ಪಟ್ಟಣಗಳತ್ತ ವಲಸೆ ಹೋಗದೆ ಸ್ವಾವಲಂಬಿಗಳಾಗಿ ಬದುಕಿ: ಉಮೇಶ ಕತ್ತಿ



ಹುಕ್ಕೇರಿ 20:  ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಒಳ್ಳೆಯ ಪ್ರತಿಭೆಗಳಿದ್ದರೂ ಅವುಗಳಿಗೆ ಯೋಗ್ಯ ಮಾರ್ಗದರ್ಶನ ಹಾಗೂ ಪ್ರೋತ್ಸಾಹವಿಲ್ಲದೆ ಎಲೆ ಮರೆಯ ಕಾಯಿಗಳಾಗಿದ್ದು ಅವುಗಳಿಗೆ ಒಳ್ಳೆಯ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕಲು ಸುವರ್ಣ ಕಾಯಕ ಕೌಶಲ್ಯಾಭಿವೃದ್ಧಿ ಯೋಜನೆ ಜಾರಿಗೆ ತಂದಿದ್ದು ಯುವಕರು ಇದರ ಸದುಪಯೋಗ ಪಡೆದುಕೊಂಡು ನಗರಗಳತ್ತ ವಲಸೆ ಹೋಗದೆ ತಮ್ಮ ಭಾಗದಲ್ಲಿ ಸಣ್ಣ ಕೈಗಾರಿಕೆ ಹಾಗೂ ಸ್ವ  ಉದ್ಯೋಗಗಳನ್ನು  ಪ್ರಾರಂಭಿಸಿ  ತಮ್ಮ ಕಾಲುಗಳ ಮೇಲೆ ನಿಂತು ಸ್ವಾವಲಂಬಿಗಳಾಗಿ ಬದುಕಲು ಶಾಸಕ, ಮಾಜಿ ಸಚಿವ ಉಮೇಶ ಕತ್ತಿ ಯುವ ಸಮೂಹಕ್ಕೆ ಕರೆ ನೀಡಿದರು.

           ಅವರು ತಾಲೂಕಿನ ಹೊಸೂರ ಗ್ರಾಮದಲ್ಲಿ ಭಾರತೀಯ ರೂರಲ್ ಡೆವ್ಹಲಪಮೆಂಟ ಫೌಂಡೇಶನ್ ಹಾಗೂ ಕೈಗಾರಿಕಾ ಮತ್ತು ಬಾಣಿಜ್ಯ ಇಲಾಖೆಯ ಸಹಯೋಗದೊಂದಿಗೆ ನಿಮರ್ಿಸಲಾದ ನೂತನ ಕಟ್ಟಡ ಮತ್ತು ಕೌಶಲ್ಯ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ರೂಪಿಸಿರುವ ಯೋಜನೆಗಳಿಗೆ ರಾಜ್ಯ ಸರಕಾರದಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲವೆಂದು ಆರೋಪಿಸಿದರು.

          ಮುಖ್ಯ ಅತಿಥಿಗಳಾಗಿ ಆಗಮಿಸಿದ  ಶಾಸಕ ಪಿ. ರಾಜು ಮಾತನಾಡಿ ರಾಜ್ಯದಲ್ಲಿ ಆರಂಭವಾಗಲಿರುವ 12 ಕೌಶಲ್ಯ ತರಬೇತಿಗಳಿಲ್ಲಿ ಇದೊಂದು. ಇವುಗಳಲ್ಲಿ ಪ್ರಥಮವಾಗಿ ಬೆಳಗಾವಿ ಜಿಲ್ಲೆಯಲ್ಲಿ ಹೊಸೂರ ಗ್ರಾಮದಲ್ಲಿ ಪ್ರಥಮವಾಗಿ ಇದು ಪ್ರಾರಂಭಗೊಂಡಿದ್ದಕ್ಕೆ ಸಂತಸ ವ್ಯಕ್ತ ಪಡಿಸಿದರು. ಪ್ರಧಾನಿ ಮೋದಿಯವರ ಸ್ಕೀಲ್ ಇಂಡಿಯಾದ ಕನಸು ನನಸು ಮಾಡಲು ಯುವಕರು ಮುಂದಾಗಬೇಕಾಗಿದೆ. ನಿರುದ್ಯೋಗಿ ಸಮಸ್ಯೆ ಹೋಗಲಾಡಿಸಲು ಕೇಂದ್ರ ಸರಕಾರ ರೂ. 500 ಕೋಟಿ ಮೀಸಲಿಟ್ಟಿದ್ದರೂ ರಾಜ್ಯದಲ್ಲಿ ಕಾರ್ಯಗತವಾಗದಿರುವ ವಿಷಾದ ವ್ಯಕ್ತ ಪಡಿಸಿದರು. ಇಂದು ಹಳ್ಳಿಗಳು ವೃದ್ಧಾಶ್ರಮವಾಗತೊಡಗಿವೆ. ಯುವಕರು ಪಟ್ಟಣದತ್ತ ಮುಖ ಮಾಡದೆ ತರಬೇತಿಯ ಸದುಪಯೋಗ ಪಡೆದುಕೊಂಡು ಹಳ್ಳಿಗಳಲ್ಲಿ ಸ್ವ ಉದ್ಯೋಗ ಸೃಷ್ಠಿಸಲು ಯುವಕರಿಗೆ ಕಿವಿಮಾತು ಹೇಳಿದರು. 

