ಯುಎಸ್ ಓಪನ್: ಡಿವಿಜ್ ಶರಣ್ ಜೋಡಿಗೆ ಮೊದಲನೇ ಸುತ್ತಿನಲ್ಲೇ ಸೋಲು

 ನ್ಯೂಯಾರ್ಕ್, ಆ 30       ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ನಲ್ಲಿ ಭಾರತದ ಡಿವಿಜ್ ಶರಣ್ ಹಾಗೂ ಮಂಗೋಲಿಯಾದ ಹ್ಯೂಗೋ ನೀಸ್ ಜೋಡಿಯು ಮೊದಲನೇ ಸುತ್ತಿನ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರ ನಡೆದಿದೆ. ಯುಎಸ್ಟಿಎ ಬಿಲ್ಲಿ ಜೀನ್ ಕಿಂಗ್ ನ್ಯಾಷನಲ್ ಟೆನಿಸ್ ಸೆಂಟರ್ನಲ್ಲಿ ಒಂದು ಗಂಟೆ 12 ನಿಮಿಷಗಳ ಕಾಲ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಸ್ಪೇನ್ನ ರಾಬರ್ಟೂ ಕಾರ್ಬಲ್ಸ್ ಬೇನಾ ಹಾಗೂ ಜತೆಗಾರ ಅರ್ಜೆಂಟೀನಾದ ಫೆಡ್ರಿಕೊ ಡೆಲ್ಬೊನಿಸ್ ಜೋಡಿಯು 6-4, 6-4 ಅಂತರದಲ್ಲಿ ನೇರ ಸೆಟ್ಗಳಿಂದ ಡಿವಿಜ್ ಶರಣ್ ಹಾಗೂ ಹ್ಯೂಗೋ ನೀಸ್ ಜೋಡಿಯನ್ನು ಮಣಿಸಿತು. ಆ ಮೂಲಕ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿತು.  ಕಾರ್ಬಲ್ಸ್ ಹಾಗೂ ಫೆಡ್ರಿಕೊ ಜೋಡಿಯು ಮೊದಲ ಸರ್ವಿಸ್ನಲ್ಲಿ ಶೇ. 79 ರಷ್ಟು ಅಂಕಗಳನ್ನು ಹಾಗೂ ಎರಡನೇ ಸರ್ವಿಸ್ನಲ್ಲಿ ಶೇ 67 ರಷ್ಟು ಅಂಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಡಿತು. ಈ ಜೋಡಿಯು ಏಳು ಬ್ರೇಕಿಂಗ್ ಪಾಯಿಂಟ್ಗಳಲ್ಲಿ ಎರಡರಲ್ಲಿ ಜಯ ಸಾಧಿಸಿದೆ.  ಶರಣ್ ಹಾಗೂ ನೀಸ್ ಜೋಡಿಯು ಮೊದಲನೇ ಸವರ್ಿಸ್ನಲ್ಲಿ ಶೇ 62 ರಷ್ಟು ಅಂಕಗಳು ಮತ್ತು ಎರಡನೇ ಸರ್ವಿಸ್ನಲ್ಲಿ ಶೇ 69 ರಷ್ಟು ಅಂಕಗಳನ್ನು ಗೆದ್ದಿತು. 19ರಲ್ಲಿ 11 ತಪ್ಪುಗಳನ್ನು ಈ ಜೋಡಿ ಎಸಗಿತು. ಎರಡನೇ ಸೆಟ್ನಲ್ಲಿ 20ರಲ್ಲಿ ಒಂಬತ್ತು ತಪ್ಪುಗಳನ್ನು ಮಾಡಿತು.