ಸದಾನಂದ ಮಜತಿ
ಬೆಳಗಾವಿ: ಹಿರೇಬಾಗೇವಾಡಿ- ಸವದತ್ತಿವರೆಗಿನ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ರೈತಪರ ಹಾಗೂ ವಿವಿಧ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸಕರ್ಾರ ಹೆದ್ದಾರಿ ಅಭಿವೃದ್ಧಿಯಲ್ಲಿ ಅವೈಜ್ಞಾನಿಕ ನಿಧರ್ಾರ ಕೈಗೊಂಡಿದೆ ಎಂಬ ಆರೋಪ ಕೇಳಿಬಂದಿದೆ.
ರಾಜ್ಯ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ 60 ಕಿಮೀ ದೂರದ ಈ ರಾಜ್ಯ ಹೆದ್ದಾರಿಯನ್ನು ರಾಜ್ಯ ಸಕರ್ಾರ ಆಧೀನದ ಕೆಆರ್ಡಿಎಲ್ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಕಳೆದ ನಾಲ್ಕೈದು ವರ್ಷದಿಂದ ಕಾಮಗಾರಿ ಕೈಗೊಂಡಿರುವ ಕೆಆರ್ಡಿಎಲ್ ಸದ್ಯ ಶೇ.70ರಷ್ಟು ಕಾಮಗಾರಿ ಮುಗಿಸಿ ಡಿಸೆಂಬರ್ ಕೊನೆಯ ವಾರದಿಂದ ಟೋಲ್ ಸಂಗ್ರಹಕ್ಕೆ ಮುಂದಾಗಿದೆ. ಕಾರು, ಇತರ ವಾಹನಗಳಿಗೆ ಒಮ್ಮುಖ ಸಂಚಾರಕ್ಕೆ 15 ರೂ, ಭಾರೀ ಗಾತ್ರದ ವಾಹನಗಳಿಗೆ 30 ರೂ. ಶುಲ್ಕ ನಿಗದಿಪಡಿಸಿದೆ.
ಟೋಲ್ ಸಂಗ್ರಹ ಅವೈಜ್ಞಾನಿಕ ನಿಧರ್ಾರ
ಸಾಮಾನ್ಯವಾಗಿ ಕೈಗಾರಿಕೆ, ಉದ್ಯಮಗಳ ವ್ಯಾಪ್ತಿಯಲ್ಲಿರುವ ರಸ್ತೆಗಳನ್ನು ಕೆಆರ್ಡಿಸಿಎಲ್ ಮೂಲಕ ಅಭಿವೃದ್ಧಿಪಡಿಸಿ ಟೋಲ್ ಸಂಗ್ರಹದಿಂದ ಸಂಪೂನ್ಮೂಲ ಕ್ರೋಡೀಕರಿಲಾಗುತ್ತದೆ. ಕಾಖರ್ಾನೆ, ಉದ್ಯಮಗಳಿರುವುದರಿಂದ ಭಾರೀ ಗಾತ್ರದ ವಾಹನ ಓಡಾಟದಿಂದ ಮೇಲಿಂದ ಮೇಲೆ ರಸ್ತೆ ಹಾಳಾಗುತ್ತದೆ. ಅಲ್ಲದೆ, ದುಬಾರಿ ಪ್ರಾಜೆಕ್ಟ್ ಹಣ ಹೊಂದಿಸಲು ಸಕರ್ಾರಕ್ಕೆ ಅಸಾಧ್ಯವಾದಾಗ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳೀಂದ ಸಾಲದ ರೂಪದಲ್ಲಿ ಹಣ ಪಡೆದು ಅಭಿವೃದ್ಧಿಪಡಿಸಿ ಟೋಲ್ ಶುಲ್ಕ ಮೂಲಕ ಹಣ ಸಂಗ್ರಹಿಸುವುದು ಮೂಲ ಆಶಯ. ಈ ಮಾರ್ಗಕ್ಕೆ ಸಂಪಗಾಂವ ಬೈಪಾಸ್ ಹೊರತುಪಡಿಸಿ ಇಡೀ ವಾರ್ಗದುದ್ದಕ್ಕೂ ಒಂದೇ ಒಂದು ಗುಂಟೆ ಜಮೀನು ಭೂಸ್ವಾಧೀನ ಮಾಡಿಕೊಂಡಿಲ್ಲ. ಇಂತಹ ಸರಳ ಮಾರ್ಗವನ್ನು ಸಕರ್ಾರ ಬಿಡಬ್ಲ್ಯುಡಿ ಮೂಲಕ ಸಕರ್ಾರವೇ ಅಭಿವೃದ್ಧಿಪಡಿಸಬಹುದಿತ್ತು.
