ಶ್ರೀಶೈಲಕ್ಕೆ ಸಹಸ್ರಾರು ಭಕ್ತರು ಕಂಬಿಗಳೊಂದಿಗೆ ಪಾದಯಾತ್ರೆ ಸಂತೋಷ ಕಉಮಾರ ಕಾಮತ

Thousands of devotees walk to Srisailam with crutches, Santhosh Kaumara Kamata

 ಶ್ರೀಶೈಲಕ್ಕೆ ಸಹಸ್ರಾರು ಭಕ್ತರು ಕಂಬಿಗಳೊಂದಿಗೆ ಪಾದಯಾತ್ರೆ  ಸಂತೋಷ ಕಉಮಾರ ಕಾಮತ 

ಮಾಂಜರಿ : ಅಸಂಖ್ಯ ಭಕ್ತ ಸಾಗರವನ್ನು ಹೊಂದಿರುವ ಆಂಧ್ರ​‍್ರದೇಶದ ಶ್ರೀಶೈಲಂ (ಶ್ರೀಶೈಲ) ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಉತ್ತರ ಕರ್ನಾಟಕದ ಅಪಾರ ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ. ಚಿಕ್ಕೋಡಿ ಅಂಕಲಿ ಕಲ್ಲೋಳ ಶಿರಗುಪ್ಪಿ ಮಾಂಜರಿ ಇಂಗಳಿ ಅಂಕಲಿ ಮತ್ತು ರಾಯಬಾಗ್ ತಾಲೂಕಿನ ಗ್ರಾಮಗಳ ಮೂಲಕ ಹಾಯ್ದು ಹೋಗುತ್ತಿರುವ ಅಪಾರ ಭಕ್ತ ಗಣಕ್ಕೆ ಸ್ವಯಂ ಸೇವಾ ಕರ್ತರ ಸೇವೆ ಗಮನ ಸೆಳೆದಿದೆ. 

ಹಿಂದೂ ಕ್ಯಾಲೆಂಡರ ಅನುಸಾರ ಹೊಸ ವರ್ಷ ಆಚರಿಸುವ ಯುಗಾದಿ ಹಬ್ಬದಂದು ಶಿವನ ಮಹಾಕ್ಷೇತ್ರ ಶ್ರೀಶೈಲ ಜಾತ್ರೆಗೆ ಸಹಸ್ರಾರು ಭಕ್ತರು ಕಂಬಿಗಳೊಂದಿಗೆ ಭಕ್ತಿಯ ಹೆಜ್ಜೆ ಹಾಕಿದ್ದಾರೆ. ಉತ್ತರ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತ ಸಮೂಹ ಮಲ್ಲಯ್ಯನ ದರುಶನಕ್ಕೆ ಜಮಖಂಡಿ ಬಾಗಲಕೋಟೆ ಮುಖಾಂತರ ಹಾಯ್ದು ಹೋಗುವ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗಿದೆ. ಸಂಭ್ರಮದಿಂದ ಶ್ರೀಶೈಲ ಮಲ್ಲಿಕಾರ್ಜುನ ಕಾಣಲು ಹೊರಟಿದ್ದು ಅಚ್ಚರಿ ಮೂಡಿಸಿತು. ಕೆಲವರು ಮರಗಾಲಕಟ್ಟಿಕೊಂಡು ಹೊರಟಿದ್ದು ಗಮನ ಸೆಳೆಯಿತು. ಮೂಕ ಬಸವಣ್ಣಗಳು ಸಹ ಪಾದಯಾತ್ರೆಗಳ ಜೊತೆ ಹೆಜ್ಜೆ ಹಾಕುತ್ತಿರುವುದು ಭಕ್ತಿ ಪರಂಪರೆ ಸಾಕ್ಷಿಕರಿಸಿದೆ.ಇಲ್ಲದೇ ಮಲ್ಲಿಕಾರ್ಜುನನ ಸೇವೆಗೆ ಮುಂದಾಗಿದ್ದಾರೆ. 

