ಜಾತ್ರಾಮಹೋತ್ಸವದ ಅಂಗವಾಗಿ ಉಡಿ ತುಂಬುವ ಕಾರ್ಯಕ್ರಮ

ಲೋಕದರ್ಶನ ವರದಿ

ಬ್ಯಾಡಗಿ05: ಸಾಂಸ್ಕೃತಿಕ ದೇಶವಾಗಿರುವ ಭಾರತದಲ್ಲಿರುವಷ್ಟು ಮಹಿಳಾ ಪ್ರಧಾನ (ದೇವತೆಗಳ) ದೇವಾಲಯಗಳು ವಿಶ್ವದ ಯಾವುದೇ ರಾಷ್ಟ್ರಗಳಲ್ಲಿಲ್ಲ, ಒಂದು ಕಡೆ ಗೌರವಿಸುತ್ತಿರುವುದರ  ಜೊತೆಗೆ  ಪುರುಷ ಪ್ರಧಾನ  ಸಮಾಜ ಇತ್ತೀಚೆಗೆ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳನ್ನೆ ಸುಗುತ್ತಿರುವುದು ದುರಂತದ ಸಂಗತಿ, ಇದರಲ್ಲಿ ಯಾರನ್ನೂ ದೋಷಿಸಬೇಕೆಂಬುದು ಅರ್ಥವಾಗುತ್ತಿಲ್ಲ ಎಂದು ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರಶ್ರೀಗಳು ಖೇದ ವ್ಯಕ್ತಪಡಿಸಿದರು.

    ಪಟ್ಟಣದ ದಾನಮ್ಮದೇವಿ ಜಾತ್ರಾಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಆರು ಸಾವಿರ ಮಹಿಳೆಯರಿಗೆ ಉಡಿ ತುಂಬುವ ಆಯೋಜಿಸಲಾಗಿತ್ತು.  

    ಮಹಿಳೆಯರು ದೇಶ ಹಾಗೂ ಸಮಾಜದ ಆಧಾರಸ್ಥಂಭ ನಿರಾಕಾರಿ ದೇವತೆಗಳನ್ನು ಪೂಜಿಸುತ್ತಿರುವ ಜನರು ಮನೆಯಲ್ಲಿರುವ ಹೆಂಡತಿ, ತಾಯಿ, ತಂಗಿಯರ ಬಗ್ಗೆ ಅಗೌರವ ತೋರುತ್ತಿರುವುದು ದುರಂತದ ಸಂಗತಿ ದೇವರ ಮೇಲೆ ನಂಬಿಕೆ ಇಟ್ಟವರು ಮನೆಯಲ್ಲಿರುವವರನ್ನು ನಡೆದಾಡುವ ದೇವತೆ ಎಂಬುದಾಗಿ ಏಕೆ ತಿಳಿದುಕೊಳ್ಳುತ್ತಿಲ್ಲ..? ಎಂದು ಪ್ರಶ್ನಿಸಿದರು.

  ನಾಸ್ತಿಕತೆಯಿಂದ ಜೀವನ ನಶ್ವರ: ಮನುಷ್ಯನೊಬ್ಬ ಆಶಾ ಜೀವಿ, ನೂರಾರು ಆಸೆಗಳನ್ನಿಟ್ಟುಕೊಂಡು ತನ್ನ ಬದುಕನ್ನು ನಡೆಸುತ್ತಿದ್ದಾನೆ, ಆದರೆ ಇತ್ತೀಚೆಗೆ ನಾಸ್ತಿಕ ಮನೋಭಾವನೆ ಕೆಲ ವ್ಯಕ್ತಿಗಳು ಮಹಿಳೆಯರ ಬಗ್ಗೆ ಅಮಾನುಶ ವರ್ತನೆ ತೋರುತ್ತಿದ್ದಾರೆ ಎಂದರು.

  ಎಚ್ಚರಿಕೆ ಬದುಕು ನಡೆಸಿ: ಮಹಿಳೆಯರು ಕನಿಷ್ಠ ಬುದ್ಧಿಯನ್ನು ಪ್ರಚುರಪಡಿಸುವುದರಿಂದ ಕುಟುಂಬಕ್ಕಾಗಿ ತೋರಿದಂತಹ ತ್ಯಾಗದ ಬದುಕು ನಗಣ್ಯವೆನಿಸುತ್ತಿದೆ, ಪುರುಷನ ಪ್ರತಿಯೊಂದು ಸಾಧನೆಯ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತೊಂದಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಅಪರಾಧ ಪ್ರಕರಣಗಳ ಹಿಂದೆ ಮಹಿಳೆಯರ ಕೈವಾಡವಿರುತ್ತಿದೆ, ಆರೋಗ್ಯವಂತ ಸಮಾಜ ಯಾವುದೇ ಕಾರಣಕ್ಕೂ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ನೈತಿಕವಾಗಿ ದುರ್ಬಲವಾಗುತ್ತಿರುವ ಮನುಷ್ಯ: ಶಶಿಕಲಾ ಪಾಟೀಲ ಮಾತನಾಡಿ, ಮನುಷ್ಯನಲ್ಲಿನಲ್ಲಿರುವ ಸ್ವಾರ್ಥ ಪರ ಬದುಕು ಪ್ರಸ್ತುತ ಸಮಾಜವನ್ನು ವಿಘಟನೆಯತ್ತ ಕೊಂಡೊಯ್ಯುತ್ತಿದೆ, ತಾತ್ಕಾಲಿಕ ಸುಖದೆಡೆಗೆ ಮುಖ ಮಾಡಿರುವ ಜನರು ಧಾಮರ್ಿಕ ನಂಬಿಕೆ ಮತ್ತು ಮಾನವೀಯ ಮೌಲ್ಯ ಕಳೆದುಕೊಳ್ಳುತ್ತಿದ್ದು ನೈತಿಕವಾಗಿ ದುರ್ಬಲರಾಗುತ್ತಿದ್ದಾರೆ ಎಂದರು.

  6 ಸಾವಿರ ಮಹಿಳೆಯರಿಗೆ ಉಡಿ ತುಂಬಿದ ಕಾರ್ಯಕರ್ತರು: ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 6 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ದೇವಸ್ಥಾನ ಸಮಿತಿ ಕಾರ್ಯಕರ್ತರಿಂದ ಉಡಿ ತುಂಬುವ ಕಾರುಕ್ರಮ ವ್ಯವಸ್ಥಿತವಾಗಿ ನಡೆಯಿತು.

 ವೇದಿಕೆಯಲ್ಲಿ ಅಬಕಾರಿ ಸಹಾಯಕ ನಿದರ್ೇಶಕಿ ಆಸಿಫಿಯಾಬಾನು, ಲಿಂಗನಗೌಡ ಪಾಟೀಲ, ಅಡಿವೆಪ್ಪ ಎಲಿ, ಎಲ್.ಆರ್.ಮೇಲಗಿರಿ, ಶಿವಯೋಗೆಪ್ಪ ಶೆಟ್ಟರ, ಶಾಂತಮ್ಮ ಮೇಲ್ಮುರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪಟ್ಟಣದ ದಾನಮ್ಮದೇವಿ ಜಾತ್ರಾಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಆರು ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರಶ್ರೀಗಳು ಮಾತನಾಡಿದರು.