ನಾಳೆಯಿಂದ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ

ಲೋಕದರ್ಶನವರದಿ

ರಾಣಿಬೆನ್ನೂರ11: ನಗರದ ಮೇಡ್ಲೇರಿ ರಸ್ತೆಯ ಗ್ರಾಮ ದೇವತೆ ಶ್ರೀ ಗಂಗಾಜಲ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಜ.13 ರಿಂದ 18ರ ವರೆಗೆ ನಡೆಯಲಿದೆ.

 ಜ.13 ರಂದು ಬೆಳಗ್ಗೆ 6ಕ್ಕೆ ದೇವಿಯ ಮೂರ್ತಿಗೆ ತಳವಾರಗಲ್ಲಿಯ ಮೂಲ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುವುದು. ಸಂಜೆ 6ಕ್ಕೆ ಉತ್ಸವ ಮೂರ್ತಿ ಯನ್ನು ಭಾಜಾ, ಬಜಂತ್ರಿ, ಡೊಳ್ಳು, ಕೋಲಾಟ, ಆನೆಯ ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಂಗಾಜಲದಲ್ಲಿ ಶೃಂಗರಿಸಿದ ಮಂಟಪದಲ್ಲಿ ದೇವಿಯ ಮೂರ್ತಿ ಯ ಪ್ರತಿಷ್ಠಾಪನೆ ಮಾಡಲಾಗುವುದು.

  ಜ.14ರಂದು ದೇವಿಯ ಉಡಿ ತಂಬುವ ಕಾರ್ಯಕ್ರಮ, ಮಹಾ ಪೂಜಾ ನೈವೇದ, ಹರಕೆ ಸಲ್ಲಿಸುವ ಕಾರ್ಯಕ್ರಮ. ಜ.15 ರಂದು ಓಕಳಿ ಉತ್ಸವ ಮಧ್ಯಾಹ್ನ ಬೆಲ್ಲದ ಬಂಡಿಯ ಮೆರವಣಿಗೆ ಜ.18ರಂದು ಸಂಜೆ 6.30ಕ್ಕೆ ದೇವಿಯ ಮೂರ್ತಿ ಯನ್ನು ಪುನಃ ತಳವಾರಗಲ್ಲಿಯ ಮೂಲ ದೇವಸ್ಥಾನಕ್ಕೆ ಕರೆತರಲಾಗುವುದು ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.