ಲೋಕದರ್ಶನ ವರದಿ
ಮೂಡಲಗಿ: ತಾಲೂಕ ಆಡಳಿತ, ಪುರಸಭೆ, ಪ್ರದೇಶ ಕುರುಬರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ನ.15 ರಂದು ದಾಸ ಶ್ರೇಷ್ಠ ಶ್ರೀ ಕನಕದಾಸರ 532ನೇ ಜಯಂತ್ಸೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕನರ್ಾಟಕ ಪ್ರದೇಶ ಕುರಬರ ಸಂಘ ತಾಲೂಕಾ ಘಟಕದ ಅಧ್ಯಕ್ಷ ಡಾ.ಎಸ್.ಎಸ್.ಪಾಟೀಲ ತಿಳಿಸಿದ್ದಾರೆ.
ಪಟ್ಟಣದ ಶ್ರೀ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ಸಮಾರಂಭದ ಸಾನಿಧ್ಯವನ್ನು ಶ್ರೀ ಶ್ರೀಪಾದಬೋಧ ಸ್ವಾಮಿಗಳು, ಕವಲಗುಡ್ಡದ ಶ್ರೀ ಅಮರೇಶ್ವರ ಸ್ವಾಮಿಗಳು, ಹಡಿಗಿನಾಳದ ಶ್ರೀ ಮುತ್ತೇಶ್ವರ ಸ್ವಾಮಿಗಳು ಮತ್ತು ಸ್ಥಳೀಯ ಸಮಾಜದ ಗುರುಗಳಾದ ದುಂಡಪ್ಪ ವಡೆಯರ ವಹಿಸುವರು. ಅಧ್ಯಕ್ಷತೆ ಮತ್ತು ಉದ್ಘಾಟಕರಾಗಿ ಅರಬಾಂವಿ ಶಾಸಕ ಹಾಗೂ ಕೆ.ಎಮ್.ಎಫ್.ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ ಆಗಮಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ, ಕೇಂದ್ರ ರೇಲ್ವೆ ಸಚಿವ ಸುರೇಶ ಅಂಗಡಿ, ಕನರ್ಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾದ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಬಿ.ಡಿ.ಸಿ.ಸಿ.ಬ್ಯಾಂಕ ಉಪಾದ್ಯಕ್ಷ ಸುಭಾಸ ಡವಳೇಶ್ವರ, ಯುವ ದುರಿಣ ಅರವಿಂದ ದಳವಾಯಿ, ನಿವೃತ್ತ ತಾಲೂಕಾ ವೈದ್ಯಾಧಿಕಾರಿ ಆರ್.ಎಸ್.ಬೆನಚನಮರಡಿ, ಮೂಡಲಗಿ ತಾಲೂಕಾ ವ್ಯಾಪ್ತಿಯ ಹಾಲಿ,ಮಾಜಿ,ಜಿ.ಪಂ ಮತ್ತು ತಾ.ಪಂ. ಸದಸ್ಯರು, ಪ್ರಭಾ ಶುಗರ್ಸ್ ನಿದರ್ೇಶಕ ಸಿದ್ಲಿಂಗ ಕಂಬಳಿ, ಟಿ.ಎ.ಪಿ.ಸಿ.ಎಮ್.ಎಸ್.ಉಪಾದ್ಯಕ್ಷ ವಿಠ್ಠಲ್ ಪಾಟೀಲ ಅತಿಥಿಗಳಾಗಿ ಈರಣ್ಣ ಹೊಸೂರ, ಸಂತೋಷ ಸೋನವಾಲ್ಕರ, ರವೀಂದ್ರ ಸಣ್ಣಕ್ಕಿ, ಆರ್.ಬಿ ಹಂದಿಗುಂದ ಮತ್ತು ಸಮಾಜದ ಮುಖಂಡರು, ಅತಿಥಿ ಉಪನ್ಯಾಸಕರಾಗಿ ಭೀಮರಾವ ಘಂಟಿ ಆಗಮಿಸುವರು.