ಮಹಾಶಿವರಾತ್ರಿ ಮುಗಿದ ನಂತರ ಹೋಳಿ ಹುಣ್ಣಿಮೆ ಎರಡು ದಿನ ಬಾಕಿ ಇರುವಾಗ ಪಾದಯಾತ್ರೆ ಆರಂಭಿಸಿ ಯುಗಾದಿ ಒಂದು ದಿನ ಮುನ್ನ ಇರುವಾಗಲೆ ಶ್ರೀಶೈಲ ತಲುಪುತ್ತಾರೆ. ಯುಗಾದಿ ಅಮವಾಸ್ಯೆ ಹಾಗೂ ಪಾಡ್ಯದಂದು ಜರುಗುವ ಜಾತ್ರೆ ಸಡಗರಕ್ಕೆ ಸಾಕ್ಷಿಯಾಗುತ್ತಾರೆ. 

ನಾವು ಹೊಂಟೇವ ಶ್ರೀಶೈಲ ನೋಡಲಾಕ.. ಸ್ವಾಮಿ ಮಲಯ್ಯನ ದರುಶನ ಮಾಡೋದಕ...ಗೀಯ ಗಾ... ಗಾಗೀಯ ಗಾ.. ಎಂದು ಉರಿವ ಬಿಸಿಲು ಲೆಕ್ಕಿಸದೇ ಗೀಗಿಪದ ಹಾಡುತ್ತ, ಶಿವ ಸ್ಮರಣೆ ಧ್ಯಾನಿಸುತ್ತಾ ಪಾದಯಾತ್ರೆ ಹೊರಟಿರುತ್ತಾರೆ. ಅಲ್ಲದೆ ಮರಗಾಲು ಕಟ್ಟಿಕೊಂಡು, ದಿರ್ಘ ದಂಡ ನಮಸ್ಕಾರ ಹಾಕುತ್ತ, ತೇರು ಎಳೆಯುತ್ತಾ, ಮಲ್ಲಯ್ಯನ ಕಂಬಿಗಳನ್ನು ಹಿಡಿದು ಸಾಗುವ ದೃಶ್ಯ ಭಕ್ತಿಯ ಭಾವನೆ ಹರಿಸುವಂತೆ ಮಾಡುತ್ತದೆ. 

ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರ, ಕರ್ನಾಟಕ ಗಡಿ ಭಾಗದ ಅಸಂಖ್ಯಾತ ಭಕ್ತರು ಪಾದಾಯತ್ರೆ ಮೂಲಕ ತೆರಳುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯ ಮೂಲಕ ಹಾಯ್ದು ಹೋಗುವ ಗ್ರಾಮಗಳಲ್ಲಿ ರಾತ್ರಿ ವೇಳೆ ವಿಶ್ರಾಂತಿ ಪಡೆಯುತ್ತಿದ್ದ ಭಕ್ತಾದಿಗಳಿಗೆ ಅನ್ನ ಸಂತರೆ​‍್ಣ, ವಿವಿಧ ಬಗೆಯ ಹಣ್ಣು ಹಂಪಲು, ಎಳನೀರು, ಪಾನಕ, ಮಜ್ಜಿಗೆ, ಗಂಜಿ ನೀಡಿ ಸೇವೆ ಮಾಡಲಾಗುತ್ತಿದೆ. ಅಲ್ಲದೆ ನೋವು ನಿವಾರಣೆಯ ಓಷೋಧಪಚಾರ ಒದಗಿಸಲಾಗುತಿದೆ. ಇನ್ನೂ ಕೆಲವೆಡೆ ಪಾದಯಾತ್ರಿಗಳ ಅಂಗಗಳಿಗೆ ಒತ್ತಿ ಮಸಾಜ್ ಮೂಲಕ ನಗರದ ಸೇವಾಕರ್ತರು ಯಾತ್ರಿಗಳ ಸಹಾಯ ಮಾಡುತ್ತಿದ್ದಾರೆ. ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಜಾತಿ, ಧರ್ಮದ ಬೇಧಭಾವ ಇಲ್ಲದೇ ಮಲ್ಲಿಕಾರ್ಜುನನ ಸೇವೆಗೆ ಮುಂದಾಗಿದ್ದಾರೆ.