ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ತುಷಾರ್ ಅರೋತೆ ರಾಜೀನಾಮೆ


ನವದೆಹಲಿ 11: ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರಧಾನ ಕೋಚ್ ತುಷಾರ್ ಅರೋತೆ ಅವರು ತಮ್ಮ ಸ್ಖಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. 

ಮೂಲಗಳ ಪ್ರಕಾರ ತುಷಾರ್ ಅರೋತೆ ಅವರು, ಬಿಸಿಸಿಐ ಕಚೇರಿಗೆ ಇಂದು ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದು, ಬಿಸಿಸಿಐ ಕೂಡ ಅವರ ರಾಜಿನಾಮೆ ಅಂಗೀಕರಿಸಿದೆ ಎಂದು ತಿಳಿದುಬಂದಿದೆ. 

ರಾಜಿನಾಮೆ ಪತ್ರದಲ್ಲಿ ತಮ್ಮ ವೈಯುಕ್ತಿಕ ಕಾರಣಗಳಿಂದಾಗಿ ತಾವು ಈ ಪ್ರಮುಖ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ ಎಂದು ಆರೋತೆ ಹೇಳಿಕೊಂಡಿದ್ದಾರೆ.  

ಐಸಿಸಿ ಮಹಿಳಾ ವಿಶ್ವ ಟಿ20 ಸರಣಿಗೆ ಇನ್ನೂ ಕೇವಲ 4 ತಿಂಗಳು ಮಾತ್ರ ಬಾಕಿ ಇದ್ದು, ಈ ಹಂತದಲ್ಲಿ ಕೋಚ್ ರಾಜಿನಾಮೆ ನಿಧರ್ಾರ ಭಾರತ ಮಹಿಳಾ ಕ್ರಿಕೆಟ್ ತಂಡದ ಆತಂಕಕ್ಕೆ ಕಾರಣವಾಗಿದೆ.   

ಇನ್ನು ಅರೋತೆ ಅವರ ರಾಜಿನಾಮೆ ನಿಧರ್ಾರವನ್ನು ಬದಲಿಸಿಕೊಳ್ಳುವಂತೆ ಬಿಸಿಸಿಐ ಅಧಿಕಾರಿಗಳು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರಾದರೂ, ಆರೋತೆ ತಮ್ಮ ರಾಜಿನಾಮೆ ನಿಧರ್ಾರಕ್ಕೆ ಬದ್ಧರಾಗಿದ್ದರಿಂದ ರಾಜಿನಾಮೆ ಅಂಗೀಕರಿಸಲಾಯಿತು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.  

ಇದೇ ನವೆಂಬರ್ ನಲ್ಲಿ ಗಯಾನದಲ್ಲಿ ಐಸಿಸಿ ಮಹಿಳಾ ವಿಶ್ವ ಟಿ20 ಟೂನರ್ಿ ಆರಂಭವಾಗಲಿದ್ದು, ನವೆಂಬರ್ 9ರಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಮಹಿಳಾ ತಂಡ ತಮ್ಮ ಅಭಿಯಾನವನ್ನು ಆರಂಭಿಸಲಿದ್ದಾರೆ. 

ಇನ್ನು ನೂತನ ಕೋಚ್ ಆಯ್ಕೆಗೆ ಈಗಾಗಲೇ ಬಿಸಿಸಿಐ ಚಾಲನೆ ನೀಡಿದೆ ಎಂದು ತಿಳಿದುಬಂದಿದೆ.