ಸಾರಿಗೆ ವ್ಯವಸ್ಥೆ ತುಂಬಾ ಅವಶ್ಯ : ಶಾಸಕ ಹಾಲಪ್ಪ

ಯಲಬುರ್ಗಾ  25: ಸರಕಾರದಿಂದ ನಮ್ಮ ತಾಲೂಕಿನ ಅಭಿವೃದ್ಧಿಗಾಗಿ ಸಾಕಷ್ಟು ಹಣ ಮಂಜೂರಾಗಿದ್ದು ಅವಶ್ಯಕವಾಗಿರುವ ಕಾಮಗಾರಿಗಳನ್ನು ಮಾಡಲು ಮಂಜೂರಾತಿ ನೀಡಲಾಗಿದೆ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದ ಬಸ್ ಘಟಕದ ಸಿಬ್ಬಂದಿ ವಸತಿ ಗೃಹ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸರಕಾರದಿಂದ 2.5 ಕೋಟಿ ಹಣ ಬಿಡುಗಡೆಯಾಗಿದ್ದು ಅದರಲ್ಲಿ ಉತ್ತಮ ಹಾಗೂ ಅತ್ಯಂತ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಬೇಕು ಸಾರಿಗೆ ಇಲಾಖೆಯ ಸಿಬ್ಬಂದಿಗಳು ನೆಮ್ಮದಿಯಾಗಿ ಜೀವನವನ್ನು ಮಾಡಲು ಅನುಕೂಲವಾಗಬೇಕು ಇಲ್ಲಿಗೆ ವರ್ಗಾವಣೆಯಾಗಿ ಬಂದಂತಹ ಸಿಬ್ಬಂದಿಗಳು ಬಾಡಿಗೆ ಮನೆಗಾಗಿ ಅಲೆದಾಡುವ ಪರಸ್ಥಿತಿ ನಿರ್ಮಾಣವಾಗಿತ್ತು ಅದನ್ನು ಗಮನದಲ್ಲಿಟ್ಟುಕೊಂಡು ನೂತನವಾಗಿ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಯಾವುದೇ ಲೋಪವಿಲ್ಲದೆ ಅತ್ಯಂತ ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕು ಇಲ್ಲದೆ ಹೋದರೆ ಅಂತಹ ಅಧಿಕಾರಿಗಳನ್ನೆ ಹೊಣೆಯನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವದು ಎಂದರು.

ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ಜಿಲ್ಲಾ ವ್ಯವಸ್ಥಾಪಕ ಎನ್.ಎ.ಮುಲ್ಲಾ, ಯಲಬುರ್ಗಾ  ಘಟಕದ ವ್ಯವಸ್ಥಾಪಕ ರಮೇಶ, ಮುಖಂಡರಾದ ವೀರಣ್ಣ ಹುಬ್ಬಳಿ, ಶಿವನಗೌಡ ಬನಪಗೌಡ್ರ, ರತನ ದೇಸಾಯಿ, ಅಡಿವೇಪ್ಪ ಬಾವಿಮನಿ, ಪ ಪಂ ಸದಸ್ಯರಾದ ವಸಂತಕುಮಾರ ಬಾವಿಮನಿ, ಕಳಕಪ್ಪ ತಳವಾರ ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದ್ದಿ ಸೇರಿದಂತೆ ಇನ್ನೀತರರು  ಹಾಜರಿದ್ದರು.