ಲೋಕದರ್ಶನ ವರದಿ
ಗೋಕಾಕ, 28: ಮತ್ತೊಂದು ಕಾರನ್ನು ಓವರಟೇಕ್ ಮಾಡಲು ಹೋಗಿ ಎಟರ್ಿಗಾ ಕಾರೊಂದು ಪಲ್ಟಿಯಾಗಿ ಇಬ್ಬರು ಪತ್ರಕರ್ತರು ಸೇರಿ ಮೂವರು ಗಾಯಗೊಂಡಿರುವ ಘಟನೆ ಕಡಬಗಟ್ಟಿ ರಸ್ತೆಯ ಚೌಡೇಶ್ವರಿ ದೇವಸ್ಥಾನದ ಹತ್ತಿರ ಬುಧವಾರದಂದು ಬೆಳ್ಳಂಬೆಳಿಗ್ಗೆ ಜರುಗಿದೆ.
ನಗರದ ಪತ್ರಕರ್ತರಾದ ದೀಲಿಪ ಮಜಲೀಕರ, ಅವರ ಪತ್ನಿ ರಾಧಿಕಾ ಮಜಲೀಕರ ಹಾಗೂ ಇನ್ನೊಬ್ಬ ಮೂಡಲಗಿ ಪತ್ರಕರ್ತ ಲಿಂಗಪ್ಪ ಗಾಡವಿ ಅವರಿಗೆ ತೀವ್ರ ಪೆಟ್ಟಾಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಟರ್ಿಗಾ ಕಾರು ಪಲ್ಟಿಯಾದ ರಭಸಕ್ಕೆ ಕಾರು ಸಂಪೂರ್ಣ ಬುಡಮೇಲಾಗಿ ಬಿದ್ದಿರುವದು ಗಾಬರಿ ಮೂಡಿಸುತ್ತದೆ. ಈ ಕುರಿತು ಗೋಕಾಕ ಗ್ರಾಮೀಣ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.