ಈ ಮಾರ್ಗದಲ್ಲಿ ಯಾವುದೇ ಕಾಖರ್ಾನೆ ಗಳಾಗಲಿ, ಉದ್ಯಮಗಳಾಗಲಿ ಇಲ್ಲ. ಇದು ಪ್ರವಾಸಿಗರು ಹಾಗೂ ಜನಸಾಮಾನ್ಯರು ಹೆಚ್ಚಾಗಿ ಪ್ರಯಾಣಿಸುವ ರಸ್ತೆ. ಕಬ್ಬಿನ ಸೀಸನ್ ಅವಧಿಯಲ್ಲಿ ಮಾತ್ರ ರೈತರು ಟ್ರ್ಯಾಕ್ಟರ್ಗಳಲ್ಲಿ ಕಬ್ಬು ಸಾಗಿಸುತ್ತಾರೆ. ಹಾಗಾಗಿ ಈ ಮಾರ್ಗದಲ್ಲಿ ಟೋಲ್ ಸಂಗ್ರಹ ನಿಧರ್ಾರ ಅವೈಜ್ಞಾನಿಕ. ಇದರಿಂದ ರೈತರು ಹಾಗೂ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಎರಡು ಟೋಲ್ಗಳ ಮಧ್ಯೆ ಕನಿಷ್ಠ 40 ಕಿಮೀ ಅಂತರ ಇರಬೇಕೆಂಬ ನಿಯಮವಿದೆ. ಆದರೆ, ಈ ರಸ್ತೆ ಇರುವುದೇ 60 ಕಿಮೀ. ಎರಡು ಟೋಲ್ ಸಂಗ್ರಹ ಕೇಂದ್ರ ನಿಮರ್ಿರಿಸಿರುವುದು ಸಹ ಕಾನೂನುಬಾಹಿರವಾಗಿದೆ. ಒಟ್ಟಾರೆ ಈ ರಸ್ತೆ ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸಕರ್ಾರ ವಿಶ್ವಬ್ಯಾಂಕ್ಗೆ ತಪ್ಪು ಮಾಹಿತಿ ನೀಡಿ ಸಾಲ ಪಡೆದಿದೆ ಎಂಬ ಆರೋಪವಿದೆ.
ತಿಂಗಳ ಪಾಸ್ ದರವೂ ದುಬಾರಿ
ಈ ಮಾರ್ಗದಲ್ಲಿ ನಿಗದಿಪಡಿಸಿರುವ ಟೋಲ್ ಶುಲ್ಕ ಮಾನದಂಡವೂ ಸರಿಯಿಲ್ಲ. 60 ರೂ. ಟೋಲ್ ಶುಲ್ಕ ಇರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸ್ಥಳೀಯರಿಗೆ ತಿಂಗಳ ಪಾಸ್ ಶುಲ್ಕ 105 ರೂಪಾಯಿ ಇದ್ದರೆ, 15 ರೂಪಾಯಿ ಟೋಲ್ ಶುಲ್ಕ ಇರುವ ಈ ಮಾರ್ಗದಲ್ಲಿ ತಿಂಗಳ ಪಾಸ್ ದರ 245 ರೂಪಾಯಿ ನಿಗದಿಪಡಿಸಿರುವುದು ಯಾವ ನ್ಯಾಯ. ಬೈಲಹೊಂಗಲ ಆರ್ಟಿಒ ರಿಜಿಸ್ಟ್ರೇಶನ್ ಹೊಂದಿರುವ ಎಲ್ಲ ವಾಹನಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಬೇಕೆಂಬುದು ಹೋರಾಟಗಾರರ ಆಗ್ರಹವಾಗಿದೆ.
ಪ್ರಯಾಣಿಕರಿಗೆ ಸೌಲಭ್ಯಗಳು ಇಲ್ಲ
ಯಾವುದೇ ರಸ್ತೆಯನ್ನು ಅಭಿವೃದ್ಧಿಪಡಿಸಿ ಟೋಲ್ ಸಂಗ್ರಹ ಮಾಡಬೇಕಾದರೆ ಪ್ರಯಾಣಿಕರಿಗೆ ಹಲವು ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಅಲ್ಲದೆ ರಸ್ತೆ ಕಾಮಗಾರಿ ಸಂಪೂರ್ಣ ಮುಗಿದ ಬಳಿಕವೇ ಟೋಲ್ ಸಂಗ್ರಹ ಆರಂಭಿಸಬೇಕು. ಮುಖ್ಯರಸ್ತೆಗೆ ಹೊಂದಿಕೊಂಡಂತೆ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಪ್ರತಿ ಗ್ರಾಮಕ್ಕೆ ಬಸ್ ತಂಗುದಾನ ನಿಮರ್ಾಣ, ಅಲ್ಲಲ್ಲಿ ಶೌಚಾಲಯಗಳನ್ನು ನಿಮರ್ಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ. ಪ್ರಯಾಣಿಕರ ಸುರಕ್ಷತೆಗೆ 27ಥ7 ಸಂಚಾರಿ ತುತರ್ು ಚಿಕಿತ್ಸಾ ವಾಹನ, ಭದ್ರತಾ ವಾಹನ ಮುಂತಾದ ಸೌಲಭ್ಯಗಳನ್ನು ಪ್ರಯಾಣಿಕರಿಗೆ ಒದಗಿಸಬೇಕು.
