ಲೋಕದರ್ಶನ ವರದಿ
ಬೆಳಗಾವಿ, 6: ಪದವಿ ಶಿಕ್ಷಣ ಕೇವಲ ನಿರುದ್ಯೋಗಿಗಳನ್ನು ಸೃಷ್ಟಿಸುವ ಶಿಕ್ಷಣವಾಗದೇ, ಅದು ಉದ್ಯೋಗ ನೀಡಿ, ಸಾಮಾಜಿಕ ಕಳಕಳಿ ಮೂಡುವಂತಾಗಬೇಕು. ಇಂದಿನ ಶಿಕ್ಷಣ ಪದವಿ ನೀಡುವುದಕ್ಕೆ ಮಾತ್ರ ಸೀಮಿತವಾಗಿರುವುದರಿಂದಡ ಅದನ್ನು ಬದಲಾಯಿಸಿ, ನೂತನ ಪದವಿ ಶಿಕ್ಷಣ ನೀತಿಯನ್ನು ಜಾರಿಗೋಳಿಸಲು ಯುಜಿಸಿ ಮುಂದಾಗಿದೆ ಎಂದು ಕುಲಪತಿ ಪ್ರೊ.ಶಿವಾನಂದ ಹೊಸಮನಿ ಹೇಳಿದರು.
ಬುಧವಾರ ಆರ್ಸಿಯು ವಿದ್ಯಾಸಂಗಮದ ಕುವೆಂಪು ಸಭಾಭವನದಲ್ಲಿ ರಾಣಿ ಚನ್ನಮ್ಮ ವಿವಿ ವ್ಯಾಪ್ತಿಯ ಪದವಿ ಕಾಲೇಜಗಳ ಶಿಕ್ಷಣ ಸದಸ್ಯರ ಮಂಡಳಿ ಸದಸ್ಯರಿಗೆ ಆಯೋಜಿಸಿದ್ದ ಆಯ್ಕೆ ಆಧಾರಿತ ಕ್ರೆಡಿಟ್ ವ್ಯವಸ್ಥೆ (ಸಿಬಿಸಿಎಸ್) ಒಂದು ದಿನದ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪದವಿ ಹಂತದಲ್ಲಿ ವಿದ್ಯಾಥರ್ಿಗಳಿಗೆ ಅವರ ಆಸಕ್ತಿ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲು ಯುಜಿಸಿ ಹೊಸ ನೀತಿಯನ್ನು ಜಾರಿಗೊಳಿಸುತ್ತಿದೆ ಎಂದರು.
ಇಂದಿನ ಪದವಿಧರ ಯುವಕರು ನಿರುದ್ಯೋಗಿಗಳಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಶೋಚನೀಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಹೊಸ ಪದವಿ ಶಿಕ್ಷಣ ನೀತಿಯಿಂದ ವಿದ್ಯಾಥರ್ಿಗಳಲ್ಲಿರುವ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಗುತರ್ಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾಯರ್ಾಗಾರದಲ್ಲಿ ಭಾಗವಹಿಸಿದ್ದ ಕುಲಸಚಿವ ಡಾ.ಸಿದ್ದು ಅಲಗೂರ ಮಾತನಾಡಿ, ರಾಷ್ಟ್ರ ನಿಮರ್ಾಣದಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಯುಜಿಸಿಯು ಪದವಿ ಹಂತದಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡಲು ಹೊಸ ಪಠ್ಯ ಕ್ರಮ ಜಾರಿಗೆ ತರುತ್ತಿದೆ ಎಂದು ತಿಳಿಸಿದ ಅವರು, ಯುಜಿಸಿ ಮಾರ್ಗದರ್ಶನದಲ್ಲಿ ನಮ್ಮ ವಿವಿ ವ್ಯಾಪ್ತಿಯ ಪದವಿ ಶಿಕ್ಷಣ ಪಠ್ಯ ಯಾವ ರೀತಿ ರೂಪಗೊಳ್ಳಬೇಕೆಂದು ಒಂದು ಸಮಿತಿ ರಚಿಸಲಾಗಿದೆ. ಅದು ರೂಪಿಸಿರುವ ಪಠ್ಯವನ್ನು ಚಚರ್ಿಸಲು ಇಂದು ಶಿಕ್ಷಣ ಮಂಡಳಿ ಸದಸ್ಯರಿಗೆ ಕಾಯರ್ಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಕುಲಸಚಿವರು ರಾಣಿ ಚನ್ನಮ್ಮ ವಿವಿಯ ಸಮಿತಿ ರಚಿಸಿದ ರೂಪರೇಷೆಯನ್ನು ಸವಿಸ್ತಾರವಾಗಿ ಪ್ರಾತ್ಯೇಕ್ಷಿಕವಾಗಿ ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಿಜಿ ನಿದರ್ೇಶಕ ಪ್ರೊ.ಸಾಬಣ್ಣ ತಳವಾರ, ಇಂದು ವಿದ್ಯಾಥರ್ಿಗಳಿಗೆ ನೀಡುತ್ತಿರುವ ಶಿಕ್ಷಣ ಎಷ್ಟು ಉಪಯುಕ್ತವಾಗಿದೆ ಎಂದು ಯೋಚಿಸಬೇಕಾದ ಸಮಯ ಬಂದಿದೆ. ಪದವಿ ಶಿಕ್ಷಣ ಪಡೆದವರು ಇಂದು ಕಡಿಮೆ ವೇತನದಲ್ಲಿ ಕಡಿಮೆ ದಜರ್ೆ ಉದ್ಯೋಗ ಮಾಡುವ ಪರಿಸ್ಥಿತಿ ಬಂದೊದಗಿದೆ ಎಂದರು. ರಾಣಿ ಚನ್ನಮ್ಮ ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಸಿಬಿಸಿಎಸ್ ಯಾವ ರೀತಿ ರೂಪಿಸಿ, ಹೇಗೆ ಜಾರಿಗೊಳಿಸಬೇಕೆಂದು ಯೋಜಿಸಲು ಈ ಕಾಯರ್ಾಗಾರವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಸಮಿತಿ ಚೇರಮನ್ನ ಪ್ರೊ.ಎನ್.ಎಚ್.ಆಯಚಿತ್ ಕಾಯರ್ಾಗಾರವನ್ನು ಉದ್ದೇಶಿಸಿ ಮಾತನಾಡಿದರು. ಮಧ್ಯಾಹ್ನ ಸಿಬಿಸಿಎಸ್ ಜಾರಿ ಕುರಿತು ಚಚರ್ೆ ನಡೆಸಲಾಯಿತು.
ಕಾಯರ್ಾಗಾರದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ರಂಗರಾಜ ವನದುರ್ಗ, ಪ್ರೊ.ವಾಯ್.ಎಸ್.ಬಲವಂತಗೋಳ ಹಾಗೂ ರಾಣಿ ಚನ್ನಮ್ಮ ವಿವಿ ವ್ಯಾಪ್ತಿಯ ವಿಜಯಪುರ, ಬಾಗಲಕೋಟ ಹಾಗೂ ಬೆಳಗಾವಿ ಪದವಿ ಶಿಕ್ಷಣ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಡಾ.ಶೋಭಾ ನಾಯಿಕ ಸ್ವಾಗತಿಸಿ, ನಿರೂಪಿಸಿದರು. ಪ್ರೊ.ಆರ್.ಎನ್.ಮನಗುಳಿ ವಂದಿಸಿದರು.