          ದಿ. ಅಕ್ಕಪ್ಪ ನಾಯಿಕ ಸರಕಾರಿ ಪ್ರೌಢ ಶಾಲೆಗೆ 2 ಎಕರೆ ಭೂದಾನ ಮಾಡಿದ ಉಮಾತಾಯಿ ನಾಯಿಕ ಇವರು ಅನಾರೋಗ್ಯವಾಗಿರುವದರಿಂದ ಅವರ ಪರವಾಗಿ ಸುಪುತ್ರ ಶಶಿಕಾಂತ ನಾಯಿಕ ದಂಪತಿಗಳನ್ನು ಶಿಕ್ಷಣ ಇಲಾಖೆ ವತಿಯಿಂದ ಸತ್ಕರಿಸಲಾಯಿತು. ಅದರಂತೆ ವೇದಿಕೆಯ ಮೇಲಿನ ಗಣ್ಯರನ್ನು ಸತ್ಕರಿಸಿ ಗೌರವಿಸಲಾಯಿತು. ಜಾನಪದ ಕಲಾವಿದೆ ಲಕ್ಷ್ಮೀ ಅರಬೆಂಚಿ ಹಾಗೂ ಸಿದ್ದು ಮೋಠೆ ತಂಡದವರಿಂದ ಜಾನಪದ ಕಲಾ ಪ್ರದರ್ಶನ ಜರುಗಿತು. 

ಚಿಕ್ಕೋಡಿ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಶಶಿಕಾಂತ ನಾಯಿಕ ಸ್ವಾಗತಿಸಿದರು. ಗಿರೀಶ ಖಡೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎಮ್ ದರಬಾರೆ ನಿರೂಪಿಸಿದರು. ಶಾಲಾ ಬಾಲಕಿಯರ ಈಶಸ್ತವನ ಹಾಗೂ ಸ್ವಾಗತ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಸಾನಿಧ್ಯ ವಹಿಸಿದ ಘೊಡಗೇರಿ ವಿರಕ್ತ ಮಠದ ಕಾಶೀನಾಥ ಸ್ವಾಮಿಗಳು ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

          ವಿಧಾನ ಸಭೆ ಮುಖ್ಯ ಸಚೇತಕ ಗಣೇಶ ಹುಕ್ಕೇರಿ, ಶಾಸಕ ದುಯರ್ೋಧನ ಐಹೊಳೆ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿದರ್ೆಶಕ ದೊಡ್ಡ ಬಸವರಾಜು, ಶ್ರೀಮತಿ ಭಾರತಿ ನಾಯಿಕ, ಸಂಗಮ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಅಣ್ಣಾಸಾಹೇಬ ಪರ್ವತರಾವ, ಶಂಕರ ಬಾಂದುಗರ್ೆ, ಜಿ.ಪಂ ಸದಸ್ಯ ಅಜರ್ುನ ನಾಯಿಕ, ಪಿಕಾರ್ಡ ಬ್ಯಾಂಕ ಅಧ್ಯಕ್ಷ ರಾಚಯ್ಯ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ.ನಾಯಿಕ, ಪರಗೌಡ ಪಾಟೀಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು.