ಲೋಕದರ್ಶನ ವರದಿ
ಯುವ ಜನಾಂಗ ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು: ಶಾಸಕ ಡಿ.ಎಮ್.ಐಹೊಳೆ
ರಾಯಬಾಗ, 22: ನಮ್ಮ ಉಡುಗೆ, ತೊಡುಗೆಗಳು ನಮ್ಮ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಇಂದಿನ ಯುವ ಜನಾಂಗ ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಮಂಗಳವಾರ ಪಟ್ಟಣದ ಸರ್ಕಾರ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೇ ನಮ್ಮ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಕೆಲಸ ಮಾಡಬೇಕಾಗಿದೆ. ಗ್ರಾಮೀಣ ಸೋಗಡಿನ ನಮ್ಮ ದೇಶವು ವೈವಿಧ್ಯಮಯತೆಯಿಂದ ಕೂಡಿದೆ ಎಂದರು.
ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಗ್ರಾಮೀಣ ಸೋಗಡಿನ ವೇಷಭೂಷಣ ತೊಟ್ಟು ಗಮನ ಸೆಳೆದರು. ಕಾಲೇಜ್ ಆವರಣದಲ್ಲಿ ನಡೆದ ಮಾದರಿ ಗ್ರಾಮೀಣ ಸಂತೆಯನ್ನು ಶಾಸಕರು ವಿಕ್ಷೀಸಿದರು.
ಜನಪದ ಕಲಾವಿದೆ ಮಾಲಾಬಾಯಿ ಸಾಂಬ್ರೆಕರ, ಪ್ರಾಚಾರ್ಯ ರಾಜಕುಮಾರ ಕಾಗೆ, ಡಾ. ಶಂಕರ ರಾಠೋಡ, ಡಾ.ಸಂತೋಷ ಮಾನೆ, ಡಾ.ವಿವೇಕಾನಂದ ಮಾನೆ, ಎಮ್.ಎಸ್.ಯಾದವಾಡೆ, ಮಾರುತಿ ಹಾಡಕರ, ಶಾನೂರ ಐಹೊಳೆ, ಡಾ.ರವಿ ಚಾಣಗಿ, ಡಾ.ಆರ್.ಎ.ಪ್ರಸಾದ, ಸಂತೋಷ ಸಮಾಜೆ, ಡಾ.ಉತ್ತಮ ಕಾಂಬಳೆ, ಜೆ.ಆರ್.ಕಿಲ್ಲೇದಾರ, ವಿಜಯಲಕ್ಷ್ಮೀ ಜಿ., ಸಿ.ಬಿ.ಕಲ್ಯಾಣಿ ಹಾಗೂ ಬೋಧಕೇತ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.