ಬೆಳಗಾವಿ, 26: ಅಖಿಲ ಭಾರತ ವಿದ್ಯಾಥರ್ಿ ಪರಿಷತ್, ಮೈಸೂರು ಹಾಗೂ ಕನರ್ಾಟಕ ಮುಕ್ತ ವಿಶ್ವವಿದ್ಯಾಲಯ ಮಾನಸ ಗಂಗೋತ್ರಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ "ವಿದ್ಯಾಥರ್ಿ ಸಂಸ್ಕೃತಿ ಚಳುವಳಿ" ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ನಿಮಿತ್ತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ವಿದ್ಯಾಸಂಗಮ, ಬೆಳಗಾವಿಯ ವಿದ್ಯಾಥರ್ಿಗಳು ಭಾಗವಹಿಸಿದ್ದರು.
ಸಂತೋಷ ಬ. ದೊಡಮನಿ, ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಚಚರ್ಾ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಶ್ವವಿದ್ಯಾಲಯದ ಕೀತರ್ಿಯನ್ನು ಹೆಚ್ಚಿಸಿದ್ದಾರೆ. ಅದೇ ರೀತಿ ಓಂಕಾರ ಪೋಳ, ಅಪರಾಧಶಾಸ್ತ್ರ ವಿಭಾಗ ಇವರು ಚಿತ್ರಕಲೆ ಸ್ಪಧರ್ೆಯಲ್ಲಿ ದ್ವಿತೀಯ ಸ್ಥಾನ ಮತ್ತು ಮೂತರ್ಿ ರಚನೆ ಸ್ಪಧರ್ೆಯಲ್ಲಿ ಸಮಾಧಾನಕರ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.
ಇದರ ಜೊತೆಗೆ ಬಸವರಾಜ ಹಡಪದ, ಕನ್ನಡ ವಿಭಾಗ ಹಾಗೂ ಕಿರಣ ಹೂಲಿಕಟ್ಟಿ, ಅಪರಾಧಶಾಸ್ತ್ರ ವಿಭಾಗದ ವಿದ್ಯಾಥರ್ಿಗಳು ಸ್ವರಚಿತ ಕವನ ಮತ್ತು ಭಾಷಣ ಸ್ಪಧರ್ೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹೊರಹಾಕುವುದರಲ್ಲಿ ಯಶಸ್ಸು ಕಂಡಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಶಿವಾನಂದ ಬಿ. ಹೊಸಮನಿ ಗುರುಗಳು ವಿದ್ಯಾಥರ್ಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿ ಶುಭ ಕೋರಿದರು. ಪ್ರೊ. ಸಿದ್ದು ಪಿ. ಆಲಗೂರ, ಕುಲಸಚಿವರು (ಆಡಳಿತ), ಪ್ರೊ. ಚಂದ್ರಿಕಾ ಕೆ.ಬಿ., ಡಾ. ನಂದಿನಿ ದೇವರಮನಿ, ಹಾಗೂ ಡಾ. ನಾಗರತ್ನಾ ಪರಾಂಡೆ ಗುರುಮಾತೆಯರು ಉಪಸ್ಥಿತರಿದ್ದರು.