ಯಶಸ್ವಿಯಾಗಿ ಜರುಗಿದ ಸಾಧಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿ

Award and poetry concert for the successful achievers

ಯಶಸ್ವಿಯಾಗಿ ಜರುಗಿದ ಸಾಧಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿ 

ಯಮಕನಮರಡಿ 20  : ಹುಕ್ಕೇರಿ ತಾಲೂಕಾ ಸಾಹಿತ್ಯ ಪರಿಷತ್ತು ಹಾಗೂ ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ಯಮಕನಮರಡಿ ಮತ್ತು ಸುಕ್ಷೇತ್ರ ಹುಣಸಿಕೋಳ್ಳಮಠ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಮಠದ ಸಭಾಭವನದಲ್ಲಿ ದಿ.19 ರಂದು ಆಯೋಜಿಸಲಾಗಿದ್ದ ಸಾಧಕರಿಗೆ ಗೌರವ ಸಮರೆ​‍್ಣ ಮತ್ತು ಕವಿಗೋಷ್ಠಿ ಸಮಾರಂಭ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನೂ ಪ ಪೂ ಸಿದ್ದಬಸವ ದೇವರು ಜಗದ್ಗುರು ಶೂನ್ಯ ಸಂಪಾದನಾ ಪೀಠ ಹುಣಸಿಕೋಳ್ಳಮಠ ಇವರು ವಹಿಸಿ ಕನ್ನಡ ನಾಡು ನುಡಿ ಜಲ ನೇಲ ಕುರಿತು ಆಶಿರ್ವಚನ ನಿಡಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪ ಪೂ ಡಾ. ಆನಂದ ಮಹಾರಾಜ ಗೋಸಾವಿ ಹರಿಮಂದಿರ ಯಮಕನಮರಡಿ ಹತ್ತರಗಿ ಇವರು ಮಾತನಾಡುತ್ತಾ ಕನ್ನಡಕ್ಕೆ ಸಾವಿರ ವರ್ಷದ ಇತಿಹಾಸ ಇದೆ ಪ್ರಥಮದಲ್ಲಿ ಹಳೆಗನ್ನಡ ಕಾವ್ಯಗಳಿಂದ ಪ್ರಾರಂಭವಾಗಿ ಕನ್ನಡ ನಾಡು ನುಡಿಗೆ ಹಳೆಗನ್ನಡವು ದಾರೀದೀಪ ಮಾಡಿಕೋಟ್ಟಿದೆ ಎಂದು ಹೆಳಿದರು. ಕನ್ನಡ ನಾಡುನುಡಿ ಜಲಗಳನ್ನು ರಕ್ಷಿಸುವುದರ ಜೋತೆಗೆ ಮಕ್ಕಳಿಗೆ ಕನ್ನಡ ಬಗ್ಗೆ ಉತ್ತಮ ಸಂಸ್ಕಾರ ನಿಡಬೇಕು ಇಂದಿನ ದಿನಮಾನಗಳಲ್ಲಿ ಮಕ್ಕಳಿಗೆ ಕನ್ನಡ ಸಂಸ್ಕಾರವನ್ನು ನೀಡುವುದನ್ನು ಬಿಟ್ಟು ಡ್ಯಾಡಿ ಮಮ್ಮಿ ಅಂಕಲ ಆಂಟಿ ಎಂಬ ಇಂಗ್ಲೀಷ ಶಬ್ದಗಳನ್ನು ಬಳಸುವುದರಿಂದ ಕನ್ನಡಕ್ಕೆ ದಕ್ಕೆ ಬರುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಣ್ಣಾ ಬಿಸಿರೋಟ್ಟಿ ವಹಿಸಿದ್ದರು. ಅತಿಥಿಗಳಾಗಿ ಕಿರಣಸಿಂಗ ರಜಪೂತ್, ಎಸ್ ಎಮ್ ಶಿರೂರ, ಗೀರೀಶ ಮೀಶ್ರಿಕೋಟಿ, ಎಲ್ ವ್ಹಿ ಪಾಟೀಲ, ಸಿದ್ದಪ್ಪಾ ಶಿಳ್ಳಿ ಉಪಸ್ಥಿತರಿದ್ದು ರವಿಂದ್ರ ಜಿಂಡ್ರಾಳೀ, ರಾಜು ನಾಶಿಪುಡಿ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು.  

ಕವಿಗೋಷ್ಠಿಯಲ್ಲಿ ಬಾಗವಹಿದ ಕವಿಗಳು ಡಿ ಬಿ ಗವಾನಿ, ಶ್ರೀಮತಿ ಮಾಯಾ ನಂದಿ, ಪ್ರಸಾದ ಕುಲಕರ್ಣಿ ಕಾಡೇಶ ಬಸ್ತವಾಡಿ, ಕುಮಾರಿ ಗಂಗವ್ವಾ ಮಠಪತಿ, ಶ್ರೀಮತಿ ಕಸ್ತೂರಿ ಚೌಗಲಾ, ಬಾಸ್ಕರ ಮಾನೆ, ಕುಮಾರ ಸತ್ಯಪ್ಪಾ ಅಡಿಕಿ ಪೂಜೇರಿ ಶ್ರೀಮತಿ ದೀಪಾ ಕಾಪಶಿ, ವಿಠ್ಠಲ ಬುಕ್ಕನಟ್ಟಿ, ನಿಜಲಿಂಗಯ್ಯಾ ಹಾಲದೇವರಮಠ ಮುಂತಾದವರು ತಮ್ಮ ಸ್ವ ರಚಿತ ಕವನಗಳನ್ನು ಮಂಡಿಸಿದರು. ಪ್ರಕಾಶ ಅವಲಕ್ಕಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.