ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
Two-wheeler thieves arrested: 14 vehicles worth Rs 6.10 lakh seized
ಬೆಳಗಾವಿ : ದ್ವಿಚಕ್ರವಾಹನ ಕಳ್ಳತನ ಮಾಡುತ್ತಿದ್ದ ತಂಡವನ್ನು ಪತ್ತೆ ಮಾಡಿರುವ ಸಂಕೇಶ್ವರ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 6 ಖದೀಮರನ್ನು ಬಂಧಿಸಿ, ಅವರಿಂದ ಒಟ್ಟು 14 ದ್ವಿಚಕ್ರ ವಾಹನಗಳನ್ನು ಹಾಗೂ ಸಿ.ಇ.ಐ.ಆರ್ ಪೊರ್ಟಲ ಸಹಾಯದಿಂದ 14 ಮೊಬೈಲಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದರು.
ಶನಿವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಳ್ಳತನ ಪ್ರಕರಣದಲ್ಲಿ ಅಮೀತ ಬಸವರಾಜ ಕೋಳಿ (21, ಸಾ: ವಡ್ರಾಳ ಹುಕ್ಕೇರಿ ತಾಲೂಕು, ಹಾಲಿ ; ಮುತ್ನಾಳ ತಾ: ಗಡಹಿಂಗ್ಲಜ ಜಿ: ಕೊಲ್ದಾಪೂರ ಮಹಾರಾಷ್ಟ್ರ, ಆನಂದ ಯಲ್ಲಪ್ಪಾ ಘಸ್ತಿ (ಸಾ: ಮುತ್ನಾಳ ತಾ: ಗಡಹಿಂಗ್ಲಜ ಜಿ: ಕೊಲ್ಲಾಪೂರ ಮಹಾರಾಷ್ಟ್ರ ರಾಜ್ಯ) ಇವರನ್ನು ಬಂಧಿಸಲಾಗಿದೆ.
ದಿ.1 ರಂದು ಗಿರೀಶ ತುಕಾರಾಮ ಸತ್ಯನಾಯಕ (47 ಸಾ: ಭೀಮ ನಗರ ಸಂಕೇಶ್ವರ) ಇವರು ಕೊಟ್ಟ ದೂರಿನಲ್ಲಿ ತನ್ನ ಹಿರೋ ಸ್ಟೆಂಡರ ಪ್ರೋ ಮೋಟಾರ ಸೈಕಲ ನಂ: ಕೆಎ23/ಇಎಲ್3135 ನೇದ್ದನ್ನು ಸಂಕೇಶ್ವರ ಪಟ್ಟಣದಲ್ಲಿ ನಿಲ್ಲಿಸಿದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಕೊಟ್ಟ ದೂರನ್ನು ಸಂಕೇಶ್ವರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 36/2026 ಕಲಂ: 303(2) ಬಿ.ಎನ್.ಎಸ್ 2023 ನೇದ್ದಕ್ಕೆ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇತ್ತು.
ಸದರಿ ಪ್ರಕರಣದ ಪತ್ತೆ ಕುರಿತು ಕೆ. ರಾಮರಾಜನ್ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಬೆಳಗಾವಿ , ಆರ್ ಬಿ ಬಸರಗಿ ಹೆಚ್ಚುವರಿ ಎಸ್.ಪಿ ಬೆಳಗಾವಿ ಮತ್ತು ರವಿ ಡಿ ನಾಯ್ಕ ಡಿ.ಎಸ್.ಪಿ. ಗೋಕಾಕ ಉಪವಿಭಾಗ ಹಾಗೂ ವಿರೇಶ ದೊಡಮನಿ ಡಿ.ಎಸ್.ಪಿ ಡಿ.ಸಿ.ಆರ್.ಬಿ ಬೆಳಗಾವಿರವರ ಮಾರ್ಗದರ್ಶನದಲ್ಲಿ ಸಂಕೇಶ್ವರ ಪೊಲೀಸ ಠಾಣೆಯ ಪೊಲೀಸ ನಿರೀಕ್ಷಕರಾದ ಗಣಪತಿ ಕೊಂಗನೊಳ್ಳಿ ಹಾಗೂ ಪಿ.ಎಸ್.ಐ ರವರಾದ ವಿಠಲ ನಾಯಿಕ ಪಿ.ಎಸ್.ಐ (ಕಾ&ಸು) ರವರ ನೇತೃತ್ವದಲ್ಲಿ ಸಿ ಜೆ ಸಾರಾಪೂರೆ ಎ.ಎಸ್.ಐ. ಹಾಗೂ ಸಿಬ್ಬಂದಿ ಜನರ ತಂಡ ರಚನೆ ಮಾಡಿ ಮೋಟಾರ ಸೈಕಲ ಕಳ್ಳತನ ಮಾಡಿದ ಪ್ರಕರಣದ ಪತ್ತೆ ಮಾಡಿದ್ದಾರೆ.
