ಯುಎಸ್ ಓಪನ್: ಸೇರೆನಾ ಇನ್- ವೀನಸ್ ಔಟ್

ನ್ಯೂಯಾರ್ಕ್, ಆ 29  ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಟೂರ್ನಿಯಲ್ಲಿ ಸೇರೆನಾ ವಿಲಿಯಮ್ಸ್ ಮೂರನೇ ಸುತ್ತಿಗೆ ಪ್ರವೇಶ ಮಾಡಿದರೆ ತಂಗಿ ವೀನಸ್ ವಿಲಿಯಮ್ಸ್ ಎರಡನೇ ಸುತ್ತಿನಲ್ಲಿ ಸೋತು ಸ್ಪರ್ದೆಯಿಂದ ಹೊರ ನಡೆದಿದ್ದಾರೆ. 

ಅಮೆರಿಕದ ವೀನಸ್ ವಿಲಿಯಮ್ಸ್ ಅವರು ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಎರಡನೇ ಸುತ್ತಿನಲ್ಲಿ ಉಕ್ರೈನ್ನ ಐದನೇ ಶ್ರೇಯಾಂಕಿತೆ ಎಲೀನಾ ಸ್ವಿಟೋಲಿನಾ ವಿರುದ್ಧ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.  

ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ ವಿನಸ್ ವಿಲಿಯಮ್ಸ್ ಅವರು 4-6, 4-6 ಅಂತರದಲ್ಲಿ ನೇರ ಸೆಟ್ಗಳಿಂದ ಸ್ವಿಟೋಲಿನಾ ವಿರುದ್ಧ ಸೋತು ನಿರಾಸೆ ಅನುಭವಿಸಿದರು.  

ಮತ್ತೊಂದು ಮಹಿಳೆಯರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಸೇರೆನಾ ವಿಲಿಯಮ್ಸ್ ಅವರು ತನ್ನದೇ ದೇಶ 17ರ ಪ್ರಾಯದ ಆಟಗಾರ್ತಿ ಕ್ಯಾಥರಿನ್ ಮೆಕ್ನಲ್ಲಿ ವಿರುದ್ಧ 5-7, 6-3, 6-1 ಅಂತರದಲ್ಲಿ ಗೆದ್ದು ಮೂರನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ.