ಗುಡುಗು-ಬಿರುಗಾಳಿ - ಆನೆಕಲ್ಲು ಮಳೆ, ನೆಲಕಚ್ಚಿದ ಭತ್ತದ ಬೆಳೆ, ಪರಿಹಾರಕ್ಕೆ ಸಂತೋಷಕುಮಾರ ಪಾಟೀಲ್ ಆಗ್ರಹ

ಗುಡುಗು-ಬಿರುಗಾಳಿ - ಆನೆಕಲ್ಲು ಮಳೆ, ನೆಲಕಚ್ಚಿದ ಭತ್ತದ ಬೆಳೆ, ಪರಿಹಾರಕ್ಕೆ ಸಂತೋಷಕುಮಾರ ಪಾಟೀಲ್ ಆಗ್ರಹ Thunderstorm - heavy rain, rice crop destroyed, Santoshkumar Patil demands compensation

ರಾಣೆಬೆನ್ನೂರು 16 :  ಗುರುವಾರ ಸಂಜೆ ಸುರಿದ ಗುಡುಗು ಸಹಿತ ಗಾಳಿ ಮಳೆ ಗಾಳಿಗೆ ಕೈಗೆ ಬಂದ ಭತ್ತದ ಬೆಳೆಯು ನೆಲಕಚ್ಚಿದ ಪರಿಣಾಮ ಸಾಲ ಸೂಲ ಮಾಡಿ ಫಸಲು ಪಡೆಯುವ ಹಂತಕ್ಕೆ ಬಂದಿದ್ದ ಬೆಳೆಗಳು ಹಾನಿ ಸಂಭವಿಸಿ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿ, ಆನೆಗೊಳಗಾದ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಹ ಸ್ಥಿತಿ ತಾಲೂಕಿನ ರೈತರಲ್ಲಿ ಬಂದೋದಗಿದೆ.  

ತಾಲೂಕಿನ ಮೇಡ್ಲೆರಿ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಐರಣಿ ಹಿರೇಬಿದರಿ ಕೋಣನತಂಬಗಿ ಮತ್ತು ಮೇಡ್ಲೆರಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.  ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಪಕ್ಷದ ಹಿರಿಯ ಮುಖಂಡ ಸಂತೋಷ್ ಕುಮಾರ ಪಾಟೀಲ ಮತ್ತು ಕಾರ್ಯಕರ್ತರು ಭೇಟಿ ನೀಡಿ ಹಾನಿಗೊಂಡ ಸ್ಥಳ ಪರೀಶೀಲನೆ ನಡೆಸಿದರು.  

ನಂತರ ಮಾತನಾಡಿದ ಅವರು, ಗುರುವಾರ ಸಂಜೆ ಮೆಡ್ಲೇರಿ ಹೋಬಳಿ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಗಾಳಿ ಮಳೆ ಗುಡುಗು ಮತ್ತು ಆಣೆಕಲ್ಲು ಸಹಿತ ಭಾರಿ ಮಳೆ ಸುರಿದಿದೆ.  ಇಲ್ಲಿನ ರೈತರು ಅಪಾರ ಪ್ರಮಾಣದಲ್ಲಿ ಭತ್ತವನ್ನು ಬೆಳೆದಿದ್ದಾರೆ ಅಲ್ಲದೆ ತೆಂಗು ಅಡಿಕೆ ಬೆಳೆ ಸಹಾ ಬೆಳೆದಿದ್ದಾರೆ. ಆನೆಕಲ್ಲು ಹೊಡೆತಕ್ಕೆ, ತೆಂಗು ಅಡಿಕೆ ಮರದ ಶಿರವು ಸೇರಿ ಭತ್ತದ ಬೆಳೆ ನೆಲಕಚ್ಚಿದ್ದು, ಅಲ್ಲದೆ ಅಡಿಕೆಯೂ ಸಹ ಆನೇಕಲ್ಲು ಹೊಡೆತಕ್ಕೆ ನೆಲಕ್ಕೆ ಅಪ್ಪಳಿಸಿವೆ. ಪರಿಣಾಮ ಕೋಟ್ಯಾಂತರ ರೂಪಾಯಿಗಳಷ್ಟು ಹಾನಿ ಸಂಭವಿಸಿದೆ ಎಂದು ಹೇಳಿದರು.  

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು. ಅಂದಾಜು 3000 ಎಕರೆ ಪ್ರವೇಶದಲ್ಲಿ ಬೆಳೆದ ಭತ್ತ ದ ಬೆಳೆ ಸಂಪೂರ್ಣ ನೆಲ ಕಚ್ಚಿದೆ ಅಲ್ಲವೇ ಕೊಹ್ಲಿಗೆ ಬಂದಿದ್ದ ಈ ಬೆಳೆ, ನೀರಿನಿಂದಾವೃತವಾಗಿದ್ದು,ಕೈಗೆ ಬಾರದಂತಾಗಿದೆ. ರೈತರು ಇದರಿಂದ ಅಂದಾಜು ಹದಿನೆಂಟು ಕೋಟಿಯಷ್ಟು ರೂಪಾಯಿಗಳ ನಷ್ಟ ಅನುಭವಿಸುವಂತಾಗಿದೆ ಎಂದು ವಿವರಿಸಿದರು.  ಸರಕಾರದ ನಿಯಮಾವಳಿ ಪ್ರಕಾರ ಶೇಅ90ರಷ್ಟು ಬೆಳೆ ನೆಲ ಕಚ್ಚಿ ಹಾಳಾಗಿದ್ದರೆ. ಮಧ್ಯಂತರ ಪರಿಹಾರವಾಗಿ ತಕ್ಷಣವೇ ಭತ್ತಕ್ಕೆ ಎಕರೆಗೆ 40, ಸಾವಿರ ರೂ, ಮತ್ತು ಅಡಿಕೆಗೆ ಲಕ್ಷ ರೊ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.  

