ಕೂಲಿಕಾಮರ್ಿಕರೊಂದಿಗೆ ಭೋಜನದ ಮೂಲಕ ಈದ ಮಿಲಾದ ಆಚರಣೆ

ಲೋಕದರ್ಶನ ವರದಿ

ಬೈಲಹೊಂಗಲ,21:  ತಾಪಂ. ಕಾರ್ಯನಿವರ್ಾಹಣಾಧಿಕಾರಿ ಸಮೀರ ಮುಲ್ಲಾ ಅವರು ಈದ ಮಿಲಾದ ಹಬ್ಬವನ್ನು ವಿಶಿಷ್ಟವಾಗಿ ಬುಧವಾರ ಆಚರಿಸಿದರು.

  ಉಗರಖೋಡ ಗ್ರಾಮದಲ್ಲಿ ನಡೆಯುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ  ಕೆರೆ ಪುನಃಶ್ಚೇತನಗೊಳಿಸುವ ಕಾಮಗಾರಿಯ 145 ಜನ ಕೂಲಿ ಕಾಮರ್ಿಕರಿಗೆ ತಮ್ಮ ಸ್ವಂತ ವೆಚ್ಚದಲ್ಲಿ  ಮಧ್ಯಾಹ್ನದ ಊಟವನ್ನು ಏರ್ಪಡಿಸಿ ಕೂಲಿಕಾಮರ್ಿಕರಿಗೆ ಊಟವನ್ನು ಬಡಿಸಿ  ತಾವು ಸಹ ಕೂಲಿಕಾಮರ್ಿಕ ರೊಟ್ಟಿಗೆ  ಭೋಜನ ಸವಿದರು.

   ಎಲ್ಲ ಕೂಲಿ ಕಾಮರ್ಿಕರಿಗೆ ಈದ ಮಿಲಾದ ಹಬ್ಬದ ಶುಭಾಷಯಗಳನ್ನು ಕೋರಿ ಎಲ್ಲ ಕೂಲಿಕಾಮರ್ಿಕರು ಬಡತನದಿಂದ ಮುಕ್ತ ಹೊಂದಿ ಉತ್ತಮ ರೀತಿಯ ಜೀವನವನ್ನು ನಡೆಸಲು ದೇವರಲ್ಲಿ 

ಪ್ರಾಥರ್ಿಸಿದರು.