ಜಿಲ್ಲೆಯ ಗ್ರಾಮೀಣ ಪತ್ರಕರ್ತರಿಗೆ ತರಬೇತಿ ಕಾಯರ್ಾಗಾರ

ವಿಜಯಪುರ, 18 : ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕವು ಜಿಲ್ಲೆಯ ಗ್ರಾಮೀಣ ಪತ್ರಕರ್ತರಿಗಾಗಿ ಒಂದು ದಿನದ ವೃತ್ತಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾಯರ್ಾಗಾರ ಹಮ್ಮಿಕೊಳ್ಳಲು ನಿರ್ಣಯಿಸಿದೆ. 

ರವಿವಾರ ನಗರದ 'ಪತ್ರಿಕಾಭವನ'ದಲ್ಲಿ ನಡೆದ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೊಸ ವರ್ಷದ ಜನೇವರಿ ಕೊನೆಯ ವಾರದಲ್ಲಿ ಕಾಯರ್ಾಗಾರ ನಡೆಸುವ ಕುರಿತು ಚಚರ್ಿಸಿ ನಿರ್ಣಯ ಕೈಗೊಳ್ಳಲಾಯಿತು.

ಈ ಕಾಯರ್ಾಗಾರದೊಂದಿಗೆ ಸಂಘದ ಸದಸ್ಯರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲು ಹಾಗೂ ಈ ಸಮಾರಂಭಕ್ಕೆ ಜಿಲ್ಲೆಯ ಸಚಿವರನ್ನು ಆಹ್ವಾನಿಸಲು ಇದೇ ಸಂದರ್ಭದಲ್ಲಿ ತೀಮರ್ಾನಿಸಲಾಯಿತು.

ರಾಜ್ಯ ಸಂಘದ ಪದಾಧಿಕಾರಿಗಳ ಸೂಚನೆಯಂತೆ ಕಾನಿಪ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ವಿಜಯಪುರದಲ್ಲಿ ನಡೆಸುವ ಕುರಿತಂತೆ ಸಭೆಯಲ್ಲಿ ಚಚರ್ಿಸಲಾಯಿತು. ಈ ತಿಂಗಳು ವಿಜಯಪುರದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ, ಬರುವ ಜನೇವರಿಯಲ್ಲಿ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯುತ್ತಿದೆ.  ಹೀಗಾಗಿ ಮುಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚಚರ್ಿಸಿ ದಿನಾಂಕ ನಿಗದಿಗೊಳಿಸಲು ಎಲ್ಲ ಪದಾಧಿಕಾರಿಗಳು ಸಹಮತ ವ್ಯಕ್ತಪಡಿಸಿದರು.

ಮುಂಬರುವ ದಿನಗಳಲ್ಲಿ ಸಂಘದ ಸದಸ್ಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವುದು, ರಾಜ್ಯ ಸಂಘದ ನಿದರ್ೇಶನದಂತೆ ಸಂಘದ ಸದಸ್ಯತ್ವ ನವೀಕರಣ ನಿಯಮಾವಳಿ ಪ್ರಕಾರ ಕಟ್ಟುನಿಟ್ಟಾಗಿ ಮಾಡುವುದು, ಪತ್ರಕರ್ತರ ನೆರವಿಗಾಗಿ ಕ್ಷೇಮನಿಧಿ ಸಂಗ್ರಹಿಸುವುದು ಇವೇ ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚಚರ್ಿಸಲಾಯಿತು.

ಇದೇ ಸಂದರ್ಭದಲ್ಲಿ ಸಂಘದ ಎಲ್ಲ ತಾಲೂಕಾ ಘಟಕಗಳ ನೂತನ ಪದಾ ಧಿಕಾರಿಗಳ ಪಟ್ಟಿಗೆ ಅನುಮೋದನೆ ನೀಡಲಾಯಿತು. ಈ ವರ್ಷ ಹೊಸದಾಗಿ ಚಡಚಣ, ದೇವರಹಿಪ್ಪರಗಿ ಹಾಗೂ ನಿಡಗುಂದಿ ತಾಲೂಕು ಘಟಕಗಳನ್ನು ಹೊಸದಾಗಿ ರಚನೆ ಮಾಡಿರುವ ಬಗ್ಗೆ ಸಭೆಯ ಗಮನಕ್ಕೆ ತರಲಾಯಿತು. 

