ಕಾಗವಾಡ 27: ಶಾಂತಪಣ್ಣಾ ಮಿಜರ್ಿ ಅರ್ಬನ್ ಕೋ-ಆಫ್ ಬ್ಯಾಂಕ್, ಚಿಕ್ಕೋಡಿಯ ಉಗಾರದ 21 ಶಾಖೆ ವಾಷರ್ಿಕೋತ್ಸವ ಮತ್ತು ಗ್ರಾಹಕರ ಸಭೆ ಮಂಗಳವಾರದಂದು ಜರುಗಿತು.
ಮಂಗಳವಾರ ದಿ.25ರಂದು ಉಗಾರ ಶಾಖೆಯ ಗ್ರಾಹಕರ ಸಂಪರ್ಕ ಸಭೆ ನಿಮಿತ್ಯ ಉಗಾರ ಸಕ್ಕರೆ ಕಾಖರ್ಾನೆಯ ಅಧ್ಯಕ್ಷ ಪ್ರಫೂಲ್ ಶಿರಗಾಂವಕರ್ ಇವರು ದೀಪ ಬೆಳಿಗಿಸಿ, ಚಾಲನೆ ನೀಡಿದರು. ಈ ಶಾಖೆ ಉದ್ಘಾಟನಕ್ಕೆ ನಾನೆ ಆಗಮಿಸಿದ್ದೆ. 21 ವರ್ಷ ಬಳಿಕ ಗ್ರಾಹಕರ ಸಭೆಗೆ ನಾನೆ ಆಗಮಿಸಿದ್ದೇನೆ. ಬ್ಯಾಂಕಿನ ಗ್ರಾಹಕರ ಜತೆ ಇಟ್ಟಿರುವ ಪಾರದರ್ಶಕ ಸಂಬಂಧ ಬ್ಯಾಂಕಿನ ಎಳಿಗಿಗೆ ಕಾರಣವಾಗಿದೆ ಎಂದು ಪ್ರಫೂಲ್ ಶಿರಗಾಂವಕರ್ ಹೇಳಿದರು.
ಮಾಜಿ ಶಾಸಕ ರಾಜು ಕಾಗೆ ಮಾತನಾಡುವಾಗ ನಾನು ಕಂಡಿರುವ ಕೆಲ ಅರ್ಬನ್ ಬ್ಯಾಂಕಗಳಲ್ಲಿ ಶಾಂತಪಣ್ಣಾ ಮಿಜರ್ಿ ಬ್ಯಾಂಕು ಆದರ್ಶವಾಗಿದೆ ಎಂದರು. ಉದ್ಯಮಿಗಳಾದ ರಾಜಾಭಾವು ಶಿರಗಾಂವಕರ್, ಸಕ್ಕರೆ ಕಾಖರ್ಾನೆಯ ನಿದರ್ೇಶಕ ದೀಪಚಂದ ಶಹಾ, ಬ್ಯಾಂಕಿನ ಅಧ್ಯಕ್ಷ ಎ.ಪಿ.ಧನವಡೆ, ನಿದರ್ೇಶಕರಾದ ವೈ.ಎಸ್.ಮಿಜರ್ಿ, ಎಸ್.ಆರ್.ಪಾಟೀಲ, ಉಪಾಧ್ಯಕ್ಷ ಎಸ್.ಎಸ್.ಘರಗುಡವೆ, ಅಣ್ಣಾಸಾಹೇಬ ಸಾಂಗಲೆ, ಮುಖ್ಯ ವ್ಯವಸ್ಥಾಪಕ ಬಿ.ಎ.ಭೋಜಕರ್, ಕೆ.ಎನ್.ಕುಂಬಾರ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಉಗಾರ ಶಾಖೆ ವ್ಯವಸ್ಥಾಪಕ ವಿನಾಯಕ ಸುರೆ ಸ್ವಾಗತಿಸಿ, ವಂದಿಸಿದರು.
ಬ್ಯಾಂಕಿನ ವ್ಯವಸ್ಥಾಪಕ ಬಿ.ಎ.ಭೊಜಕರ್ ಬ್ಯಾಂಕಿನ ಆಥರ್ಿಕ ಸ್ಥಿತಿ ಬಗ್ಗೆ ಮಾಹಿತಿ ನೀಡುತ್ತ 152.19 ಕೋಟಿ ರೂ.ಠೇವಣಿ ಹಣ ಸ್ವೀಕರಿಸಿದೆ. 91.02 ಕೋಟಿ ರೂ. ಸಾಲ ವಿತರಿಸಿದ್ದೇವೆ. 31.51 ಕೋಟಿ ರೂ. ಸ್ವಂತ ಬಂಡವಾಳ ಸಂಗ್ರಹಿಸಿದ್ದೇವೆ. 187.89 ಕೋಟಿ ರೂ.ದುಡಿಯುವ ಬಂಡವಾಳವಾಗಿದೆ. 1.76 ಕೋಟಿ ರೂ. ಬ್ಯಾಂಕಿಗೆ ನಿವ್ವಳ ಲಾಭ ಲಭಿಸಿದೆ ಮತ್ತು ಸತತವಾಗಿ 'ಅ' ವರ್ಗದಲ್ಲಿ ಬ್ಯಾಂಕ್ ಮುನ್ನಡೆ ಸಾಧಿಸಿದೆ ಎಂದು ಅಧಿಕಾರಿಗಳು ಹೇಳಿದರು.