ಕೋಲ್ಕತಾ, ನ 22 : ಉಮೇಶ್ ಯಾದವ್ (29 ಕ್ಕೆ 3) ಅವರ ಮಾರಕ ದಾಳಿಗೆ ನಲುಗಿದ ಪ್ರವಾಸಿ ಬಾಂಗ್ಲಾದೇಶ ತಂಡ ಹೊನಲು ಬೆಳಕಿನ ಟೆಸ್ಟ್ ಪಂದ್ಯ(ಎರಡನೇ)ದ ಪ್ರಥಮ ಇನಿಂಗ್ಸ್ ನಲ್ಲಿ ಭಾರತದ ವಿರುದ್ಧ ಆರಂಭಿಕ ಕುಸಿತ ಕಂಡಿದೆ.
ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಟೀ ವಿರಾಮದ ವೇಳೆಗೆ 21.4 ಓವರ್ ಗಳಿಗೆ ಆರು ವಿಕೆಟ್ ನಷ್ಟೆಕ್ಕೆ 73 ರನ್ ಗಳಿಸಿದೆ.
ಇಂದೋರ್ ಟೆಸ್ಟ್ ನಲ್ಲೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಬ್ಯಾಟಿಂಗ್ ವೈಫಲ್ಯದಿಂದ ಇನಿಂಗ್ಸ್ ಹಾಗೂ 130 ರನ್ ಸೋಲು ಅನುಭವಿಸಿದ್ದ ಬಾಂಗ್ಲಾದೇಶ, ಎರಡನೇ ಪಂದ್ಯದಲ್ಲೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿಕೊಂಡು ಆರಂಭಿಕ ಆಘಾತ ಅನುಭವಿಸಿದೆ.
ಯುವ ನಾಯಕ ಮೊಮಿನುಲ್ ಹಕ್ ಅವರ ಬ್ಯಾಟಿಂಗ್ ನಿಧರ್ಾರವನ್ನು ಬಾಂಗ್ಲಾ ಬ್ಯಾಟ್ಸ್ಮನ್ ಗಳು ಸಮಥರ್ಿಸಲಿಲ್ಲ. ಭಾರತದ ತ್ರಿ ವೇಗಿಗಳಾದ ಮೊಹಮ್ಮದ್ ಶಮಿ, ಉಮೇಶ್ ಯಾದವ್ ಹಾಗೂ ಇಶಾಂತ್ ಶಮರ್ಾ ಅವರ ಮಾರಕ ದಾಳಿಗೆ ಕೇವಲ 73 ರನ್ ಗಳಿಗೆ ಪ್ರಮುಖ ಆರು ವಿಕೆಟ್ ಗಳನ್ನು ಪ್ರವಾಸಿಗರು ಕಳೆದುಕೊಂಡರು.
ಶದ್ಮನ್ ಇಸ್ಲಾಮ್ 52 ಎಸೆತಗಳಿಗೆ 29 ರನ್ ಗಳಿಸಿದ್ದು ಪ್ರವಾಸಿ ತಂಡದ ಪರ ವೈಯಕ್ತಿಕ ಗರಿಷ್ಠ ರನ್ ಆಯಿತು. ಆದರೆ, ನಾಯಕ ಮೊಮಿನುಲ್ ಹಕ್, ಮೊಹಮ್ಮದ್ ಮಿಥುನ್ ಹಾಗೂ ಮುಷ್ಫಿಕರ್ ರಹೀಮ್ ಶೂನ್ಯೆಕ್ಕೆ ಔಟ್ ಆಗಿದ್ದು, ಬಾಂಗ್ಲಾದೇಶ ತಂಡೆಕ್ಕೆ ಬಹುದೊಡ್ಡ ಹೊಡೆತ ಉಂಟಾಯಿತು. ಒಂದು ಹಂತದಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಲಿಟನ್ ದಾಸ್ 24 ರನ್ ಗಳಿಸಿ ಶಮಿ ಎಸೆತದಲ್ಲಿ ಹೆಲ್ಮೇಟ್ಗೆ ಚೆಂಡು ತಗುಲಿದ ಪರಿಣಾಮ ಅವರು ಪೆವಿಲಿಯನ್ಗೆ ತೆರಳಿದರು. ಕ್ರೀಸ್ನಲ್ಲಿ ನಯೀಮ್ ಹಸನ್ ಹಾಗೂ ಇದಾಬತ್ ಹೊಸೈನ್ ಇದ್ದಾರೆ.
ಕರಾರುವಕ್ಕಾದ ಬೌಲಿಂಗ್ ಮಾಡಿದ ಉಮೇಶ್ ಯಾದವ್ ಏಳು ಓವರ್ ಬೌಲಿಂಗ್ ಮಾಡಿ 29 ರನ್ ನೀಡಿ ಮೂರು ವಿಕೆಟ್ ಪಡೆದುಕೊಂಡರು. ಇವರಿಗೆ ಸಾಥ್ ನೀಡಿದ ಇಶಾಂತ್ ಶಮರ್ಾ ಎರಡು ಹಾಗೂ ಶಮಿ ಒಂದು ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್ಟೀ ವಿರಾಮ)
ಬಾಂಗ್ಲಾದೇಶ
ಪ್ರಥಮ ಇನಿಂಗ್ಸ್: 21.4 ಓವರ್ ಗಳಿಗೆ 73/6 (ಶದ್ಮನ್ ಇಸ್ಲಾಮ್ 29, ಲಿಟನ್ ದಾಸ್ 24; ಉಮೇಶ್ ಯಾದವ್ 29 ಕ್ಕೆ 3, ಇಶಾಂತ್ ಶಮರ್ಾ 11 ಕ್ಕೆ 2, ಮೊಹಮ್ಮದ್ ಶಮಿ 22ಕ್ಕೆ 1)