ಲೋಕದರ್ಶನ ವರದಿ
ಇಂಡಿ: ತಾಲೂಕಿನ ಝಳಕಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಸರಣಿ ಅಪಘಾತ ಸಂಭವಿಸಿದೆ. ಎರಡು ಲಾರಿಗಳು ಮುಖಾಮುಖಿ ಡಿಕ್ಕಿ ನಂತರ ಲಾರಿಯ ಹಿಂಬದಿಯಲ್ಲಿದ್ದ ಕಾರ್ ಲಾರಿಗೆ ಡಿಕ್ಕಿ ಹೊಡೆದಿದೆ. ಮೃತ ಚಾಲಕರನ್ನು ದಾದೇಶ್ಯಾಮ ಪ್ರಭುಲಾಲ ನಾಯಕ, ಮೂಕೇಶ ಉರ್ಫ ಪಪ್ಪುಲಾಲ ಧನ್ನಾ ಗುರ್ಜರ, ಕನ್ನಯ್ಯಾಲಾಲ ಮಾಂಗೀಲಾಲ ಎಂದು ಗುರುತಿಸಲಾಗಿದೆ.
ಮುಖಾಮುಖಿಯಾಗಿ ಡಿಕ್ಕಿಯಾದ ಲಾರಿಗಳ ಇಬ್ಬರೂ ಚಾಲಕರು ಸ್ಥಳದಲ್ಲೇ ಸಾವನ್ನಪ್ಪಿದ್ದು ಪಲ್ಟಿಯಾದ ಲಾರಿಯಲ್ಲಿ ಕ್ಲೀನರ್ ಸಿಲುಕಿ ಸಾವನ್ನಪ್ಪಿದ್ದಾನೆ ಆಘಾತದ ಪರಿಣಾಮವಾಗಿ ಸುಮಾರು ಎರಡು ಘಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿ ಎರಡೂ ಬದಿಯಲ್ಲಿ ಸುಮಾರು ಹತ್ತು ಕಿ. ಮೀ ವರೆಗೆ ವಾಹನಗಳು ನಿಂತು ಟ್ರಾಫಿಕ್ ಜಾಮ್ ಆಗಿತ್ತು. ಪೊಲೀಸರು ಹಾಗೂ ಸಾರ್ವಜನಿಕರು ಪಲ್ಟಿಯಾದ ಲಾರಿಗಳ ತೆರವು ಕಾಯರ್ಾಚರಣೆ ನಡೆಸಿದ್ದರಿಂದ ಸಂಚಾರ ಮುಕ್ತವಾಯಿತು. ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.