ಲೋಕದರ್ಶನವರದಿ
ಮಹಾಲಿಂಗಪುರ26 : ಸ್ಥಳೀಯ ಸಾಗರ ಪ್ರಕಾಶನ ಆಶ್ರಯದಲ್ಲಿ ಮಹೇಶ ಆರಿ ವಿರಚಿತ ಜಾಡರ ಮನೆಯ ಜಾನಪದ ಕೋಗಿಲೆ ಎಂಬ ಪುಸ್ತಕದ ಬಿಡುಗಡೆ ಸಮಾರಂಭವು ದಿ. 28 ರಂದು ರವಿವಾರ ಮುಂಜಾನೆ 10 ಘಂ.ಗೆ ಬಸ್ ನಿಲ್ದಾಣದ ಹತ್ತಿರವಿರುವ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಜರುಗುವುದು.
ಈ ಕಾರ್ಯಕ್ರಮದಲ್ಲಿ ಮ.ನಿ.ಪ್ರ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಶ್ರೀಗಳು ಭಾಗವಹಿಸುವರು. ಹುನ್ನೂರಿನ ಬಸವಜ್ಞಾನ ಗುರುಕುಲದ ಶರಣ ಡಾ. ಈಶ್ವರ ಮಂಟೂರ ಅವರು ಸಮ್ಮೂಖ ಭಾಗವಹಿಸುವರು. ಅಧ್ಯಕ್ಷತೆಯನ್ನು ಹಿಪ್ಪರಗಿಯ ಸಸ ಪ್ರಭು ಬೆನ್ನಾಳೆ ಮಹಾರಾಜರು ವಹಿಸುವರು.
ಈ ಕಾರ್ಯಕ್ರಮದ ಉಧ್ಘಾಟನೆಯನ್ನು ತೇರದಾಳ ಮತ ಕ್ಷೇತ್ರದ ಶಾಸಕರಾದ ಸಿದ್ದು ಕ ಸವದಿ ಮಾಡುವರು. ಪುಸ್ತಕ ಲೋಕಾರ್ಪಣೆಯನ್ನು ಮಾಜಿ ಸಚಿವೆ ಉಮಾಶ್ರೀ ಮಾಡುವರು. ಮುಖ್ಯ ಅತಿಥಿಗಳಾಗಿ ಬಿಜೆಪಿ ತೇರದಾಳ ಗ್ರಾಮೀಣ ಘಟಕದ ಅಧ್ಯಕ್ಷರಾದ ಬಸನಗೌಡ ಪಾಟೀಲ, ಸಾಹಿತಿಗಳಾದ ಅಶೋಕ ನರೋಡೆ, ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶೇಖರ ಅಂಗಡಿ, ಖ್ಯಾಥ ಹೃದಯ ರೋಗ ತಜ್ಞಾರಾದ ಡಾ. ಅಜೀತ ಕನಕರಡ್ಡಿ ಹಾಗೂ ಡಾ.ವಿಜಯ ಹಂಚಿನಾಳ, ಎಲ್.ಐ.ಸಿ ಅಭಿವೃದ್ದಿ ಅಧಿಕಾರಿ ಎಸ್.ಎಂ ಜಮಖಂಡಿ, ಪುರಸಭೆ ಮಾಜಿ ಅಧ್ಯಕ್ಷರಾದ ಬಸವರಾಜ ರಾಯರ. ಚಿತ್ರಕಲಾ ಶಿಕ್ಷಕರಾದ ಎಂ.ಐ ಡಾಂಗೆ. ಪುರಸಭೆ ಸದಸ್ಯರಾದ ಯಲ್ಲನಗೌಡ ಪಾಟೀಲ. ಎಲ್.ಐ.ಸಿ ಪ್ರತಿನಿಧಿ ಈರಣ್ಣ ಹಲಗತ್ತಿ. ಕಾಂಗ್ರೆಸ್ ತೇರದಾಳ ಬ್ಲಾಕ ಅಧ್ಯಕ್ಷರಾದ ಮಲ್ಲಪ್ಪ ಸಿಂಗಾಡಿ. ಗಿರಿಮಲ್ಲೇಶ್ವರ ಆಶ್ರಮದ ಅಧ್ಯಕ್ಷರಾದ ಡಾ. ಎಸ್.ಆರ್ ಹಿಡಕಲ್ ಆಗಮಿಸುವರು ಎಂದು ಪುಸ್ತಕ ಲೇಖಕ, ಕನ್ನಡಪ್ರಭ ವರದಿಗಾರರಾದ ಮಹೇಶ ಆರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.