ಇಂದು ಮಾಸಣಗಿ ಗ್ರಾಮಗಳ ಕೆರೆಗಳಿಗೆ ಬಾಗಿನ ಅರ್ಪಣೆ

ಲೋಕದರ್ಶನವರದಿ

ಬ್ಯಾಡಗಿ:ಸಿರಿಗೆರೆ ಬೃಹನ್ಮಠದ ಡಾ.ಶಿವಮೂತರ್ಿ ಶಿವಾಚಾರ್ಯಶ್ರೀ ಹಾಗೂ ಪಂಚಮಸಾಲಿ ಪೀಠದ ಹಗರಿಬೊಮ್ಮನಹಳ್ಳಿ ಶಾಖಾಮಠದ ಮಹಾಂತ ಶಿವಾಚಾರ್ಯಶ್ರೀಗಳ ಸಾನಿಧ್ಯದಲ್ಲಿ ನ.7 ರಂದು ಗುರುವಾರ ಆಣೂರು, ಹಿರೇನಂದಿಹಳ್ಳಿ ಹಾಗೂ ಮಾಸಣಗಿ ಗ್ರಾಮಗಳ ಕೆರೆಗಳಿಗೆ ಬಾಗಿನ ಅಪರ್ಿಸುವುದು ಸೇರಿದಂತೆ ಆಣೂರಿನಲ್ಲಿ ಮಧ್ಯಾಹ್ನ 3 ಗಂಟೆಗೆ ಧರ್ಮಸಭೆ ಕಾರ್ಯಕ್ರಮಗಳು ನಡೆಯುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಗಂಗಣ್ಣ ಎಲಿ ತಿಳಿಸಿದರು.

 ಪಟ್ಟಣದ ವಿಎಸ್ಎಸ್ ಬ್ಯಾಂಕ್ನಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ, ಮಧ್ಯಾಹ್ನ 2 ಗಂಟೆಗೆ ಶಿಡೇನೂರಿಗೆ ಆಗಮಿಸುವ ಶ್ರೀಗಳು, ಹಿರೇನಂದಿಹಳ್ಳಿ ಹಾಗೂ ಮಾಸಣಗಿ ಕೆರೆಗಳಿಗೆ ಬಾಗಿನ ಅಪರ್ಿಸುವರು, ಮಧ್ಯಾಹ್ನ 2.30 ಕ್ಕೆ ಕೊಲ್ಲಾಪುರ ಮಾರ್ಗವಾಗಿ ಆಣೂರು ತಲುಪಲಿದ್ದು 2.30ಕ್ಕೆ ಆಣೂರು ಕೆರೆಗೆ ಬಾಗಿನ ಅಪರ್ಿಸಲಿದ್ದಾರೆ ಎಂದರು.

ಮಧ್ಯಾಹ್ನ 3 ಕ್ಕೆ ಧರ್ಮಸಭೆ: ತಾಲೂಕಿನ ಆಣೂರು ಗ್ರಾಮದ ಮಲ್ಲಿಕಾಜರ್ುನ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಮದ್ಯಾಹ್ನ 3 ಗಂಟೆಗೆ ಉಭಯಶ್ರೀಗಳ ಸಾನಿಧ್ಯದಲ್ಲಿ ಧರ್ಮಸಭೆ ಏರ್ಪಡಿಸಲಾಗಿದ್ದು, ಅದಕ್ಕೂ ಮುನ್ನ ಆಣೂರು ಗ್ರಾಮದಲ್ಲಿ ಮಹಿಳೆಯರು ಪೂರ್ಣ ಕುಂಭದೊಂದಿಗೆ ಶ್ರೀಗಳ ಮೆರವಣಿಗೆ ನಡೆಯಲಿದೆ ಎಂದರು.

ಶಾಸಕರು ಸಚಿವರ ಉಪಸ್ಥಿತಿ: ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ಬಸವರಾಜ ಶಿವಣ್ಣನವರ, ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ರಾಜ್ಯಾಧ್ಯಕ್ಷ ಎಸ್.ಆರ್. ಪಾಟೀಲ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಿವಯೋಗಿ ಶಿರೂರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಹಟ್ಟಿ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಮಲ್ಲಿಕಾಜರ್ುನ ಬಳ್ಳಾರಿ, ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ, ಉಪಾಧ್ಯಕ್ಷ ಕಿರಣ ಗಡಿಗೋಳ ವೇದಿಕೆಯಲ್ಲಿ ಉಪಸ್ಥಿತರಿರುವುದಾಗಿ ತಿಳಿಸಿದರು.

   ಎಲ್ಲರೂ ಪಾಲ್ಗೊಳ್ಳಿ: ಆಣೂರು ಕೆರೆ ತುಂಬಿಸುವ ಯೋಜನೆ ಅನುಷ್ಠಾನ ಹೋರಾಟಕ್ಕೆ ಸಹಕರಿಸಿದ ಎಲ್ಲ ಸಂಘಟನೆಗಳು, ರೈತ ಸಂಘದ ವಿವಿಧ ಗ್ರಾಮ ಘಟಕಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಇದೇ ಸಂರ್ಭದಲ್ಲಿ ಮನವಿ ಮಾಡಿದರು.

ಕೆಡಿಪಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ಜಾರಿ ಯಲ್ಲನಗೌಡ ಸೂಚನೆ