ಈ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡ ಹಿನ್ನೆಲೆಯಲ್ಲಿ ದಿ 13 ರಂದು ದಸ್ತಗೀರ ಮಾಡಿ ಸದರಿ ಆರೋಪಿತರಿಗೆ ಹೆಚ್ಚಿನ ವಿಚಾರಣೆ ಮಾಡಿ ಸಂಕೇಶ್ವರ ಪಟ್ಟಣದಲ್ಲಿ ಕಳುವು ಮಾಡಿದ 3 ಮೋಟಾರ ಸೈಕಲನ್ನು ಹಾಗೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಯಮಕನಮರಡಿ ಹಾಗೂ ಬೆಳಗಾವಿ ಶಹರದ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಹಿಂಗ್ಲಜ ಪೊಲೀಸ ಠಾಣೆಯ ವ್ಯಾಪ್ತಿಗಳಲ್ಲಿ ಕಳವು ಮಾಡಿದ ಹೀರೊ ಸ್ಲಂಡರ ಪ್ಲಸ್, ಹಿರೋ ಹೆಚ್.ಎಪ್ ಡಿಲಕ್ಸ್ ಹೀಗೆ ಒಟ್ಟು ರೂ. 4,30,000 ಕಿಮ್ಮತ್ತಿನ 10 ಮೊಟಾರ ಸೈಕಲಗಳನ್ನು ಜಪ್ತ ಮಾಡಿ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಲಾಗಿದೆ.
ಅದೇ ರೀತಿಯಾಗಿ ಮತ್ತೊಂದು ಪ್ರಕರಧಲ್ಲಿ ದಿ. 15ರಂದು ಬಾಬುಗೌಡಾ ಚಂದ್ರಗೌಡಾ ಪಾಟೀಲ (ಸಾ ;ನಿಡಸೋಸಿ ತಾ: ಹುಕ್ಕೇರಿ) ಇವರು ಕೊಟ್ಟ ದೂರಿನಲ್ಲಿ ಹೀರೋ ಹೊಂಡಾ ಸ್ಪೆಂಡರ್ ಪ್ಲಸ್ ಕಂಪನಿಯ ಮೋಟಾರ ಸೈಕಲ ನಂಬರ ಕೆಎ-23/ಡಬ್ಲೂ-2398 ನೇದ್ದನ್ನು ನಿಡಸೋಸಿ ಗ್ರಾಮ ಹದ್ದಿ ತನ್ನ ಮನೆಯ ಮುಂದೆ ನಿಲ್ಲಿಸಿದ್ದನ್ನು ಕಳ್ಳತನ ಮಾಡಿರುವ ಬಗ್ಗೆ ದೂರನ್ನು ಸಂಕೇಶ್ವರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 126/2026 ಕಲಂ: 303(2) ಬಿ.ಎನ್.ಎಸ್ 2023 ನೇದ್ದಕ್ಕೆ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಮೋಟಾರ ಸೈಕಲ ಕಳ್ಳತನ ಮಾಡಿದ ಪ್ರಕರಣದ ಪತ್ತೆ ಕಾರ್ಯ ಕೈಗೊಂಡು ದಿ: 16 ರಂದು ಸುಮಿತ ಗಂಗಾರಾಮ ಕಮ್ಮಾರ (21 ಸಾ: ನಿಡಸೋಸಿ ತಾ: ಹುಕ್ಕೇರಿ, ಶಿವರಾಜ ನಿಂಗೌಡಾ ಪಾಟೀಲ (21 ಸಾ :ಮತನೂರ ತಾ|| ಹುಕ್ಕೇರಿ, ಓಂಕಾರ ಮೋಹನ ಕಡಲಗಿಕರ (20 ಸಾ: ಕಡಲಗೆ ತಾ: ಗಡಹಿಂಗ್ಲಜ ಜಿ: ಕೊಲ್ಲಾಪುರ ಮಹಾರಾಷ್ಟ್ರ, ಕಿರಣ ಹಣಮಂತ ಕಮ್ಮಾರ 18) ಸಾ: ನಿಡಸೋಸಿ ಜೈನಾಪುರ ಮೂಲಿ ಇವರನ್ನು ಬಂಧಿಸಲಾಗಿದೆ.
ಹೀಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ರೂ. 6,10,000 ಕಿಮ್ಮತ್ತಿನ 14 ಮೋಟಾರ ಸೈಕಲಗಳನ್ನು ಜಪ್ತ ಮಾಡಿ 06 ಜನ ಆರೋಪಿತರನ್ನು ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ ಹಾಗೂ ಸಿ.ಇ.ಐ.ಆರ್ ಪೋರ್ಟಲ ಸಹಾಯದಿಂದ ಒಟ್ಟು 14 ಮೊಬೈಲಗಳನ್ನು ಪತ್ತೆ ಮಾಡಿದ್ದು ಇರುತ್ತದೆ.
ಸದರಿ ಎರಡು ಪ್ರಕರಣಗಳಲ್ಲಿ ಕಳ್ಳರನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಹಾಗೂ ಮೊಬೈಲಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಗಣಪತಿ ಕೊಂಗನೊಳ್ಳಿ ಪಿ.ಐ ಸಂಕೇಶ್ವರ, ವಿಠಲ ಈ ನಾಯಿಕ ಪಿ.ಎಸ್.ಐ(ಕಾ&ಸು), ಯು ಎಸ್ಶೆ ಟ್ಟೆನ್ನವರ ಪಿ.ಎಸ್.ಐ, ಸಿ.ಜೆ. ಸಾರಾಪೂರೆ ಎ.ಎಸ್.ಐ, ಎಲ್ ಎಸ್ ಖೋತ ಎ.ಎಸ್.ಐ. ಹಾಗೂ ಸಿಬ್ಬಂದಿ ಜನರಾದ ಬಿ.ಕೆ.ನಾಗನೂರಿ, ಎಸ್.ಎಲ್. ಗಳತಗಿ, ವಿಠಲ ಬಿ ಮುರ್ಕಿಭಾವಿ, ಎಸ್. ಎಮ್. ಯಕ್ಸಂಬಿ, ಕೆ.ಡಿ.ಹಿರೇಮಠ, ಎಸ್.ಬಿ.ಪೂಜೇರಿ, ಶ್ರೀಧರ ಭಾಂಗಿ, ಕುಡ್ಡಗೋಳ, ಬಿ.ಟಿ.ಪಾಟೀಲ, ಎಮ್. ಕೆ. ಅತ್ತಾರ, ನವೀಣ ಮುಧೋಳ, ಎಸ್.ಬಿ.ಮಠಪತಿ, ಎಸ್.ಎಸ್. ಕುದರೆ ಹಾಗೂ ಟೆಕ್ನಿಕಲ್ ಸೆಲ್ ಬೆಳಗಾವಿ ಸಿಬ್ಬಂದಿ ಜನರಾದ ವಿನೋದ ಠಕ್ಕನ್ನವರ, ಸಚೀನ ಪಾಟೀಲ ಇವರ ಕಾರ್ಯವನ್ನು ಎಸ್ ಪಿ ಅವರು ಶ್ಲಾಘಿಸಿರುತ್ತಾರೆ.
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ 