ಲೋಕದರ್ಶನ ವರದಿ
ಶಿಗ್ಗಾವಿ17: ಮನುಷ್ಯನ ಬದುಕಿನಲ್ಲಿ ಬೆಳಕು ಬೆರಗುಗೊಳಿಸುವಂತದು, ಹಾಗೆ ಬೆಳಕು ಟ್ರಸ್ಟ್ ಶೈಕ್ಷಣಿಕ, ಸಾಹಿತ್ಯಿಕ, ಸಂಸ್ಕೃತಿಕ ಲೋಕಕ್ಕೆ ಹೊಸ ಬೆಳಕು ಮೂಡಿಸುವ ನಿಟ್ಟಿನಲ್ಲಿ ಉತ್ತಮವಾದ ಕಾರ್ಯಕ್ರಮ ಆಯೋಜಿಸಿದೆ ಎಂದು ತ್ರಿವಳಿ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಸಾಹಿತಿಗಳು ಹಾಗೂ ಬೆಂಗಳೂರು ದೂರದರ್ಶನ ಕೇಂದ್ರದ ಸಹಾಯಕ ನಿದರ್ೇಶಕರು ಆದ ನಿರ್ಮಲಾ ಯಲಿಗಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಮಹಷರ್ಿ ವಾಲ್ಮಿಕಿ ಭವನದಲ್ಲಿ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಟ್ರಸ್ಟ ಆಶ್ರಯದಲ್ಲಿ ನಡೆದ ಗದಗ-ಧಾರವಾಡ ಮತ್ತು ಹಾವೇರಿ ತ್ರಿವಳಿ ಜಿಲ್ಲಾ ಮಟ್ಟದ ಬೆಳಕು ಸಾಹಿತ್ಯ ಸಮ್ಮೇಳನವು ಜರುಗಿತು.
ಜಿಲ್ಲೆಯ ನಾಲ್ಕು ಪ್ರಮುಖ ಸಾಹಿತಿಗಳು ಭಾರತೀಯ ಸಾಹಿತ್ಯ ರಂಗದ ಸರ್ವಶ್ರೇಷ್ಠ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಇಂತ ಸಾಹಿತಿಗಳ ಜಿಲ್ಲೆಗಳಲ್ಲಿ, ತ್ರಿವಳಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಆಯೋಜಿಸಿದ ಅಣ್ಣಪ್ಪ ಮೇಟಿಗೌಡ, ನಾಗಪ್ಪ ಬೆಂತೂರ, ಶರೀಫಸಾಬ ನದಾಫ್, ಬಸವರಾಜ ಹಡಪದ, ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು, ಸಾಹಿತ್ಯಾಸಕ್ತರು, ಎಲ್ಲ ಸಾರ್ವಜನಿಕರು ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಲೇಖಕ ನಾಗಪ್ಪ ಬೆಂತೂರ ಅವರ ನಾನೇಕೆ ಹೀಗೆ ಕವನ ಸಂಕಲನ ಪುಸ್ತಕ ಲೋಕಾರ್ಪಣೆ ಹಾಗೂ ಕೆ.ವಿ.ಆರ್.ಕ್ರಿಯೇಶನ್ಸ ಅವರ ಬೆಳಕುತಂದ ಮಕ್ಕಳು ಕಿರುಚಿತ್ರ ಕ್ಯಾಸೆಟ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ವಿರಕ್ತಮಠದ ಸಂಗನಬಸವ ಶ್ರೀಗಳು ಸಾನಿಧ್ಯ ವಹಿಸಿದ್ದರು, ಧಾರವಾಡದ ಹಿರಿಯ ಸಾಹಿತಿಗಳಾದ ವ್ಹಿ.ಸಿ.ಐರಸಂಗ ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಿದರು, ಸಮ್ಮೇಳನದ ದ್ವಜಾರೋಹಣವನ್ನು ಕೊಟ್ರೇಶ ಮಾಸ್ತರ ಬೆಳಗಲಿ ನೆರವೇರಿಸಿದರು, ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಶಾಸಕ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಪುಸ್ತಕ ಮಳಿಗೆಯ ಉದ್ಘಾಟನೆ ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ನೆರವೇರಿಸುವರು, ಚಿತ್ರಕಲಾ ಪ್ರದರ್ಶನದ ಉಧ್ಘಾಟನೆಯನ್ನು ಕನರ್ಾಟಕ ಜಾನಪದ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಡಿ.ಬಿ ನಾಯಕ ನೆರವೇರಿಸಿದರು.