ವರ್ಷಿಣಿ ಬಾರ್ & ರೆಸ್ಟೋರೆಂಟ್ ನಲ್ಲಿ ಕಳ್ಳತನ

ಲೋಕದರ್ಶನ ವರದಿ

ಚನ್ನಮ್ಮನ ಕಿತ್ತೂರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವರ್ಷಿಣಿ ಬಾರ್ & ರೆಸ್ಟೋರೆಂಟ್ನಲ್ಲಿ ಕಳ್ಳತನವಾಗಿದೆ.

  ರವಿವಾರ ರಾತ್ರಿ ವ್ಯಾಪಾರ ಮುಗಿಸಿಕೊಂಡು ಮ್ಯಾನೇಜರ ಹಾಗೂ ಸಿಬ್ಬಂದಿಗಳು ಮದ್ಯರಾತ್ರಿ 12 ಘಂಟೆಗೆ ಮನೆಗೆ ತೆರಳಿದಾಗ ಇದನ್ನು ಗಮನಿಸಿದ ಕಳ್ಳರು ಮಧ್ಯರಾತ್ರಿ 12.50 ಕ್ಕೆ ಬಾರ್ ಬಿಲ್ಡಿಂಗ್ ಮೇಲಗಡೆಯಿಂದ ಕಬ್ಬಿಣದ ಬಾಗಿಲನ್ನು ಮುರಿದು ಕೆಳಗಡೆ ಬಂದು ಇನ್ನೊಂದು ಬಾಗಿಲು ಮುರಿದು ಕ್ಯಾಷ ಕೌಂಟರ್ ಒಳಗೆ ಹೋಗಿ ರೂ 1.30 ಲಕ್ಷ ನಗದು ಹಣವನ್ನು ದೋಚಿಕೊಂಡು 1.10 ಕ್ಕೆ ಪರಾರಿಯಾಗಿದ್ದಾರೆ.

   ಘಟನಾ ಸ್ಥಳಕ್ಕೆ ಸಿಪಿಆಯ್ ಶ್ರೀಕಾಂತ ತೋಟಗಿ, ಎಎಸೈ ವಿ ವಿ ನವಲೆ, ಬೆರಚ್ಚು ತಜ್ಞರು, ಶ್ವಾನದಳ ತಂಡ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಈ ಕುರಿತು ಕಿತ್ತೂರ ಪೋಲಿಸ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ. ಕಳ್ಳನ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪರಾರಿಯಾಗಿದ್ದ ಕಳ್ಳರಿಗಾಗಿ ಶೋಧ ಕಾರ್ಯ ಮುಂದುವರೆದಿದೆ