ವ್ಯಕ್ತಿಯ ಜೀವನದಲ್ಲಿ ಮೂವರು ಗುರುಗಳು: ನಿಜಗುಣಪ್ರಭು ಶ್ರೀಗಳು

ಬೈಲಹೊಂಗಲ 29: ವ್ಯಕ್ತಿಯ ಜೀವನದಲ್ಲಿ ಮೂರು ರೀತಿಯ ಗುರುಗಳ ಕಾಣಬಹುದು. ತಾಯಿ, ಪ್ರಾಥಮಿಕ ಶಾಲಾ ಶಿಕ್ಷಕ, ಆಧ್ಯಾತ್ಮದ ಗುರು. ಆದರೆ ತಾಯಿಯು ತನ್ನ ಎದೆೆಯ ಹಾಲುಣಿಸುವುದರ ಜೊತೆಗೆ ಸೃಷ್ಠಿಯ ಸೌಂದರ್ಯದ ಅನುಭವಕ್ಕೆ ಸ್ಪರ್ಶ ನೀಡುವಳಾಗಿ ವ್ಯಕ್ತಿಯ ಮೊದಲ ಗುರುವಿನ ಸ್ಥಾನದಲ್ಲಿರುವಳು ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳು ಹೇಳಿದರು.

  ಅವರು ತಾಲೂಕಿನ ನೇಗಿನಹಾಳ ಗ್ರಾಮದ ವಿಠ್ಠಲ-ರುಕ್ಮಿಣಿ ಮಂದಿರದಲ್ಲಿ ಸಂತ ಜ್ಞಾನೇಶ್ವರ ಹಾಗೂ ತುಕಾರಾಮ ಮಹಾರಾಜರ ಮೂತರ್ಿ ಪ್ರತಿಷ್ಠಾಪನೆಯ ದ್ವೀತಿಯ ವಾಷರ್ೀಕೋತ್ಸವ ನಿಮಿತ್ತ ನಿವೃತ್ತ ಶಿಕ್ಷಕರಿಗೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಮಹನಿಯರಿಗೆ ಸನ್ಮಾನ ಸಮಾರಂಭದಲ್ಲಿ ಸಾನಿದ್ಯವಹಿಸಿ ಮಾತನಾಡಿ, ನಮ್ಮ ದೇಶದ ಮೊದಲ ಮಂತ್ರವೇ ಮಾತೃದೇವೂಭವ ಎಂಬುವುದಾಗಿದ್ದು ಭೂಮಿಯ ಮೇಲೆ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾದ್ಯವಿಲ್ಲಾ. ತಾಯಿ ತನು ಶುದ್ಧ ಮಾಡಿದರೆ, ಪ್ರಾಥಮಿಕ ಶಾಲಾ ಶಿಕ್ಷಕ ಮನ ಶುದ್ಧ ಮಾಡುವನು ಜೊತೆಗೆ ಆತ್ಮ ಶುದ್ಧಿಗೆ ಆಧ್ಯಾತ್ಮ ಗುರುವಿನ ಅವಶ್ಯಕತೆ ಇದೆ. ಅಹಂಕಾರ ತೊರೆದು ಆತ್ಮದ ಸುಖ ನೀಡಿ ಕತ್ತಲೆ ಕಳೆಯುವವನೇ ನಿಜವಾದ ಗುರು ಎಂದು ತಿಳಿಸಿದರು.

     50ಕ್ಕೂ ಅಧಿಕ ನಿವೃತ್ತ ಶಿಕ್ಷಕರು, ಹಾಗೂ ಕೆ.ಇ.ಎಸ್ ಅಧಿಕಾರಿಗಳನ್ನು ಸತ್ಕರಿಸಲಾಯಿತು.

     ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದ ಬಸವ ಸಿದ್ಧಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವವಹಿಸಿ ಇಡೀ ಮಾನವಕುಲಕ್ಕೆ ಸುಂದರ ಬದುಕು ನಿಮರ್ಿಸಲು ಮಾರ್ಗದರ್ಶನ ಮಾಡುವಂತಹ ಜ್ಞಾನದ ಚಿಲುಮೆ ಸಂತ ಜ್ಞಾನೇಶ್ವರ ಹಾಗೂ ತುಕಾರಾಮ ಮಹಾರಾಜರು ಎಂದು ಮಾತನಾಡಿದರು.

     ಸಂಪಗಾವಿ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ, ಅರವಿಂದ ದಳವಾಯಿ, ಕೆ.ಇ.ಎಸ್ ಅಧಿಕಾರಿ ಪ್ರಕಾಶ ಭೂತಾಳಿ ಮಾತನಾಡಿದರು. 

   ಮುಖ್ಯ ಅತಿಥಿಗಳಾಗಿ  ತಾ.ಪಂ ಸದಸ್ಯ ಮಡಿವಾಳಪ್ಪ ಕುಲ್ಲೋಳ್ಳಿ, ಗ್ರಾ.ಪಂ ಅಧ್ಯಕ್ಷೆ ಸುವರ್ಣ ಕಾರಿಮನಿ, ಉಪಾದ್ಯಕ್ಷ ಮಹಾದೇವಪ್ಪ ನರಸನ್ನವರ, ಪಿ.ಕೆ.ಪಿ.ಎಸ್ ಅದ್ಯಕ್ಷ ಮಲ್ಲನಗೌಡ ಪಾಟೀಲ, ಭೀಮಪ್ಪ ಭೂತಾಳಿ, ಪ್ರಾಚಾರ್ಯರಾದ ಚಂದ್ರಶೇಖರ ಮೆಳವಂಕಿ, ವಿಠ್ಠಲ ಮಂದಿರ ಹವಾಲ್ದಾರ ಸಿದ್ಧಪ್ಪ ಕಾರಿಮನಿ, ವೇದಿಕೆ ಸಮಿತಿ ಸಂಚಾಲಕ ಮಲ್ಲಪ್ಪ ಭೂತಾಳಿ ಮತ್ತಿತರರು ಇದ್ದರು. 

      ಸತೀಶ ಕಾರಿಮನಿ ಸ್ವಾಗತಿಸಿದರು, ರಾಮಣ್ಣ ತೋರಣಗಟ್ಟಿ ನಿರೂಪಿಸಿದರು. ಕೃಷ್ಣಾಜಿ ಕುಲಕಣರ್ಿ ವಂದಿಸಿದರು.