ಲೋಕದರ್ಶನ ವರದಿ
ಬಿಎಸ್‌ಎಸ್ ಮೈಕ್ರೋಫೈನಾನ್ಸ್ ಸಂಸ್ಥೆಯು ಬಡ ಕುಟುಂಬಗಳ ಮಕ್ಕಳಿಗೆ ಶಿಷ್ಯ ವೇತನ
ಹಾವೇರಿ 17: ಬಿಎಸ್‌ಎಸ್ ಮೈಕ್ರೋಫೈನಾನ್ಸ್ ಸಂಸ್ಥೆಯು ಬಡ ಕುಟುಂಬಗಳ ಮಕ್ಕಳಿಗೆ ಹಾಗೂ ಸರ್ಕಾರಿ ಶಾಲೆಯಲ್ಲಿ ಕಲಿತ ಪಿಯುಸಿ ಹಾಗೂ ಪದವಿ ಓದುತ್ತಿರುವವರಿಗೆ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುವ ಮೂಲಕ ಉನ್ನತ ಕಾರ್ಯಮಾಡುತ್ತಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ. ಶಿರೋಳಕರ ಹೇಳಿದರು.
ಇಲ್ಲಿನ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಬೆಂಗಳೂರಿನ ಬಿಎಸ್‌ಎಸ್ ಮೈಕ್ರೋಫೈನಾನ್ಸ್ ಲಿ ಸಂಸ್ಥೆಯವರು ಆಯೋಜಿಸಿದ್ದ ಬಡ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡಮಕ್ಕಳು ಉತ್ತಮವಾಗಿ ಓದುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು, ಪೊಲೀಸ್‌ಇಲಾಖೆಗೆ ಕೆಲಸಕ್ಕೆ ಬರಬೇಕು, ಪೊಲೀಸ್ ಲಸಕ್ಕೆ ಯಾವುದೇ ಲಂಚಕೊಡಬೇಕಾಗಿಲ್ಲ ಎಂದ ಅವರು ಈಗಿನ ಮಕ್ಕಳು ಮೊಬೈಲ್ ಗಳಿಂದ ಜಾಲತಾಣಗಳಿಂದ ಹಾಗೂ ದುಶ್ಚಟಗಳಿಂದ ದೂರವಿದ್ದು ಓದಿನ ಕಡೆಗೆ ಗಮನ ನೀಡಿ ಎಂದು ಕಿವಿಮಾತು ಹೇಳಿದರು.
ಹಾವೇರಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ ಅಣ್ಣಯ್ಯ ಆರ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಬಿಎಸ್ ಎಸ್ ಮೈಕ್ರೋಫೈನಾನ್ಸ್ ಸಂಸ್ಥೆ ಶಿಕ್ಷಣ, ಆರೋಗ್ಯ, ಹೈನುಗಾರಿಕೆ ಅಲ್ಲದೆ ಇನ್ನೂ ಅನೇಕ ರೀತಿಯಲ್ಲಿ ಬಡಕುಟುಂಬಗಳಿಗೆ ಸಹಾಯಾ ಮಾಡುತ್ತಾ ಬಂದಿದೆ. ನಮ್ಮ ಬ್ಯಾಂಕಿನಲ್ಲೂ ಅನೇಕ ರೀತಿಯ ಬಡಜನರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳಿದ್ದು, ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮತ್ತೊಬ್ಬ ಅತಿಥಿ ಕರ್ನಾಟಕ ನಾರ್ಥನ ಸ್ಟೇಟ್ ಹೆಡ್ ರಘು ಎನ್.ಸಿ. ಮಾತನಾಡಿ ಮಹಿಳೆ0ುರು ಅವಶ್ಯಕತೆಗೆ ತಕ್ಕಷ್ಟು ಸಾಲವನ್ನು ಪಡೆದು ಮರುಪಾವತಿ ಶಿಸ್ತನ್ನುಕಾಪಾಡಿಕೊಳ್ಳಬೇಕ್ತು. ಬಿಎಸ್‌ಎಸ್ಮೈಕ್ರೋಫೈನಾನ್ಸ್ ಸಾಲ ಸೌಲಭ್ಯ ನೀಡುವುದು ಮಾತ್ರವಲ್ಲದೆ, ಎಲ್ಲಾ ಕಡೆಗೂ ಸಮಾಜಮುಖಿ ಕಾರ್ಯಗಳಾದ ಶಾಲಾ ಅಭಿವೃದ್ಧಿ ಕಾರ್ಯಕ್ರಮ, ಪ್ರವಾಹಸಂತ್ರಸ್ಥರಿಗೆ ಅಹಾರದ ಕಿಟ್ ವಿತರಣೆ ಮತ್ತು ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ,ಪೀಠೋಪಕರಣಗಳ ವ್ಯವಸ್ಥೆ, ಆಧುನಿಕ ಶಿಕ್ಷಣ ನೀಡಲು ಕಂಪ್ಯೂಟರ್ ಒದಗಿಸುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಸಂಸ್ಥೆಯ ಸಮಗ್ರ ಜಾನುವಾರು ಅಭಿವೃದ್ಧಿ ಕೇಂದ್ರಗಳನ್ನು ಕರ್ನಾಟಕದಲ್ಲಿ ಮಂಡ್ಯ, ಗದಗ, ಹಾವೇರಿ, ಧಾರವಾಡ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಕಲ್ಪಿಸುತ್ತಿದೆ. ಅದರಂತೆ ಬೇರೆರಾಜ್ಯಗಳಾದ ಬಿಹಾರ, ಮಹರಾಷ್ಟ್ರ ಮತ್ತು ಮಧ್ಯ ಪ್ರದೇಶದಲ್ಲಿ ಹೈನುಗಾರಿಕೆ ಯ ಮುಖಾಂತರ ರೈತರ ಏಳಿಗೆಗೆ ಶ್ರಮಿಸುತ್ತಿದೆ ಎಂದ ಅವರು ವಿದ್ಯಾರ್ಥಿ/ ವಿದ್ಯಾರ್ಥಿನಿ0ುರು ಶಿಕ್ಷಣದಲ್ಲಿ ಅತ್ಯುನ್ನತ ಹುದ್ದೆಗಳಾದ ಐಎಎಸ್, ಐಪಿಎಸ್ ಗುರಿ ಹೊಂದಲು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಸಂಸ್ಥೆಯ ಪ್ರಮುಖರಾದ ಪಂಡಿತ್ ಗಂಗಾಧರ ಪಾಟೀಲ್, ಪ್ರಶಾಂತ್ ಕುಮಾರ್ ಎ, ಸಂದೇಶ ಜಿ.ಎ, ಚಂದನ್, ಹೇಮಂತ್‌ಗೌಡ, ಶ್ರೀಕಾಂತ್‌ಎಚ್.ಸಿ, ಪ್ರದೀಪ್ ಕೆ ಮತ್ತಿತರರು ಭಾಗವಹಿಸಿದ್ದರು.ಸಮಾರಂಭದಲ್ಲಿ ಹಾವೇರಿ ಜಿಲ್ಲೆಯ ಸುಮಾರು 276 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ 5.53 ಲಕ್ಷರೂ ವಿದ್ಯಾರ್ಥಿವೇತನ ವಿತರಿಸಲಾಯಿತು.