ಇಂದು ನಿಮ್ಮ ಮನೆಗೆ ನಮ್ಮ ಪುಸ್ತಕ: ಪ್ರಾಧಿಕಾರದಿಂದ ಉಚಿತ ಪುಸ್ತಕ ವಿತರಣೆ

ಲೋಕದರ್ಶನ ವರದಿ

ಗಂಗಾವತಿ 14:  ಯುವ ಪೀಳಿಗೆಗೆ ಸಾಹಿತ್ಯ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರ ಡಿ. 15ರಂದು ನಿಮ್ಮ ಮನೆಗೆ ನಮ್ಮ ಪುಸ್ತಕ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹಿರಿಯ ಸಾಹಿತಿ ಪವನಕುಮಾರ ಗುಂಡೂರು ತಿಳಿಸಿದರು.

ಪತ್ರಿಕಾಭವನದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಓದುವ ಹವ್ಯಾಸ ದೂರವಾಗುತ್ತಿದೆ. ಓದುವ ಮತ್ತು ಪುಸ್ತಕ ಕೊಳ್ಳುವ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರ ರಾಜ್ಯದಾದ್ಯಂತ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.

ಹೈದ್ರಾಬಾದ ಕನರ್ಾಟಕ ಪ್ರದೇಶದಲ್ಲಿ ಸಾಕಷ್ಟು ಬರಹಗಾರರಿದ್ದಾರೆ. ಇವರನ್ನು ಉತ್ತೇಜಿಸಲು ಪ್ರಾಧಿಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಬರಹಗಾರರ ಪ್ರಥಮ ಕೃತಿಗೆ 15 ಸಾ.ರು. ನಗದು ಮತ್ತು ಪುರಸ್ಕಾರ ನೀಡಲಾಗುವದು. ಪ್ರಕಟಗೊಂಡು ಪ್ರತಿಯೊಂದು ಪುಸ್ತಕದ 1200 ಪ್ರತಿಗಳನ್ನು ಪ್ರಾಧಿಕಾರ ಖರೀದಿಸುವ ಮೂಲಕ ಆಥರ್ಿಕ ನೆರವು ನೀಡುತ್ತದೆ ಎಂದು ತಿಳಿಸಿದರು.

ಡಿ.15 ರಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ವಿವೇಕಾನಂದ ಕಾಲನಿಯಲ್ಲಿರುವ ಆದಾಪುರ ಬದ್ರಿನಾರಾಯಣ ಜೋಷಿಯವರ ನಿವಾಸದಲ್ಲಿ ಸಾಯಂಕಾಲ 6 ಗಂಟೆಗೆ ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ, ಹಂಪಿ ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಉಚಿತ ಪುಸ್ತಕ ನೀಡಲಾಗುವದು  ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಾಹಿತಿಗಳಾದ ಲಿಂಗಾರೆಡ್ಡಿ ಆಲೂರು, ವಿರುಪಾಕ್ಷಪ್ಪ ಕಲಕೇರಿ, ಗುಂಡೂರು ಶ್ರೀನಿವಾಸ ಮತ್ತು ವಿಷ್ಣುತೀರ್ಥ ಪಾಲ್ಗೊಂಡಿದ್ದರು.