ವರದಿ: ಸಚಿನ ಕೊರವರ
ಮುಂಡಗೋಡ 18: ಪಟ್ಟಣದಲ್ಲಿ ಕಳ್ಳತನ, ರಸ್ತೆ ಅಪಘಾತ, ಗಲಾಟೆ ಸೇರಿದಂತೆ ಯಾವುದೆ ಕಾನೂನು ಬಾಹೀರ ಕೃತ್ಯಗಳು ನಡೆದರೆ ಸಿಸಿಟಿವಿ ಸಹಾಯದಿಂದ ಪ್ರಕರಣ ಭೇದಿಸಲು ಪೊಲೀಸ್ ಇಲಾಖೆಗೆ ಸಹಕಾರಿ ಯಾಗುತ್ತದೆ. ಆದರೆ ಪಟ್ಟಣದಲ್ಲಿ ವಿವಿಧೆಡೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಇದ್ದೂ ಇಲ್ಲದಂತಿವೆ. ಕೆಟ್ಟು ಹೋದ ಕ್ಯಾಮೆರಾಗಳ ರಿಪೇರಿ ಇಲ್ಲ, ಅಪಘಾತ ಪ್ರಕರಣಗಳಿಗೆ ಸಾಕ್ಷಿಯೇ ಸಿಗುವುದಿಲ್ಲ ಕ್ಯಾಮೆರಾಗಳು ಕಣ್ಣು ಮುಚ್ಚಿದ್ದು, ಕುರುಡಾಗಿದೆ.
ಒಂದು ಊರಿನ ಕಣ್ಗಾವಲಿನ ವಿಷಯದಲ್ಲಿ ಸಿಸಿ ಕ್ಯಾಮೆರಾಗಳದ್ದು ಸಿಂಹಪಾಲು, ಸಿಸಿ ಕ್ಯಾಮೆರಾದಿಂದಲೇ ಎಷ್ಟೋ ಅಪರಾಧ ಪ್ರಕರಣಗಳು ಬಗೆಹರಿದಿವೆ. ಆದರೆ ಪಟ್ಟಣದ ವಿಷಯದಲ್ಲಿ ವ್ಯತಿರಿಕ್ತವಾದ ವಿಷಯ ನಡೆಯುತ್ತಿದೆ. ಶಾಲಾ ಕಾಲೇಜುಗಳು ಮುಂದೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಇದ್ದೂ ಇಲ್ಲದಂತಿವೆ. ಕೆಟ್ಟು ಹೋದ ಕ್ಯಾಮೆರಾಗಳ ರಿಪೇರಿ ಇಲ್ಲ, ಅಪಘಾತ ಪ್ರಕರಣಗಳಿಗೆ ಸಾಕ್ಷಿಯೇ ಸಿಗುವುದಿಲ್ಲ ಕಣ್ಣಿಲ್ಲದ ಸಿಸಿ ಕ್ಯಾಮೆರಾಗಳು ಮುಚ್ಚಿ ಕುರುಡಾಗಿದೆ. ತಾಲೂಕಿನ ಅಧಿಕ ಜನ ಸಂದಣಿಯ ಸ್ಥಳವಾದ ಬಸ್ ನಿಲ್ದಾಣದ ಸಿಸಿ ಕ್ಯಾಮೆರಾದ ಆಪರೇಟಿಂಗ್ ಕೇಬಲ್ ಗಳು ಹರಿದು ನೆಲಸೇರಿವೆ.
ಈ ಘಟನೆ ನಡೆದು ಮೂರು ದಿನ ಕಳೆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸಿದ್ದು ಸಿಸಿ ಕ್ಯಾಮೆರಾ ಹಾಳಾದ ಸಮಯದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ಯಾರು ಹೊಣೆ? ಎಂದು ಜನ ಪ್ರಶ್ನಿಸುತ್ತಿದ್ದಾರೆ.