ಕೊಲೆ ಆರೋಪಿಗಳನ್ನೆಲ್ಲಾ ಬಂಧಿಸಿ ಶೀಘ್ರ ಜೈಲಿಗೆ ಅಟ್ಟದಿದ್ದರೆ
ರಾಣೇಬೆನ್ನೂರು 15 : ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ರಮೇಶ ಬ್ಯಾಡಗಿ (22) ಎಂಬ ಯುವತಿಯ ಶವ ರಾಣೇಬೆನ್ನೂರು ತಾಲೂಕಿನ ಪತ್ತೆಪುರ ಗ್ರಾಮದ ತುಂಗಭದ್ರಾ ನದಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಮೂಡಿದ್ದು ಈಗಾಗಲೆ ಈ ಪ್ರಕರಣದಲ್ಲಿ ಪೊಲೀಸರು ಒರ್ವ ವ್ಯಕ್ತಿಯನ್ನು ಬಂಧಿಸಿರುವುದು ತಿಳಿದು ಬಂದಿದ್ದು ಇನ್ನುಳಿದ ಎಲ್ಲಾ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿ ಆಕೆಯ ಸಾವಿಗೆ ನ್ಯಾಯ ಕೊಡದಿದ್ದರೆ ರಾಜ್ಯಾದ್ಯಂತ ‘ಜಸ್ಟಿಸ್ ಫಾರ್ ಸ್ವಾತಿ’ ಅಭಿಯಾನ ಆರಂಭಿಸಲಾಗುವುದೆಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಎಚ್ಚರಿಸಿದ್ದಾರೆ.
ದೂರದ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಳ ಸಾವಿನ ಪ್ರಕರಣಕ್ಕೆ ನ್ಯಾಯ ಕೊಡಿಸಲು ಹೋರಾಡುವ ಪ್ರಜ್ಞಾವಂತರು ಈ ಅಮಾಯಕ ಮುಗ್ದ ಸ್ವಾತಿಯ ಸಾವಿಗೆ ನ್ಯಾಯ ಏಕೆ ಕೇಳಬಾರದು ಎಂದು ಪ್ರಶ್ನಿಸಿರುವ ಪಾಟೀಲರು ಈ ಬಗ್ಗೆ ಸರ್ಕಾರ ಮತ್ತು ಗೃಹಮಂತ್ರಿಗಳಿಗೆ ತುರ್ತು ಈ ಮೇಲ್ ಸಂದೇಶ ರವಾನಿಸಿ ಎಚ್ಚರಿಸಿದ್ದಾರೆ.