ಹದಗೆಟ್ಟ ಕಡಬಿ- ಬೋಳಕಡಬಿ ರಸ್ತೆ: ಪ್ರಯಾಣಿಕರ ಪರದಾಟ

ಕಡಬಿ 19: ಯರಗಟ್ಟಿ ತಾಲೂಕಿನ ಕಡಬಿಯಿಂದ ಬೋಳಕಡಬಿ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆ ತುಂಬಾ ಹದಗೆಟ್ಟಿದ್ದು ಈ ರಸ್ತೆಯನ್ನು ದುರಸ್ತಿ ಮಾಡದೆ ಸುಮಾರು ವರ್ಷಗಳಿಂದ ತಗ್ಗು ಗುಂಡಿಗಳನ್ನು ಮುಚ್ಚುತ್ತಾ ಬಂದಿದ್ದಾರೆ. ದುರಸ್ತಿ ಮಾಡಿದ ಎರಡು ಮೂರು ತಿಂಗಳಲ್ಲಿ ಕಿತ್ತು ಹೋಗಿರುತ್ತದೆ. ಆದರೆ ಒಂದು ವರ್ಷವಾದರೂ ಈ ರಸ್ತೆಯನ್ನು ದುರಸ್ತಿ ಮಾಡಲು ಸಂಬಂಧಪಟ್ಟ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಡಾಂಬರಿಕರಣಗೊಳಿಸದೆ ನೋಡಿ ನೋಡದ ಹಾಗೆ ಹೋಗುತ್ತಾರೆ ರಸ್ತೆ ದುರಸ್ತಿ ಮಾಡಲು ಮುಂದಾಗಿಲ್ಲ. 

ಕಡಬಿಯಿಂದ ಬೋಳಕಡಬಿ ಕೇವಲ 3 ಕಿ,ಮಿ ರಸ್ತೆ ಇದ್ದು ರಸ್ತೆ ದುರಸ್ತಿ ಬಗ್ಗೆ ಯಾವ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಈ ರಸ್ತೆಯು ತೆಗ್ಗು ಗುಂಡಿಗಳು ಬಿದ್ದು ಹಾಳಾಗಿದೆ. ಈ ರಸ್ತೆಯ ಅಕ್ಕ ಪಕ್ಕದಲ್ಲಿ ಸರಕಾರಿ ಜಾಲಿಗಳು ಬೆಳೆದು ನಿಂತಿವೆ ಜನಪ್ರತಿನಿಧಿಗಳನ್ನು ಅಧಿಕಾರಿಗಳನ್ನು ವಾಹನ ಸವಾರರು, ರೈತಾಪಿ ಜನರು ಹಿಡಿಶ್ಯಾಪ ಹಾಕುತ್ತಾ ಹೋಗುವದನ್ನು ಪ್ರತಿನಿತ್ಯ ಕಾಣಬಹುದು.  

ಬೋಳಕಡಬಿ ಗ್ರಾಮವು 15 ನೂರು ಜನಸಂಖ್ಯೆಯನ್ನು ಹೊಂದಿದ್ದು ದಿನ ನಿತ್ಯ ಸರಕಾರಿ ವಾಹನ, ಖಾಸಗಿ ವಾಹನ, ಮೋಟರಸೈಕಲ್, ರೈತರಬಂಡಿ, ಶಾಲಾವಾಹನಗಳು, ದಿನನಿತ್ಯ ಈ ಹದಗೆಟ್ಟ ರಸ್ತೆಯ ಮೂಲಕ ಸಂಚರಿಸಲು ಹರಸಹಾಸ ಪಡುವಂತಾಗಿದೆ. ಮೇಲಾಗಿ ಸರಕಾರಿ ಆಸ್ಪತ್ರೆಗೆ ಗಭರ್ಿಣಿ ಸ್ತ್ರೀಯರನ್ನು ಸರಕಾರಿ 108 ಅಂಬ್ಯುಲನ್ಸ್ ವಾಹನದಲ್ಲಿ ಕರೆದೊಯ್ಯುವಾಗ ತಗ್ಗು ಗುಂಡಿಗಳು ಬಿದ್ದ ಈ ರಸ್ತೆಯ ಸಂಚರಿಸುವಾಗ ಗಭರ್ಿಣಿ ಸ್ತ್ರೀಯರ ಹೆರಿಗೆ ಪುಕ್ಸಟ್ಟೆ ಆಗುವದಂತೂ ಖಂಡಿತ. 

ಗ್ರಾಮದ ಜನತೆ ತೀರಾ ಬಡವರಿದ್ದು ಮೇಲಾಗಿ ರೈತಾಪಿಜನರು ಕೂಲಿ ಕಾಮರ್ಿಕರು ಹೆಚ್ಚಾಗಿದ್ದು ದಿನನಿತ್ಯ ನಗರ ಪ್ರದೇಶಗಳಾದ ಗೋಕಾಕ, ಯರಗಟ್ಟಿ, ಬೈಲಹೊಂಗಲ, ಖನಗಾಂವ, ಮುಂತಾದ ನಗರ ಪ್ರದೇಶಗಳಿಗೆ ಉದ್ಯೋಗ ಅರಸಿ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವುದು ಅನಿವಾರ್ಯವಾಗಿದೆ ಮತ್ತು ವಿದ್ಯಾಥರ್ಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಾಗೂ ತುತರ್ು ಚಿಕಿತ್ಸೆಗಾಗಿ ತೆಗ್ಗು ಗುಂಡಿಗಳಿಂದ ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವದು ಅನಿವಾರ್ಯತೆಯಲ್ಲಿ ಸಂಚರಿಸುವ ಪ್ರತಿಯೂಬ್ಬರು ಜನ ಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಹಿಡಿಶ್ಯಾಪ ಹಾಕುತ್ತಾ ತೆರಳುವ ದೃಶ್ಯ ಪ್ರತಿದಿನ ಕಾಣಬಹುದು. 

ಬೋಳಕಡಬಿ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಬಂದು ಇನ್ನಾದರು ಈ ಗ್ರಾಮಕ್ಕೆ ಸುಸಜ್ಜಿತವಾದ ರಸ್ತೆ ನಿಮರ್ಿಸಿ ಸುಗಮ ಸಂಚಾರ ಕಲ್ಪಿಸಿ ಕೊಡುತ್ತಾರೆಂದು ಕಾದು ನೋಡಬೇಕಾಗಿದೆ. ಈ ರಸ್ತೆ ದುರಸ್ತಿ ಮಾಡದಿದ್ದರೆ ಶೀಘ್ರದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಹೇಳಿಕೆ: ಸಿದ್ದಪ್ಪ ಮುಕ್ಕನ್ನವರ ಗ್ರಾಮದ ರೈತರು.