ಆದರೆ, ಈ ಹೆದ್ದಾರಿ ನಿಮರ್ಾಣದಲ್ಲಿ ಅನೇಕ ನಿಯಮ ಗಾಳಿಗೆ ತೂರಲಾಗಿದೆ. ಇನ್ನೂ ಸಂಪೂರ್ಣ ಕಾಮಗಾರಿ ಮುಗಿದಿಲ್ಲ. ಬೆಳವಡಿ, ಸಂಪಗಾಂವ, ಸಾಣಿಕೊಪ್ಪ ಸೇರಿದಂತೆ ಆರೇಳು ಭಾಗದಲ್ಲಿ ಕಾಮಗಾರಿ ಅಪೂರ್ಣವಾಗಿದೆ. ಸೇತುವೆಗಳ ನಿಮರ್ಾಣ ಬಾಕಿ ಇದೆ. ಇಂತಹ ಕಡೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಚಾಲಕರು, ಸವಾರರಿಗೆ ಹರಸಾಹಸ ಮಾಡಬೇಕಿದೆ. ಶುಲ್ಕ ಕೊಟ್ಟು ಇಂತಹ ಅಪೂರ್ಣ ರಸ್ತೆಯಲ್ಲಿ ಸಾಗುವುದು ಯಾವ ನ್ಯಾಯ ಎಂಬುದು ಚಾಲಕರ ವಾದ.
60 ಕಿಮೀ ರಸ್ತೆ ವ್ಯಾಪ್ತಿಯಲ್ಲಿ ಒಂದೂ ಸಂಪರ್ಕ ರಸ್ತೆ, ಶೌಚಾಲಾಯ ಕಟ್ಟಡ ನಿಮರ್ಿಸಿಲ್ಲ. ಈ ಮೊದಲೇ ಇದ್ದ ಬಸ್ ತಂಗುದಾಣಗಳಿಗೆ ಬಣ್ಣ ಬಳಿದು ಕೆಆರ್ಡಿಸಿಎಲ್ ಎಂಬ ಫಲಕ ಬರೆಯಲಾಗಿದ್ದು, ಇದರಲ್ಲಿ ಭಾರಿ ಅವ್ಯವಹಾರ ನಡೆದಿದೆ. ಸ್ಥಳೀಯ ಜನಪ್ರತಿನಿಧಿಗಳ ಕೈಬಿಸಿ ಮಾಡಿ ಅವರು ಧ್ವನಿ ಎತ್ತದಂತೆ ನೋಡಿಕೊಳ್ಳಲಾಗಿದೆ ಎಂಬುದು ಸಂಘಟನೆಗಳ ಮುಖಂಡರ ಆರೋಪ.
ರಸ್ತೆ ಸುರಕ್ಷತಾ ಸಪ್ತಾಹ ನಿಮಿತ್ತ ಬೈಕ್ ರ್ಯಾಲಿ
ಬೆಳಗಾವಿ: 31ನೇ ರಾಷ್ಟೀಯ ರಸ್ತೆ ಸುರಕ್ಷತಾ ಸಪ್ತಾಹ 2020, ಅಂಗವಾಗಿ ಸಂಚಾರ ಉಪ ವಿಭಾಗದ ವತಿಯಿಂದ ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮ ಅಂಗವಾಗಿ ಗುರುವಾರ ಪೊಲೀಸ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭವಾದ ಯರ್ಾಲಿ ಅಶೋಕ ವೃತ್ತ, ಸಿಬಿಎಸ್ ಸರ್ಕಲ್, ಆರ್ ಟಿ ಓ ಸರ್ಕಲ್ ಚೆನ್ನಮ್ಮ ಸರ್ಕಲ್, ಬೋಗಾರವೇಸ್, ಗೋಗಟೆ ಸರ್ಕಲ್, ಗೋವಾವೆಸ್, ಆರ್ಪಿಡಿ ಸರ್ಕಲ್ ತಲುಪಿ ಅಲ್ಲಿಂದ 2ನೇ ರೈಲ್ವೆ ಗೇಟ್, ಗೋಗಟೆ ಸರ್ಕಲ್, ಬೋಗಾರವೆಸ್, ಕಿಲರ್ೊಸ್ಕರ್ ರಸ್ತೆ, ರಾಮದೇವ ಗಲ್ಲಿ, ಎಸ್ಎಮ್ಎಸ್ ಚೌಕ್, ಖಡೇ ಬಜಾರ್, ಸಿಬಿಎಸ್ ಸರ್ಕಲ್ ಮಾರ್ಗವಾಗಿ ಸಂಚರಿಸಿ ಆರ್ಟಿಓ ಸರ್ಕಲ್ ಗೆ ಮರಳಿ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಬೆಳಗಾವಿ ನಗರದ ಡಿಸಿಪಿ (ಅಪರಾಧ ಮತ್ತು ಸಂಚಾರ) ಯಶೋಧಾ ವಂಟಗುಡಿ, ಸಂಚಾರ ಠಾಣೆ ಪೊಲೀಸ್ ನಿರೀಕ್ಷಕ ನಂದೀಶ್ವರ ಕುಮಾರ, ಸಿಬ್ಬಂದಿ ಭಾಗವಹಿಸಿದ್ದರು.