ಗೋವಾಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ

ಪಣಜಿ, ಆಗಸ್ಟ್ 22        ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ    ಅವರು ಇಂದು ಗೋವಾಕ್ಕೆ ಆಗಮಿಸಿದ್ದಾರೆ. 

 ಅಮಿತ್ ಷಾ ಅವರನ್ನು ವಿಮಾನ ನಿಲ್ದಾಣದಲ್ಲಿ  ಗೋವಾ ಮುಖ್ಯಮಂತ್ರಿ  ಪ್ರಮೋದ್ ಸಾವಂತ್,  ಉಪ ಮುಖ್ಯಮಂತ್ರಿ ಚಂದ್ರಕಾಂತ್ ಕವಲೇಕರ್, ಶಿಷ್ಟಚಾರ ಸಚಿವ ಮೌವಿನ್ ಗೊಡಿನ್ಹೋ ಮತ್ತಿತರರು  ಆತ್ಮೀಯವಾಗಿ ಬರಮಾಡಿಕೊಂಡರು.  

    ಅಮಿತ್ ಷಾ   ಅವರು ಪಶ್ಚಿಮ ವಲಯ ಮಂಡಳಿ 24ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.  ಗುಜರಾತ್, ಮಹಾರಾಷ್ಟ್ರ, ಗೋವಾ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಡಿಯೂ ಡಮನ್ ಹಾಗೂ ದಾದ್ರಾ ನಗರ್ ಹವೇಲಿಯ ಪ್ರತಿನಿಧಿಗಳನ್ನು ಈ ಮಂಡಳಿ ಒಳಗೊಂಡಿದೆ.