ಹುಕ್ಕೇರಿ ಪಿಎಸ್‌ಐ ನೀಕಿಲ್ ಕಾಂಬಳೆ ಇವರಿಗೆ ಗೌರವಸನ್ಮಾನ

Tribute to Hukkeri PSI Nikhil Kamble

ಹುಕ್ಕೇರಿ ಪಿಎಸ್‌ಐ ನೀಕಿಲ್ ಕಾಂಬಳೆ ಇವರಿಗೆ ಗೌರವಸನ್ಮಾನ

ಹುಕ್ಕೇರಿ, 02; ಪೊಲೀಸ್ ಠಾಣೆಯಗೆ ನೂತನವಾಗಿ ಆಗಮಿಸಿದ ಪಿಎಸ್‌ಐ ಸಾಹೇಬರಾದ ನಿಖಿಲ್ ಕಾಂಬಳೆ ಇವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ವತಿಯಿಂದ  ಗೌರವ ಸನ್ಮಾನ ಜರುಗಿತು. 

     ಇದೇ ಸಂದರ್ಭದಲ್ಲಿ   ಪಿಎಸ್‌ಐ ನಿಖಿಲ್ ಕಾಂಬಳೆ ಯವರು ಮಾತನಾಡಿ ಪತ್ರಕರ್ತರಿಗೆ ಅಭಿನಂದಿನೆ ಸಲ್ಲಿಸಿ  ನಿಮ್ಮ ಕಾರ್ಯ ಶ್ಲಾಘನೀಯ ಹಾಗೂ ನಿಮ್ಮ ಸಹಕಾರ ನಮ್ಮ ಜೊತೆ ಇರಲಿ ಎಂದು ಹೇಳಿದರು. 

    ಈ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷರಾದ ರವಿ ಬಿ ಕಾಂಬಳೆ ಜಿಲ್ಲಾ ಕಾರ್ಯದರ್ಶಿ ಶಿವಾಜಿ ಎನ್ ಬಾಳೇಶ್ ಗೋಳ ಗೌರವಾಧ್ಯಕ್ಷರಾದ ರಮೇಶ್ ತಳವಾರ್  ತಾಲೂಕ ಅಧ್ಯಕ್ಷರಾದ ಸುನಿಲ್ ಲಾಳಗೆ ಹಾಗೂ ದಲಿತ ಸಂಘರ್ಷ ಸಮಿತಿಯ ಮಹಿಳಾ ತಾಲೂಕ ಅಧ್ಯಕ್ಷರಾದ ಶಾಂತಾ ಯರಗಟ್ಟಿ ಹಾಗೂ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು