ಜೀವನ ಬೋದನೆ ಹಾಗೂ ತತ್ವಗಳನ್ನು ಅವರ ಜೀವನದಲ್ಲಿ ನಡೆದ ದೃಷ್ಟಾಂತಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿ ಇಂದಿನ ಯುವಕರು ವಿವೇಕಾನಂದರ ಆದರ್ಶಗಳನ್ನು  ಅಳವಡಿಸಿಕೊಳ್ಳಲು ಕರೆ ನೀಡಿದರು. ಎನ್‌.ಎಸ್‌.ಎಸ್ ಕಾರ್ಯಕ್ರಮ ಅಧಿಕಾರಿ.ಬಿ.ಬಿ.ಕೊಡ್ಲಿ ಮಾತನಾಡಿ ಭಾರತೀಯ ಸಂಸ್ಕೃತಿ ಸನಾತನ ಧರ್ಮದ ಶ್ರಿಮಂತಿಕೆ  ವೇದಾಂತ ತತ್ವಗಳ ಕುರಿತು ವಿವೇಕಾನಂದರು ಜಗತ್ತಿಗೆ ತಿಳಿಸಿಕೊಟ್ಟ ಇತಿಹಾಸದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.  

ಎಸ್‌.ಆರ್ ತಬರಿ  ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ವಿವೇಕಾನಂದರ ಜೀವನ ಬಾಲ್ಯ ಹಾಗೂ ಸಾಧನೆಗಳ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕು ಎಸ್‌.ಎ.ಮಲಗೌಡನವರ ಭಾಗವಹಿಸಿ ವಂದನೆಗಳನ್ನು ಸಲ್ಲಿಸಿದರು.  

ಕಾಲೇಜಿನ ಎಲ್ಲ ಉಪನ್ಯಾಸಕರು ಮತ್ತು  ಎನ್‌.ಎಸ್‌.ಎಸ್‌.ಸ್ವಯಂ ಸೇವಕರು ಹಾಗೂ ಕಾಲೇಜಿನ ಇನ್ನುಳಿದ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು