ನವದೆಹಲಿ, ಜೂನ್ ೧೪, ಚೀನಾದೊಂದಿಗೆ ದ್ವಿಪಕ್ಷೀಯ ಹಾಗೂ ಸೇನಾ ಮಟ್ಟದಲ್ಲಿ ಮಾತುಕತೆಗಳು ಮುಂದುವರಿದಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ. ಮಾತುಕತೆಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಚೀನಾ ತನ್ನ ಸನ್ನದ್ದತೆಯನ್ನು ವ್ಯಕ್ತಪಡಿಸಿದೆ. ಮಾತುಕತೆಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ .
ದೇಶದ ಹಿತಾಸಕ್ತಿಗಳ ವಿಷಯದಲ್ಲಿ ಯಾವುದೇ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಜಮ್ಮು ಜನ್ ಸಂವಾದ್ ಸಮಾವೇಶದಲ್ಲಿ ಬಿಜೆಪಿ ಹಿರಿಯನಾಯಕರೂ ಆಗಿರುವ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡು ಮಾತನಾಡಿದರು, ಇದಕ್ಕೂ ಮುನ್ನ ಭಯೋತ್ಪಾದಕರ ಗುಂಡೇಟಿಗೆ ಬಲಿಯಾದ ಸರಪಂಚ್ ಅಜಯ್ ಪಂಡಿತ್ ಅವರಿಗೆ ಸಂತಾಪ ಸಲ್ಲಿಸಿದ್ದರು.ಕಾಶ್ಮೀರಿ ಕಣಿವೆಯಲ್ಲಿ ೧೯೪೭ ರಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ ಮೊಹಮ್ಮದ್ ಮಖ್ಬುಲ್ ಶೆರ್ವಾನಿಗೆ ಅವರು ಗೌರವ ಸಲ್ಲಿಸಿದರು. ಈ ಹಿಂದೆ ಕಾಶ್ಮೀರದಲ್ಲಿ ಸ್ವತಂತ್ರಕ್ಕಾಗಿ ಪ್ರತಿಭಟನೆಗಳು ನಡೆಯುತ್ತಿದ್ದವು. ಅಲ್ಲಿ ಪಾಕಿಸ್ತಾನ ಮತ್ತು ಐಸಿಸ್ ಧ್ವಜಗಳು ಹಾರಾಟ ನಡೆಸಿದ ಘಟನೆಗಳನ್ನು ರಕ್ಷಣಾ ಸಚಿವರು ಸ್ಮರಿಸಿದರು. ಆದರೆ, ಈಗ ಕಾಶ್ಮೀರದಲ್ಲಿ ಭಾರರ ಧ್ವಜಗಳು ಮಾತ್ರ ಹಾರಾಡುತ್ತಿವೆ. ಭಾರತದಲ್ಲಿ ಉಳಿಯಬೇಕೆಂಬ ಬೇಡಿಕೆಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಜನರಿಂದ ಲೂ ಬರುತ್ತಿವೆ. ಭಾರತ ಅನ್ಯ ದೇಶಗಳಿಂದ ಸರಕುಗಳ ಆಮದು ನಿಲ್ಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಫ್ತು ಮಾಡುವ ಮಟ್ಟಕ್ಕೆ ನಾವು ಬೆಳೆಯಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.