ಪ್ರಾಮಾಣಿಕವಾಗಿ ವೈಜ್ಞಾನಿಕ ರೀತಿಯಲ್ಲಿ ಪರೀಶೀಲನೆ ನಡೆಸಿ ತಕ್ಷಣವೇ ಪರಿಹಾರಕ್ಕೆ ಶಿಫಾರಸು ಮಾಡಬೇಕು ಎಂದು ತಾಲೂಕಿನ ಶಾಸಕರಿಗೆ ಸಂತೋಷ ಪಾಟೀಲ್ ಅವರು ಒತ್ತಾಯಿಸಿದರು.  ನಮ್ಮ ಸರಕಾರ ರೈತರ ಪರವಾಗಿದ್ದು,2023 ರಲ್ಲಿ ಬಸವರಾಜ ಬೊಮ್ಮಾಯಿ ಅವರ ಆಡಳಿತದಲ್ಲಿ ಆಕಸ್ಮಿಕ ಹಾನಿ ಸಂಭವಿಸಿದ ತಕ್ಷಣವೇ ಮದ್ಯಂತರ ಪರಿಹಾರ ಘೋಷಿಸಿ ರೈತರಿಗೆ ಅನುಕೂಲ ಕಲ್ಪಿಸಿತ್ತು. ಎಂದು ವಿವರಿಸಿದ ಅವರು ಸರ್ಕಾರ ಈ ವಿಷಯವಾಗಿ ವಿಳಂಬ ಧೋರಣೆ ಅನುಸರಿಸದೇ, ಕೂಡಲೇ ರೈತರ ನೆರವೇರಿಗೆ ಧಾವಿಸಬೇಕು ಎಂದು ಅಗ್ರಿಸಿದರು.  

ಮೇ ತಿಂಗಳು 29ರ ಒಳಗಾಗಿ ಸರಕಾರ ಮತ್ತು ಕೃಷಿ ಇಲಾಖೆ ವೈಜ್ಞಾನಿಕ ಪರೀಶೀಲನೆ ನಡೆಸಿ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಇಲ್ಲದೆ ಹೋದರೆ ಮೇ ತಿಂಗಳು 29ರಂದು ಹಿರೇಬಿದರಿ ಗ್ರಾಮದಿಂದ ಹಾನಿ ಗೊಳಗಾದ ರೈತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಿ, ಹಿರೇಬಿದರಿಯಿಂದ ಪಾದಯಾತ್ರೆಯ ಮೂಲಕ ರಾಣೆಬೆನ್ನೂರು ನಗರಕ್ಕೆ ಆಗಮಿಸಿ ಪ್ರತಿಭಟಿಸಿ, ಸರಕಾರ ಸಾವು ಕಂಡಿರುವುದಾಗಿ ಭಾವಿಸಿ ಸರಕಾರದ 13 ದಿವಸದ ತಿಥಿಯನ್ನು ಮಾಡಿ ಎಲ್ಲರಿಗೂ ತೂತಿನ ವಡೆ ವಿತರಿಸಿ 13 ದಿವಸದ ಕಾರ್ಯಕ್ರಮ ಮಾಡುವುದಾಗಿ ಅವರು ಘೋಷಿಸಿದರು.  

ಈ ಸಂದರ್ಭದಲ್ಲಿ ರಾಜಕೀಯ ಯುವ ನಾಯಕರಾದ ಯುವರಾಜ್ ಭಾರಟಕ್ಕಿ,, ಸಜ್ಜನಗೌಡ ಪಾಟೀಲ್, ರಾಮಣ್ಣ ಹೊನ್ನಾಳಿ, ಉಮೇಶ್ ಚಿಕ್ಕಳ್ಳವರ, ಬಸವರಾಜ ಕುರುವತ್ತಿ, ಡಿಳ್ಳೇಪ್ಪ ಕಂಬಳಿ, ಗುಡ್ಡಪ್ಪ ಕಂಬಳಿ, ಉಮೇಶ್ ಮಳವಳ್ಳಿ, ವಿಶ್ವನಾಥ ವಿರೂಪಾಕ್ಷಪ್ಪ ಮಳವಳ್ಳಿ, ನಾಗನಗೌಡ ಕೂನಬೇವು, ಸೋಮಣ್ಣ ಹಲಗೇರಿ, ಹನುಮಂತಪ್ಪ ಚಂದಾಪುರ, ತಿಪ್ಪೇಶ್ ವಗ್ಗನವರ, ಬಸವರಾಜ ಹರನಾಳ, ಸುಭಾಸ್ ಮೆಡ್ಲೇರಿ, ಮಲ್ಲಿಕಾರ್ಜುನ ಸಾವಕ್ಕಳವರ, ಕರಬಸಪ್ಪ ಮಲ್ಲಾಪುರ, ಮಲ್ಲಿಕಾರ್ಜುನ, ಗೌರಕಳ್ಳವರ, ಸಿದ್ದಪ್ಪ ಮಲ್ಲಾಪುರ, ಗುಡ್ಡಪ್ಪ ಚಂದಾಪುರ, ಪರಸಪ್ಪ, ಚನ್ನಾಪುರ, ಮಂಜಪ್ಪ ಸಪ್ಪಾಳಿ ಸೇರಿದಂತೆ ಗ್ರಾಮಗಳ ನೂರಾರು ರೈತರು ಪಾಲ್ಗೊಂಡಿದ್ದರು.