ರಂಗ ಕಲಾವಿದರನ್ನು ಪ್ರೋತ್ಸಾಹಿಸಿದರೆ ರಂಗಭೂಮಿ ಜೀವಂತ: ಹೂಗಾರ

ಧಾರವಾಡ : ಸಿನೆಮಾ ಮತ್ತು ರಂಗಭೂಮಿಯ ಆಯಾಮಗಳನ್ನು ಅವಲೋಕನ ಮಾಡಿದಾಗ ಹಲವಾರು ವ್ಯತ್ಯಾಸಗಳಿರುವುದನ್ನು ಕಾಣಬಹುದು. ರಂಗಭೂಮಿ ನೈಜತೆಯ ಮತ್ತು ರಂಗದ ಮೇಲೆ ತಿದ್ದಿಕೊಳ್ಳಲು ಅವಕಾಶಗಳಿರುವುದಿಲ್ಲಾ ಆದರೆ ಸಿನೆಮಾದಲ್ಲಿ ಒಂದು ಡೈಲಾಗ ತಪ್ಪಾದರೆ ಮರು ಡೈಲಾಗ ಹೇಳಿಸಿ ತಿದ್ದಿಕೊಳ್ಳಲು ಅವಕಾಶವಿದೆ. ನೈಜತೆಯ ರಂಗಭೂಮಿಯು ಇಂದಿನ ದೃಶ್ಯ ಮಾಧ್ಯಮಗಳಿಂದ ಕಡೆಗಣಿಸುತ್ತಿರುವುದು ಬೇಸರದ ಸಂಗತಿಯೆಂದು ರಂಗಕಲಾವಿದರು ಮತ್ತು ಶಿಕ್ಷಕ ಶಿವಾನಂದ ಹೂಗಾರ ಹೇಳಿದರು.

ಅವರು ಧಾರವಾಡದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ರಂಗಸಂಗ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನವೆಂಬರ 3 ರಂದು ಶನಿವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಜೆ ಸರಿಯಾಗಿ 7-00 ಗಂಟೆಗೆ ಧಾರವಾಡದ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಉಮೇಶ ತೇಲಿ ರಚನೆ ಮತ್ತು ನಿದರ್ೇಶನದ ಟೂರಿಂಗ್ ಟಾಕೀಜ್ ಅಭಿನಯಿಸುವ ಹುಚ್ಚರ ಸಂತೆ  ಎಂಬ ಹಾಸ್ಯ ನಾಟಕದ ಉದ್ಘಾಟನೆ ಮಾಡಿ ಮಾತನಾಡುತ್ತಾ ನಿರಂತರವಾಗಿ ರಂಗಚಟುವಟಿಕೆಗಳು ನಡೆಯಲು ರಂಗಾಸಕ್ತರ ಸಹಕಾರ ಮುಖ್ಯವಾಗಿ ಬೇಕಾಗಿದೆ. ಪ್ರೇಕ್ಷಕ ವರ್ಗದವರು ಸದಾ ಪ್ರೋತ್ಸಾಹಿಸುತ್ತಾ ರಂಗ ಕಲಾವಿದರನ್ನು ಬೆಳೆಸಿದರೆ ರಂಗಭೂಮಿ ಜೀವಂತವಾಗಿರಲು ಸಾಧ್ಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಮತ್ತು ನೌಕರರ ಸಂಘದ ಜಿಲ್ಲಾ ಕಾರ್ಯದಶರ್ಿಗಳಾದ ಎಸ್.ಎಫ್.ಸಿದ್ದನಗೌಡರ ಮಾತನಾಡಿ ನಿತ್ಯ ಜೀವನದ ಒತ್ತಡದ ಬದುಕಿನಲ್ಲಿ ನಾವು ಇಂತಹ ಹಾಸ್ಯದಿಂದ ಮನಸ್ಸಿಗೆ ಹಗುರವಾಗುವದರಿಂದ ನೆಮ್ಮದಿಯ ಬದುಕು ಸಾಗಿಸಬಹುದು ಎಂದು ಹೇಳಿದರು.

ರಂಗಕಲಾವಿದ, ಶಿಕ್ಷಕರ ಸಂಘದ ಧಾರವಾಡ ತಾಲೂಕಾ ಕಾರ್ಯದಶರ್ಿಯಾದ ಬಸವರಾಜ ವಾಸನದ ಮಾತನಾಡಿ ಏಳಗಿ ನಟರಾಜ ಮತ್ತು ಜಗುಚಂದ್ರ ಅವರು ಆರಂಭದ ದಿನಗಳಲ್ಲಿ ರಂಗಭೂಮಿಯಲ್ಲಿ ಅನುಭವಿಸಿದ ಅನುಭವಗಳನ್ನು ಮೇಲುಕು ಹಾಕಿದರು.

ಪ್ರತಿಷ್ಠಾನದ ಅಧ್ಯಕ್ಷರಾದ ಕೆ ಎಚ್ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಷ್ಠಾನದ ಕಾರ್ಯದಶರ್ಿ ಮಾತರ್ಾಂಡಪ್ಪ ಎಮ್ ಕತ್ತಿ ನಿರೂಪಿಸಿದರು. ಸುರೇಶ ಬೇಟಗೇರಿ ಸ್ವಾಗತಿಸಿದರು. ನಾಗರಾಜ ಪಾಟೀಲ ವಂದಿಸಿದರು. ಚಲನಚಿತ್ರ ನಟ ಮತ್ತು ಹಾಸ್ಯ ನಟರಾದ ಯಶವಂತ ಸರದೇಶಪಾಡೆ, ಚಂದ್ರು ಶಿಲವಂತ. ಪವನ ಆದಿ ಹಾಜರಿದ್ದರು.

ನಂತರ ಉಮೇಶ ತೇಲಿ ರಚನೆ ಮತ್ತು ನಿದರ್ೇಶನದ ಟೂರಿಂಗ್ ಟಾಕೀಜ್ ಅಭಿನಯಿಸುವ ಹುಚ್ಚರ ಸಂತೆ ಎಂಬ ಹಾಸ್ಯ ನಾಟಕ ಪ್ರದರ್ಶನ ನಡೆಯಿತು.