ತುಮಕೂರಿನಲ್ಲಿ ಜರುಗಿದ 39ನೇ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರ

Award recipient at the 39th State Conference held at Tumkur

ತುಮಕೂರಿನಲ್ಲಿ ಜರುಗಿದ 39ನೇ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರ 

ಹಾವೇರಿ 20 :ಪ್ರಸಕ್ತ ವರ್ಷದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ) ನೀಡುವ ಟಿ.ಕೆ.ಮಲಗೊಂಡ ಪ್ರಶಸ್ತಿಗೆ (ಅತ್ಯುತ್ತಮ ತನಿಖಾ ವರದಿ) ವಿಜಯವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರಾದ ಕೇಶವಮೂರ್ತಿ ವಿ.ಬೇಲೂರ​‍್ಪನವರ (ಕೇಶವಮೂರ್ತಿ ವಿ.ಬಿ.) ಅವರು ಭಾಜನರಾಗಿ,ತುಮಕೂರಿನಲ್ಲಿ ಜರುಗಿದ 39ನೇ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಿದರು. 

  ರಾಣೆಬೆನ್ನೂರ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಕೇಶವಮೂರ್ತಿ ಅವರು ಎಂಎ (ಪತ್ರಿಕೋದ್ಯಮ),ಬಿಎಡ್ (ಇಂಗ್ಲಿಷ್) ವಿದ್ಯಾಭ್ಯಾಸ ಮುಗಿಸಿದ್ದಾರೆ. 

        ಸೇವೆಯ ವಿವರ: ಆರಂಭದಲ್ಲಿ ಟಿವಿ9 ಕನ್ನಡ ಬೆಂಗಳೂರಿನಲ್ಲಿ ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ವಿಜಯವಾಣಿ ದಿನಪತ್ರಿಕೆಯ ಬೆಂಗಳೂರು ಡೆಸ್ಕ್‌ ಹಾಗೂ ವರದಿಗಾರರಾಗಿ ವಿವಿಧ ವಿಭಾಗಗಳಲ್ಲಿ ಮೂರು ವರ್ಷ ಸೇವೆ.ಬಳಿಕ ಹುಬ್ಬಳ್ಳಿಯಲ್ಲಿ ಆರು ವರ್ಷ ಕ್ರೈಂ ಬೀಟ್ ವರದಿಗಾರರಾಗಿ ಸೇವೆಯ ನಂತರ ಎರಡೂವರೆ ವರ್ಷಗಳಿಂದ ವಿಜಯವಾಣಿ ಹಾವೇರಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರಿಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಅತ್ಯುತ್ತಮ ವರದಿಗೆ ಪ್ರಶಸ್ತಿ,ಪ್ರೌಢ್ ಇಂಡಿಯನ್ ಅವಾರ್ಡ ದೊರಕಿದೆ.ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ವಿದ್ಯಾವಿಷಯಕ ಪರಿಷತ್ ಸದಸ್ಯರಾಗಿ 2020-23ರವರೆಗೆ ಸೇವೆ.ಕಾಲೇಜ್ ಸಮಯದಲ್ಲಿ ಪತ್ರಿಕೆ ಹಂಚುವ ಕೆಲಸ ಮಾಡಿದ್ದು,ಮುಂದೆ ಒಂದು ಪತ್ರಕರ್ತನಾಗುವ ಕನಸು ಚಿಗುರುವಂತೆ ಮಾಡಿತು ಎಂದ ಅವರು ಪ್ರಶಸ್ತಿ ನೀಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ)ದ ಪದಾಧಿಕಾರಿಗಳಿಗೆ ಹಾಗೂ ಶುಭ ಹಾರೈಸಿದ ಸರ್ವರಿಗೂ ಧನ್ಯವಾದಗಳನ್ನು ಕೇಶವಮೂರ್ತಿ ವಿ.ಬಿ ಅವರು ತಿಳಿಸಿದ್ದಾರೆ.