ಕಾನಿಪ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಸಳಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣದ ನಂತರ ಇಲ್ಲಿಯವರೆಗೆ ನಡೆದ ಸಂಘದ ಕಾರ್ಯಚಟುವಟಿಕೆಗಳು ಹಾಗೂ ಸಾಧನೆಗಳ ಕುರಿತು ವಿವರಿಸಿ, ಸಂಘದ ಎಲ್ಲ ಕಾರ್ಯಕ್ರಮಗಳಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ಸಕ್ರಿಯವಾಗಿ ಭಾಗವಹಿಸಬೇಕೆಂದು ಕೋರಿದರು.

 ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದೇವೇಂದ್ರ ಹೆಳವರ ಮಾತನಾಡಿ, ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನವನ್ನು ಈ ಬಾರಿ ಮೈಸೂರಿನಲ್ಲಿ ನಡೆಸಲು ತೀಮರ್ಾನಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಇದೇ ದಿ. 23 ರಂದು ಇಂಡಿಯಲ್ಲಿ ಅದ್ದೂರಿಯಾಗಿ ನಡೆಯಲಿರುವ ಇಂಡಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸನ್ಮಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದಶರ್ಿ ವಿನಾಯಕ ಸೊಂಡೂರ, ಉಪಾಧ್ಯಕ್ಷ ಫಿರೋಜ್ ರೋಜಿನದಾರ, ಗ್ರಾಮೀಣ ಉಪಾಧ್ಯಕ್ಷರಾದ ಡಿ.ಬಿ.ವಡವಡಗಿ(ಮುದ್ದೇಬಿಹಾಳ), ಅಶೋಕ ಕುಲಕಣರ್ಿ (ಇಂಡಿ), ಗ್ರಾಮೀಣ ಕಾರ್ಯದಶರ್ಿ ಇಂದುಶೇಖರ ಮಣೂರ, ಸಹಕಾರ್ಯದಶರ್ಿ ಶಮಸುದ್ದೀನ್ ಸೈಯ್ಯದ್, ಖಜಾಂಚಿ ದೀಪಕ ಶಿಂತ್ರೆ, ಕಾಯರ್ಾಧ್ಯಕ್ಷ ಸಚೇಂದ್ರ ಲಂಬು, ಇಂಡಿ ತಾಲೂಕಾ ಅಧ್ಯಕ್ಷ ಧನ್ಯಕುಮಾರ ಧನಶೆಟ್ಟಿ, ಪ್ರ. ಕಾರ್ಯದಶರ್ಿ ಅಬುಶಾಮ ಹವಾಲ್ದಾರ, ಮುದ್ದೇಬಿಹಾಳ ತಾಲೂಕಾ ಅಧ್ಯಕ್ಷ ಅಮೀನಸಾಬ ಮುಲ್ಲಾ, ಪ್ರ. ಕಾರ್ಯದಶರ್ಿ ಸಿದ್ದು ಚಲವಾದಿ, ಬಸವನ ಬಾಗೇವಾಡಿ ತಾಲೂಕಾ ಅಧ್ಯಕ್ಷ ರಾಜು ಗಣಾಚಾರಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ ಯಡಳ್ಳಿ, ಶಶಿಕಾಂತ ಮೆಂಡೆಗಾರ, ಕೌಶಲ್ಯ ಪನ್ನಾಳಕರ, ಸಂಜೀವ ಕುಲಕಣರ್ಿ, ರಾಜಕುಮಾರ ಗುನ್ನಾಪೂರ, ಸುನೀಲ ಕಾಂಬಳೆ, ಶಕೀಲ್ ಬಾಗಮಾರೆ, ಸರದಾರ ಪತ್ತಾರ, ಎಂ.ಅಷ್ಪಾಕ್ ಕರ್ಜಗಿ(ಸಿಂದಗಿ), ಅವಿನಾಶ ಬಿದರಿ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.